Tech Tips: ನೀವು ಸ್ಮಾರ್ಟ್‌ಫೋನ್‌ನಲ್ಲಿ ‘ಈ’ ವಿಡಿಯೋಗಳನ್ನು ನೋಡುತ್ತೀರಾ? ಹಾಗಾದರೆ ಒಮ್ಮೆ ಇದನ್ನು ಓದಿ

ಮೊಬೈಲ್ ಎಂಬ ಮಾಯಾವಿ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿ ಬಿಟ್ಟಿದೆ. ಹಾಗಾಗಿ, ಅರೆ ಕ್ಷಣವು ಮೊಬೈಲ್ ಅನ್ನು ಬಿಟ್ಟಿರ ಲಾಗದಷ್ಟು ಈ ಸಾಧನಕ್ಕೆ ಜನತೆ ಒಗ್ಗಿಕೊಂಡು ಬಿಟ್ಟಿದ್ದಾರೆ. ಕಾಲ ಬದಲಾದಂತೆ ಅನ್ವೇಷಣೆಯ ಫಲವಾಗಿ ತಂತ್ರಜ್ಞಾನದಲ್ಲಿ ಸಾಕಷ್ಟು ಮಾರ್ಪಾಡು ಗಳಾಗಿ ಅದೆಷ್ಟೋ ದೂರದಲ್ಲಿದ್ದರೂ ಒಂದು ಕರೆಯ ಮೂಲಕ ಎಲ್ಲರನ್ನು ಒಗ್ಗೂಡಿಸಲು ಮೊಬೈಲ್ ಎಂಬ ಸಾಧನ ನೆರವಾಗಿದೆ. ಮೊಬೈಲ್ ನಿಂದ ಎಷ್ಟು ಪ್ರಯೋಜನವಿದೆಯೋ ಅಷ್ಟೆ ಸಮಸ್ಯೆಗಳು ಕೂಡ ಇವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

 

ಹೌದು!! ಇಂದು ಮೊಬೈಲ್ ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ರೀತಿಯ ಚಿತ್ರಗಳನ್ನು ನೋಡುವುದು ಭಾರತದಲ್ಲಿ ಸಂಪೂರ್ಣವಾಗಿ ನಿಷೇಧ ಹೇರಿದ್ದರು ಕೂಡ ತೆರೆಮರೆಯಲ್ಲಿ ರಹಸ್ಯವಾಗಿ ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂಬುದು ಅಷ್ಟೆ ಸತ್ಯ!!

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್(Smartphone) ಬಳಕೆ ಮಾಡದವರೆ ವಿರಳ. ಒಂದು ಸಮೀಕ್ಷೆಯ ಅನುಸಾರ ಇಡೀ ಜಗತ್ತಿನಲ್ಲಿ ಇಂದು ಶೇ. 91 ರಷ್ಟು ಮಂದಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆಂದು ತಿಳಿದು ಬಂದಿದೆ. ಈ ಹಿಂದೆ ಕೇವಲ ಸಂವಹನಕ್ಕಾಗಿ ಮಾತ್ರ ಬಳಕೆಯಾಗುತ್ತಿದ್ದ ಸ್ಮಾರ್ಟ್​ಫೋನ್ ಈಗ ಮನರಂಜನೆಯ ಹೆಸರಿನಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಹರಿದಾಡುವ ಮೂಲ ಸಾಧನವಾಗಿದೆ. ಟೆಲಿಕಾಮ್ ಕಂಪೆನಿಗಳು ಕೂಡ ಮನರಂಜನೆಯ ಸಲುವಾಗಿ ಇಂಟರ್ನೆಟ್ ವೇಗವನ್ನು ಹೆಚ್ಚಿಸಿಕೊಂಡಿರುವುದರಿಂದ ಸ್ಮಾರ್ಟ್​ಫೋನ್ ಮೂಲಕ ಜನರು ವಿಡಿಯೋಗಳನ್ನು (Video) ಸುಲಭವಾಗಿ ಡೌನ್​ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ . ಹೀಗಾಗಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಕೂಡ ದಿನೇ ದಿನೇ ಏರಿಕೆಯಾಗುತ್ತಿದೆ.

ಭಾರತದಲ್ಲಿ ಈ ರೀತಿಯ ಚಿತ್ರಗಳನ್ನು ನೋಡುವುದು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರು ಕೂಡ (Ban) ಅನೇಕ ಜನರು ಇದನ್ನು ರಹಸ್ಯವಾಗಿ ವೀಕ್ಷಿಸುತ್ತಿದ್ದಾರೆ. ಈ ರೀತಿ ಅಶ್ಲೀಲ ಚಿತ್ರಗಳನ್ನು ನೋಡುವವರಿಗೆ ಅಚ್ಚರಿಯ ವಿಷಯವೊಂದು ಕಾದಿದೆ.

ಹೌದು!!!ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಅಶ್ಲೀಲ ಸಿನಿಮಾಗಳನ್ನು ವೀಕ್ಷಿಸಿದರೆ, ಅದರಿಂದ ಉಂಟಾಗುವ ತೊಂದರೆ ಬಗ್ಗೆ ತಿಳಿದರೆ ಬೆರಗಾಗುವುದು ಖಚಿತ.. ಅಶ್ಲೀಲ ಚಿತ್ರಗಳನ್ನು ಇಲ್ಲವೇ ವಿಡಿಯೋಗಳನ್ನು ವೀಕ್ಷಿಸುವುದು ಕೆಲವು ಜನರಿಗೆ ಚಟವಾಗಿ ಪರಿಣಮಿಸಿರುತ್ತದೆ. ಈ ರೀತಿ ಚಟ ಇದ್ದರೆ ವೀಡಿಯೋ ನೋಡುವ ಸಲುವಾಗಿ ಹಣವನ್ನು ಹೊಳೆಯಂತೆ ಸುರಿಯಲೂ ಕೂಡ ಯೋಚಿಸುವುದಿಲ್ಲ. ಆದರೆ ಇದೊಂದು ದೊಡ್ಡ ಸ್ಕ್ಯಾಮ್ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ದೇಶದಲ್ಲಿ ಈ ರೀತಿಯ ಅನೇಕ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದೆ. ಈ ರೀತಿ ಹಣ ಕೇಳಿ ಅಶ್ಲೀಲ ಚಿತ್ರವನ್ನು ವೀಕ್ಷಿಸುವಂತೆ ಪ್ರೇರೇಪಿಸುವವರು ನಿಮ್ಮ ಸ್ಮಾರ್ಟ್​ಫೋನ್​ ಒಳಗೆ ಅಡಗಿರುವ ಮಾಹಿತಿಗಳನ್ನು ಸುಲಭವಾಗಿ ಕದ್ದು , ನಿಮ್ಮ ಮೊಬೈಲ್​ಗೆ ಮಾಲ್‌ವೇರ್ ಅನ್ನು ಸೇರಿಸಬಹುದಾಗಿದೆ. ಇದರಿಂದ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುವ ಸಾಧ್ಯತೆ ಕೂಡ ದಟ್ಟವಾಗಿದೆ.

ಗೂಗಲ್ ಪ್ರತಿಯೊಬ್ಬರು ಇಂಟರ್ನೆಟ್ ಮೂಲಕ ಏನನ್ನು ಬ್ರೌಸ್ ಮಾಡುತ್ತಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುತ್ತದೆ. ನೀವು ಅಶ್ಲೀಲ ಪದಗಳ ಕುರಿತು ಸರ್ಚ್ ಮಾಡಿದರೆ ಇದರ ಆಧಾರದ ಮೇಲೆ ನೀವು ಯಾವುದೇ ಪೇಜ್ ತೆರೆದರೂ ಅದರಲ್ಲಿ ಅಶ್ಲೀಲ ಚಿತ್ರಗಳ ಕುರಿತು ಜಾಹೀರಾತುಗಳು ಕಂಡುಬರುತ್ತವೆ. ಹಾಗಾಗಿ, ನಿಮ್ಮ ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆಯ ಜೊತೆಗೆ ನಿಮ್ಮ ಮಾಹಿತಿಗಳ ಮೇಲೆ ಗೂಗಲ್ ಕಣ್ಣಿಟ್ಟಿರುತ್ತದೆ.

ನೀವು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಯಾವುದೇ ವಿಷಯದ ಕುರಿತು ಸರ್ಚ್ ಮಾಡಿದಾಗ ಅಥವಾ ಅಶ್ಲೀಲ ವಿಡಿಯೋವನ್ನು ವೀಕ್ಷಿಸುತ್ತಿದ್ದರೆ ಅದನ್ನು ಗುಪ್ತಚರ ಏಜೆನ್ಸಿಗಳು ಗಮನಿಸುತ್ತಿವೆ ಎಂಬುದು ನೆನಪಿನಲ್ಲಿ ಇಡಬೇಕಾಗುತ್ತದೆ. ಇದರಿಂದ ನಿಮಗೆ ಆಪತ್ತು ಉಂಟಾದರೂ ಕೂಡ ಅಚ್ಚರಿಯಿಲ್ಲ.

ಅನೇಕ ಬಾರಿ ಜನರು ಅಶ್ಲೀಲ ವೆಬ್‌ಸೈಟ್‌ಗಳಿಂದ ವಿಡಿಯೋಗಳನ್ನು ಡೌನ್‌ಲೋಡ್ ಮಾಡುವ ಸಂದರ್ಭದಲ್ಲಿ ಇದರ ಜೊತೆಗೆ ಬಳಕೆದಾರರ ಅರಿವಿಗೆ ಬಾರದಂತೆ ಮತ್ತೊಂದು ಫೈಲ್ ಕೂಡ ಡೌನ್​ಲೋಡ್ ಆಗಿರುತ್ತದೆ. ಅಶ್ಲೀಲ ವಿಡಿಯೋ ಜೊತೆಗೆ ಮಾಲ್‌ವೇರ್ ಫೈಲ್‌ ಕೂಡ ಡೌನ್​ಲೋಡ್ ಆದಾಗ ನಿಮ್ಮ ವೈಯಕ್ತಿಕ ಫೋಟೋಗಳನ್ನು ಮಾಹಿತಿಗಳನ್ನು ಕದಿಯಲಾಗುತ್ತದೆ. ಈ ಬಳಿಕ ನಿಮ್ಮನ್ನ ಬ್ಲ್ಯಾಕ್ ಮೇಲ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ, ಅಶ್ಲೀಲ ಚಿತ್ರ ಮತ್ತು ಅಶ್ಲೀಲ ವಿಡಿಯೋಗಳನ್ನು ನೋಡುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತದೆ.

ಮೊದ ಮೊದಲು ಕುತೂಹಲಕ್ಕೆ ನೋಡುವ ಕೇಳುವ ಅಶ್ಲೀಲ ವಿಚಾರಗಳು ಬರಬರುತ್ತಾ ವ್ಯಸನವಾಗಿ ಪರಿಣಮಿಸಿ ವ್ಯಕ್ತಿಯ ಭಾವೋದ್ರೇಕಕ್ಕೆ ಕಾರಣವಾಗಬಹುದು. ವಿಶೇಷವಾಗಿ ಹದಿ ಹರೆಯದವರಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಸಿಗರೇಟ್‍ನಂತಹ ಚಟಗಳಂತೆ ಅಶ್ಲೀಲ ಚಿತ್ರಗಳ ವೀಕ್ಷಣೆಯೂ ಒಂದು ಚಟವಾಗಿ ಪರಿರ್ವನೆಯಾಗಿ ತೊಂದರೆ ಉಂಟು ಮಾಡುತ್ತದೆ. ಹಾಗಾಗಿ ಈ ಬಗೆಯ ವಿಡಿಯೋಗಳನ್ನು ನೋಡುವುದು ನಿಲ್ಲಿಸಿದರೆ ಒಳಿತು. .

Leave A Reply

Your email address will not be published.