ಯುಪಿಐ ಆಪ್ಗಳಿಗೆ ಸಂಬಂಧಿಸಿದಂತೆ RBI ನಿಂದ ಹೊಸ ರೂಲ್ಸ್!
ಆರ್ಬಿಐ ಫೋನ್ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ಹಲವು ಯುಪಿಐ ಆಪ್ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತರಲಿದ್ದು, ಈ ಮೂಲಕ ಗ್ರಾಹಕರಿಗೆ ಸುರಕ್ಷತೆ ಜೊತೆಗೆ ಸುಲಭ ಹಣ ಪಾವತಿ ವಿಧಾನವನ್ನು ಪರಿಚಯಿಸಲಿದೆ.
ಹೌದು, ಆರ್ಬಿಐ ಯುಪಿಐ ಆಪ್ಗಳನ್ನು ಬಳಸುವವರಿಗೆ ಹೊಸ ಫೀಚರ್ಸ್, ಸಿಂಗಲ್-ಬ್ಲಾಕ್-ಮತ್ತು-ಮಲ್ಟಿಪಲ್-ಡೆಬಿಟ್ ಫಂಕ್ಷನ್ ಅನ್ನು ಪರಿಚಯಿಸಲಿದೆ. ಈ ಮೂಲಕ ಯುಪಿಐನ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಮತ್ತು ಸೆಕ್ಯುರಿಟಿಗಳಲ್ಲಿನ ಹೂಡಿಕೆಗಳಿಗೆ ಪಾವತಿ ಮಾಡುವುದಕ್ಕೆ ಸುಲಭ ಅವಕಾಶ ನೀಡಲಿದೆ ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ.
ಆರ್ಬಿಐ ಹೇಳಿರುವಂತೆ ಯುಪಿಐ ಆಪ್ಗಳ ಮೂಲಕ ನೀವು ಇ-ಕಾಮರ್ಸ್, ಹೋಟೆಲ್ ಬುಕಿಂಗ್, ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ, ಇದಕ್ಕಾಗಿಯೇ ಒಂದಿಷ್ಟು ಹಣವನ್ನು ಪೂರ್ವ ನಿರ್ಧರಿತವಾಗಿ ಒಂದೆಡೆ ಇಡಲಿದೆ. ಇದರಿಂದ ನೀವು ಸಕಾಲಿಕ ಪಾವತಿಗಳನ್ನು ಮಾಡಬಹುದಾಗಿದೆ. ಆದರೆ ಸರಕುಗಳು ಅಥವಾ ಸೇವೆಗಳ ನಿಜವಾದ ವಿತರಣೆಯವರೆಗೆ ಹಣವು ಗ್ರಾಹಕರ ಖಾತೆಯಲ್ಲಿಯೇ ಇರಲಿದೆ ಅನ್ನೊದು ಆರ್ಬಿಐ ಗವರ್ನರ್ ಅವರ ವಾದವಾಗಿದೆ.
ಡಿಜಿಟಲ್ ಪಾವತಿ ವ್ಯವಸ್ಥೆ ಬಳಸುವವರಿಗೆ ಇದು ಅನುಕೂಲಕರವಾಗಿದ್ದು, ಇದರಿಂದ ಸಿಂಗಲ್ ಬ್ಲಾಕ್ ಮತ್ತು ಮಲ್ಟಿಪಲ್ ಡೆಬಿಟ್ ಅನ್ನು ಬಹಳ ವಿಶ್ವಾಸಯುತವಾಗಿ ನಡೆಸಬಹುದಾಗಿದೆ. ಕಡ್ಡಾಯವಾಗಿ ನೀವು ಮಾಡಲೇಬೇಕಾದ ಪಾವತಿಗಳಿಗಾಗಿ ಒಂದಿಷ್ಟು ಹಣವನ್ನು ತೆಗೆದಿರಿಸಲು ಇದು ಸಹಾಯಮಾಡಲಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಇದರಿಂದ ವಹಿವಾಟುಗಳನ್ನು ನಡೆಸುವ ಗ್ರಾಹಕರಿಗೆ ಹೆಚ್ಚಿನ ನಂಬಿಕಯನ್ನು ಉಳಿಸಲು ಅವಕಾಶ ನೀಡಲಿದೆ.
ಅಂದರೆ ಇ-ಕಾಮರ್ಸ್ ಖರೀದಿಗಳು, ಹೋಟೆಲ್ ಬುಕಿಂಗ್ ಅಥವಾ ಸೆಕ್ಯುರಿಟಿಗಳಲ್ಲಿನ ಹೂಡಿಕೆಗಳಂತಹ ಸರಕು ಮತ್ತು ಸೇವೆಗಳ ವಿತರಣೆಗಳಿಗೆ ಪಾವತಿ ಮಾಡಲು ಇದು ಸಹಾಯ ಮಾಡಲಿದೆ. ಇದಕ್ಕಾಗಿಯೇ ‘ಸಿಂಗಲ್-ಬ್ಲಾಕ್-ಮತ್ತು-ಮಲ್ಟಿಪಲ್ ಡೆಬಿಟ್’ ಫೀಚರ್ಸ್ ನೀಡಲಾಗಿದೆ. ಇದರ ಮೂಲಕ ವಹಿವಾಟುಗಳನ್ನು ನಡೆಸುವಾಗ ಗ್ರಾಹಕರು ಹೆಚ್ಚಿನ ವಿಶ್ವಾಸವನ್ನು ಹೊಂದಿರುತ್ತಾರೆ. ಇದಲ್ಲದೆ ಆರ್ಬಿಐನ ರಿಟೇಲ್ ಡೈರೆಕ್ಟ್ ಯೋಜನೆಯನ್ನು ಬಳಸಿಕೊಂಡು ಸರ್ಕಾರಿ ಭದ್ರತೆಗಳನ್ನು ಖರೀದಿಸಲು ಈ ಫೀಚರ್ಸ್ ಸಹಾಯಕವಾಗಲಿದೆ ಎಂದು ಗವರ್ನರ್ ಹೇಳಿದ್ದಾರೆ.