Palmistry : ನೀವು ಎಷ್ಟು ವರ್ಷ ಬದುಕಬಲ್ಲಿರಿ ಎಂದು ಈ ಅಂಗೈ ರೇಖೆ ಮೂಲಕ ತಿಳಿಯಿರಿ!

ತಾಂತ್ರಿಕತೆಯಲ್ಲಿ ನಾವೆಷ್ಟೇ ಮುಂದುವರಿದರೂ ಕೂಡ ಅಂಗೈ ನೋಡಿ ಭವಿಷ್ಯ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇಂದಿಗೂ ಸಹಜವಾಗಿಯೇ ಇದೆ. ಜ್ಯೋತಿಷ್ಯ ಶಾಸ್ತ್ರದ ಭಾಗವಾಗಿರುವ ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಭವಿಷ್ಯದ ಆಗುಹೋಗುಗಳನ್ನು ಅರಿಯಬಹುದಾಗಿದ್ದೂ, ವ್ಯಕ್ತಿಯ ಸೋಲು,ಗೆಲುವು, ವಿಧ್ಯಾಭ್ಯಾಸ, ಉದ್ಯೋಗ ಹಾಗೂ ಹಣಕಾಸಿನ ಸ್ಥಿತಿಗತಿಗಳನ್ನು ಕೂಡ ತಿಳಿಯಬಹುದಾಗಿದೆ. ಆದರೆ ಇದೆಲ್ಲದರ ನಡುವೆ ನಾವು ಎಷ್ಟು ವರ್ಷ ಬದುಕಬಹುದು ಎಂಬ ಕುತೂಹಲವು ನಿಮ್ಮಲ್ಲಿರುತ್ತದೆ. ನಿಮ್ಮ ಕೈಯಲ್ಲಿರುವ ರೇಖೆಗಳನ್ನು ನೋಡಿ ನಿಮ್ಮ ವಯಸ್ಸನ್ನು ಅಂದಾಜಿಸಬಹುದು!!

ಹೌದು, ಮಣಿಕಟ್ಟಿನ ರೇಖೆಯನ್ನು ಬಹಳಷ್ಟು ಮಂದಿ ಗಮನಿಸಿರುತ್ತೇವೆ. ಆದರೆ, ಅದರ ಹಿಂದಿನ ಭವಿಷ್ಯದ ರಹಸ್ಯದ ಬಗ್ಗೆ ಗೊತ್ತೇ ಇರುವುದಿಲ್ಲ. ಹೇಗೆ ಹಸ್ತ ರೇಖೆಗಳು ಭವಿಷ್ಯವನ್ನು ಹೇಳುತ್ತವೆಯೋ ಹಾಗೆಯೇ ಮಣಿಕಟ್ಟಿನ ಭಾಗದಲ್ಲಿರುವ ರೇಖೆ ನಿಮ್ಮ ಹಲವು ಕೌತುಕಗಳನ್ನು ಬಿಚ್ಚಿಡುತ್ತವೆ. ಅಲ್ಲಿರುವ ನಾಲ್ಕು ರೇಖೆಗಳು ಹತ್ತು ಹಲವು ಸಂಗತಿಗಳನ್ನು ಹೇಳುತ್ತವೆ.

ಕೆಲವರಿಗೆ ಮಣಿಕಟ್ಟಿನಲ್ಲಿ ಒಂದೇ ರೇಖೆ ಇದ್ದರೆ ಇನ್ನು ಕೆಲವರಿಗೆ ಎರಡು, ಮೂರು, ನಾಲ್ಕು ಹೀಗೆ ರೇಖೆಗಳಿರುತ್ತವೆ. ಪ್ರತಿ ಸಾಲು 20-25 ವರ್ಷಗಳ ವಯಸ್ಸನ್ನು ಸೂಚಿಸುತ್ತದೆ. ಕೆಲವು ರೇಖೆಗಳು ಕಾಣುವಂತೆ ಸ್ಪಷ್ಟವಾಗಿದ್ದರೆ, ಕೆಲವು ಬಾರಿ ಅಸ್ಪಷ್ಟವಾಗಿರುತ್ತವೆ. ಹೆಚ್ಚು ರೇಖೆಗಳಿದ್ದರೆ ಜೀವಿತಾವಧಿ ಹೆಚ್ಚಿದೆ ಮತ್ತು ಕಡಿಮೆ ರೇಖೆ ಇದ್ದರೆ ಅಲ್ಪಾಯು ಎಂದು ಹೇಳಲಾಗುತ್ತದೆ.

ಒಬ್ಬ ವ್ಯಕ್ತಿಯ ಮಣಿಕಟ್ಟಿನ ಮೇಲೆ 1 ಮಣಿಬಂಧವನ್ನು ಹೊಂದಿದ್ದರೆ, ಆಗ ಅವನ ವಯಸ್ಸು 20- 25 ವರ್ಷಗಳು.ಎರಡು ಇದ್ದರೆ ಅದು 40-50 ರ ನಡುವೆ ಇರಬಹುದು. 3 ಸಾಲುಗಳಿದ್ದರೆ, ವ್ಯಕ್ತಿಯು 70 ವರ್ಷಗಳವರೆಗೆ ಬದುಕುತ್ತಾನೆ. ನಾಲ್ಕು ರೇಖೆ ಇದ್ದರೆ ಶತಾಯುಷಿ ಎಂದು ವಿಂಗಡಿಸಲಾಗಿದೆ.

ಈ ವಿಚಾರದ ಜೊತೆಗೆ ರೇಖೆಗಳ ಸ್ಪಷ್ಟತೆಯನ್ನು ಪರಿಗಣಿಸಲಾಗುತ್ತದೆ. ಮಣಿಬಂಧದ ಸಾಲುಗಳು ಎಲ್ಲೂ ತುಂಡಾಗದೆ ಸ್ಪಷ್ಟವಾಗಿದ್ದರೆ, ವ್ಯಕ್ತಿಯು ಆರೋಗ್ಯಕರ ಜೀವನವನ್ನು ನಡೆಸುತ್ತಾನೆ. ಈ ರೇಖೆಗಳು ಒಡೆದು ಅಥವಾ ತೆಳುವಾಗಿದ್ದರೆ ಅದು ಅನಾರೋಗ್ಯವನ್ನು ಸೂಚಿಸುತ್ತದೆ. ಅಂತಹ ವ್ಯಕ್ತಿಯು ಜೀವನದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮಹಿಳೆಯರಿಗೆ ಮಣಿಕಟ್ಟಿನ ಮೊದಲನೆ ರೇಖೆಯು ತುಂಡಾಗಿದ್ದರೆ ಅಥವಾ ವಕ್ರವಾಗಿದ್ದರೆ ಸಂತಾನೋತ್ಪತ್ತಿ ಸಮಸ್ಯೆ, ಪ್ರಸವದ ಸಮಯದಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಪುರುಷರಿಗೆ ಮೂತ್ರ ಸಂಬಂಧಿತ ಸಮಸ್ಯೆಯು ಕಾಡುತ್ತದೆ. ಮಣಿಬಂಧದ ಮೇಲೆ ದ್ವೀಪದಂತಹ ಮಂಗಳಕರ ಗುರುತು ಹಾಕಿದರೆ, ಆ ವ್ಯಕ್ತಿಗೆ ಹೆಚ್ಚಿನ ಗೌರವ ಮತ್ತು ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ.

Leave A Reply

Your email address will not be published.