ಕೊನೆಗೂ ಮೌನ ಮುರಿದ ನಟಿ ರಶ್ಮಿಕಾ ಮಂದಣ್ಣ | ಕನ್ನಡ ಚಿತ್ರರಂಗದಿಂದ ಬ್ಯಾನ್‌ ಹಾಗೂ ಕಾಂತಾರ ಸಿನಿಮಾ ಬಗ್ಗೆ ನಟಿಯಿಂದ ಶಾಕಿಂಗ್‌ ಹೇಳಿಕೆ

ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಒಂದಲ್ಲ ಒಂದು ವಿಚಾರಕ್ಕೆ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಕಾಂತಾರ ಸಿನೆಮಾದ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ನ್ಯಾಷನಲ್ ಕ್ರಷ್ ಇತ್ತೀಚೆಗೆ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿ ಬಿಟ್ಟಿದ್ದರು. ಇದೀಗ ರಶ್ಮಿಕಾ ಕಾಂತರ ಸಿನಿಮಾ ವಿಚಾರದ ಕುರಿತಾಗಿ ಅಷ್ಟೆ ಅಲ್ಲದೆ ಆಕೆಯನ್ನು ಬ್ಯಾನ್‌ ಮಾಡುವ ವಿಚಾರವಾಗಿ ಮೌನ ಮುರಿದಿದ್ದಾರೆ.

 

ಹೌದು!!!..ಕನ್ನಡದ ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಚೆಲುವೆ ರಶ್ಮಿಕಾ ಮಂದಣ್ಣ ತೆಲುಗು , ತಮಿಳು, ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ತನ್ನ ಛಾಪು ಮೂಡಿಸಲು ಮುಂದಾಗಿದ್ದಾರೆ. ಆದರೆ ಇತ್ತೀಚೆಗೆ, ಕಾಂತಾರಾ ಚಿತ್ರದ ಕುರಿತು ಕಾಮೆಂಟ್ ಮಾಡಿದ್ದರಿಂದ ಕನ್ನಡಿಗರ ಕೋಪಕ್ಕೆ ತುತ್ತಾಗಿ ನೆಟ್ಟಿಗರ ಟ್ರೊಲಿಂಗ್ ವಿಚಾರವಾಗಿ ಹೊರ ಹೊಮ್ಮಿದ್ದಾರೆ.

ಈ ಹಿಂದೆ ಅನೇಕ ಬಾರಿ ಕನ್ನಡತಿಯಾದರೂ ಕೂಡ. ಕನ್ನಡದಲ್ಲಿ ಮಾತನಾಡದೇ ರಶ್ಮಿಕಾ ಟ್ರೋಲ್‌ ಆಗಿದ್ದು ಇದೆ. ಅಲ್ಲದೆ ಕಾಂತಾರಾ ಚಿತ್ರವನ್ನು ನೋಡಿದ್ದೀರಾ ಎಂದು ರಶ್ಮಿಕಾ ಅವರನ್ನು ಕೆಲದಿನಗಳ ಹಿಂದೆ ಮಾಧ್ಯಮದವರು ಕೇಳಿದಾಗ, ಸಿನಿಮಾ ವೀಕ್ಷಿಸಿಲ್ಲ ಎಂದು ಉತ್ತರಿಸಿದ್ದಾರೆ. ತನಗೆ ಮೊದಲನೇ ಸಿನಿಮಾದಲ್ಲಿ ಅವಕಾಶ ನೀಡಿದ ನಿರ್ದೇಶಕನ ಸಿನಿಮಾದ ಬಗ್ಗೆ ರಶ್ಮಿಕಾ ಮಾತ್ರ ತುಟಿಕ್ ಪಿಟಿಕ್ ಎನ್ನದೆ ವ್ಯಂಗ್ಯ ಮಾಡಿದ್ದರಿಂದ ಕನ್ನಡಿಗರು ಟ್ರೋಲ್ ಮಾಡಿದ್ದು ಮಾತ್ರವಲ್ಲ ರಶ್ಮಿಕಾ ಅವರನ್ನು ಬ್ಯಾನ್‌ ಮಾಡುವ ಕುರಿತಾದ ಊಹಾಪೋಹ ಕೂಡ ಕೇಳಿ ಬರುತ್ತಿತ್ತು.

ತನ್ನ ಮೇಲಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಿರಿಕ್ ಚೆಲುವೆ ಸ್ಪಷ್ಟಣೆ ನೀಡಿದ್ದು, ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಬಿಡುಗಡೆಯಾದ ಎರಡು ದಿನಗಳ ನಂತರ ಕಾಂತಾರ ಚಿತ್ರವನ್ನು ನೋಡಿದ್ದೀರಾ ಎಂದು ನನ್ನನ್ನು ಕೇಳಿದ್ದ ಸಂದರ್ಭ ನಾನು ಆಗ ಸಿನಿಮಾ ನೋಡದೆ ಇದ್ದುದರಿಂದ ಅದಕ್ಕೆ ನಾನು ಪ್ರಾಮಾಣಿಕವಾಗಿ ಉತ್ತರಿಸಿದ್ದೇನೆ. ಆದರೆ, ನಾನು ಇತ್ತೀಚೆಗೆ ಕಾಂತಾರ ಸಿನಿಮಾ ನೋಡಿದ್ದು, ಅಲ್ಲದೇ ಟೀಂಗೆ ಮೆಸೇಜ್‌ ಮಾಡಿ ಅಭಿನಂದಿಸಿದ್ದೇನೆ ಎಂದು ನ್ಯಾಷನಲ್ ಕ್ರಷ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಬ್ಯಾನ್‌ ವಿಚಾರವಾಗಿ ಪ್ರಶ್ನಿಸಿದಾಗ ನಮ್ಮ ಜೀವನದಲ್ಲಿ ಏನಾಗುತ್ತಿದೆ ಎಂದು ಜಗತ್ತಿಗೆ ತಿಳಿದಿಲ್ಲ ಎಂದು ಹೇಳಿಕೊಂಡಿದ್ದು ಅಷ್ಟೆ ಅಲ್ಲದೆ ನಾವು ಹೊರಗೆ ಅದನ್ನು ಹೇಳಲು ಕೂಡ ಸಾಧ್ಯವಿಲ್ಲ. ಆದರೆ ನನಗೆ ಕನ್ನಡ ಸಿನಿಮಾ ಮೇಲೆ ಪ್ರೀತಿ ಇದ್ದು, ಉಳಿದಿದ್ದು ಅವರಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ. ಇದರ ಜೊತೆಗೆ ಯಾರು ನನ್ನ ಬ್ಯಾನ್‌ ಮಾಡಿಲ್ಲ ಎಂಬುದಾಗಿ ಸಿನಿಮಾ ರಂಗದಲ್ಲಿ ತನ್ನ ಇರುವಿಕೆಯ ಬಗ್ಗೆ ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ.

Leave A Reply

Your email address will not be published.