Post Office Jobs: ಅಂಚೆ ಇಲಾಖೆಯಲ್ಲಿದೆ ಕೆಲಸ ಖಾಲಿ ಇದೆ | 8 ನೇ ತರಗತಿ ಪಾಸಾದವರಿಗೆ ಆದ್ಯತೆ | ತಿಂಗಳಿಗೆ 63,000 ಸಂಬಳ
India Post Recruitment 2023: ಕೇಂದ್ರ ಸರ್ಕಾರದ ಕೆಲಸ ಮಾಡಲು ಯಾರಿಗಾದರೂ ಇಚ್ಛೆ ಇದ್ದರೆ ಈ ಕೆಲಸ ಅವರಿಗೆ ಮೀಸಲು. ಅಂದ ಹಾಗೆ ಎಲ್ಲರಿಗೂ ತಿಳಿದಿರುವ ಹಾಗೆ ಸರಕಾರಿ ಕೆಲಸ ಸಿಕ್ಕಿತ್ತ ಅಂದರೆ ಸೆಟಲ್ ಅಂತಾನೇ ಅರ್ಥ. ಅದರಲ್ಲೂ ಅಂಚೆ ಇಲಾಖೆಯಲ್ಲಿ ಕೆಲಸ ಸಿಕ್ತು ಅಂದ್ರೆ ಅವರ ಲೈಫ್ ಸೆಟಲ್ ಆದಂತೆ ಅರ್ಥ. ಅಂದ ಹಾಗೆ ಭಾರತೀಯ ಅಂಚೆ ಇಲಾಖೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಅಂದ ಹಾಗೆ ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಮಿಳುನಾಡಿನ ಚೆನ್ನೈನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ indiapost.gov.in ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ : ಡಿಸೆಂಬರ್ 8, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 9, 2023
ಹುದ್ದೆಯ ಮಾಹಿತಿ ಇಲ್ಲಿದೆ: ಎಂ.ವಿ ಮೆಕ್ಯಾನಿಕ್- 4 ಹುದ್ದೆ, ಎಂ.ವಿ ಎಲೆಕ್ಟ್ರಿಷಿಯನ್-1 ಹುದ್ದೆ, ಕೂಪರ್ & ಟಿನ್ಸ್ಮಿತ್ (ನುರಿತ)-1 ಹುದ್ದೆ, ಅಪ್ಹೋಲ್ಸ್ಟರ್ (ನುರಿತ)- 1 ಹುದ್ದೆ. ಒಟ್ಟು 7 ಹುದ್ದೆಗಳು ಖಾಲಿ ಇವೆ.
ಶೈಕ್ಷಣಿಕ ಅರ್ಹತೆ: ಭಾರತೀಯ ಅಂಚೆ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 8ನೇ ತರಗತಿ ಪಾಸಾಗಿರಬೇಕು.
ವಯೋಮಿತಿ : ಭಾರತೀಯ ಅಂಚೆ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜುಲೈ, 01, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.
ಒಬಿಸಿ ಅಭ್ಯರ್ಥಿಗಳಿಗೆ- 3 ವರ್ಷ, ಎಸ್ಸಿ ಅಭ್ಯರ್ಥಿಗಳಿಗೆ- 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಸಂಬಳ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 19,900-63,200 ರೂ. ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ : 100 ರೂ. ಪರೀಕ್ಷೆ ಶುಲ್ಕ- 400 ರೂ. ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಅರ್ಜಿ ಶುಲ್ಕ ಪಾವತಿಸುವ ಬಗೆ-IPO/UCR ರೆಸಿಪ್ಟ್
ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಹಾಗೂ ಟ್ರೇಡ್ ಟೆಸ್ಟ್ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕು. ಸೀನಿಯರ್ ಮ್ಯಾನೇಜರ್(JAG), ಮೇಲ್ ಮೋಟಾರ್ ಸರ್ವೀಸ್, ನಂ.-37, ಗ್ರೀಮ್ಸ್ ರಸ್ತೆ, ಚೆನ್ನೈ-600006