Baba Vanga: ಮಕ್ಕಳ ಜನನ ಲ್ಯಾಬ್‌ನಲ್ಲಿ | ಬಂದೇ ಬಿಡ್ತು 2023ರ ‘ಬಾಬಾ ವಂಗಾ’ ಹೇಳಿದ ಭಯಾನಕ ಭವಿಷ್ಯ!

ಭವಿಷ್ಯವಾಣಿ ಹೇಳುವ ಬಾಬಾ ವಂಗಾ ಅವರು 2023 ರಲ್ಲಿ, ದೊಡ್ಡ ರಾಷ್ಟ್ರ ಮಾನವರ ಮೇಲೆ ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಯನ್ನು ಮಾಡಬಹುದು. ಇದು ಸಾವಿರಾರು ಸಾವುಗಳಿಗೆ ಕಾರಣವಾಗಬಹುದು ಎಂದು ಭಯಾನಕ ಭವಿಷ್ಯವಾಣಿ ಹೇಳಿದ್ದಾರೆ. ಬಾಬಾ ವಂಗಾ ಅವರ ಭವಿಷ್ಯವಾಣಿಗಳು ನಿಜವಾಗಿದೆ. ಬಾಬಾ ವಂಗಾ ಅವರು ಎರಡನೇ ಮಹಾಯುದ್ಧದಿಂದ 1996ರವರೆಗೆ, ಅಂದರೆ ಸಾಯುವವರೆಗೂ ಭವಿಷ್ಯವಾಣಿ ಹೇಳುವವರೆಗೂ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಬಲ್ಗೇರಿಯನ್ ದೃಷ್ಟಿಹೀನ ಬಾಬಾ ವಂಗಾ ಭವಿಷ್ಯವಾಣಿಗಳಿಂದ ಹೆಸರುವಾಸಿಯಾಗಿದ್ದಾರೆ.

ಬಾಬಾ ವಂಗಾ ತನ್ನ ಅನುಯಾಯಿಗಳ ಬಳಿ 5079 ರವರೆಗೆ ಏನೆಲ್ಲಾ ನಡೆಯಬಹುದು ಎಂಬ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗುತ್ತದೆ. 9/11 ರಿಂದ ಡೊನಾಲ್ಡ್ ಟ್ರಂಪ್ ಪ್ರಧಾನಿಯಾಗುವವರೆಗೆ ಬಾಬಾ ವಂಗಾ ಸೇರಿದಂತೆ ಅವರು ನುಡಿದ ಅನೇಕ ಭವಿಷ್ಯ ನಿಜವಾಗಿದೆ ಎನ್ನಲಾಗುತ್ತದೆ.

2022ರಲ್ಲಿ ಬಾಬಾ ವಂಗಾ ಅವರು ಭವಿಷ್ಯ ನುಡಿದಿದ್ದರು. ಹೀಗಿರುವಾಗ ಅವರು 2023ರ ಬಗ್ಗೆಯೂ ಕೆಲ ಭವಿಷ್ಯ ನುಡಿದಿದ್ದಾರೆ. ಆದರೆ ಅವುಗಳಲ್ಲಿ ಎಷ್ಟು ನಿಜವಾಗಲಿದೆ ಎಂಬುದು ಮುಂಬರುವ ವರ್ಷದಲ್ಲಿ ತಿಳಿಯಲಿದೆ.

2023 ರ ಬಗ್ಗೆ ಬಾಬಾ ವಂಗಾ ನುಡಿದ ಅತ್ಯಂತ ಆತಂಕಕಾರಿ ಭವಿಷ್ಯವಾಣಿಯೆಂದರೆ ಸೌರ ಚಂಡಮಾರುತ ವಿನಾಶವನ್ನು ಉಂಟುಮಾಡಬಹುದೆಂಬುವುದು, ಸೌರ ಚಂಡಮಾರುತ ಎಂದರೆ ಸೂರ್ಯನಿಂದ ಹೊರಹೊಮ್ಮುವ ಶಕ್ತಿಯ ಸ್ಫೋಟಗಳು, ಇದರಿಂದಾಗಿ ಅನೇಕ ರೀತಿಯ ಅಪಾಯಕಾರಿ ವಿಕಿರಣಗಳು ಭೂಮಿಯ ಮೇಲೆ ಬೀಳುತ್ತವೆ. ಅವುಗಳ ಪರಿಣಾಮವು ಶತಕೋಟಿ ಅಣುಬಾಂಬ್‌ಗಳಂತೆ ಶಕ್ತಿಯುತವಾಗಿರುತ್ತದೆ.

ಇಷ್ಟು ಮಾತ್ರವಲ್ಲದೇ, ಇದರ ಹೊರತಾಗಿ ಏಲಿಯನ್ ಗಳು ಭೂಮಿಗೆ ಬರಬಹುದು, ಜಗತ್ತಿನಲ್ಲಿ ಕತ್ತಲೆ ಆವರಿಸುತ್ತದೆ, ಪರಿಣಾಮವಾಗಿ ಮುಂದಿನ ವರ್ಷ ಅನ್ಯಗ್ರಹ ಜೀವಿಗಳು ಭೂಮಿಗೆ ಬಂದರೆ ಲಕ್ಷಾಂತರ ಜನರು ಸಾಯುತ್ತಾರೆ ಎಂದು ಅವರು ಹೇಳಿದ್ದಾರೆ.

ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2023 ರಲ್ಲಿ ಪ್ರಯೋಗಾಲಯಗಳಲ್ಲಿ ಮಾನವ ಶಿಶುಗಳನ್ನು ಬೆಳೆಸಬಹುದು. ವಿಜ್ಞಾನದ ನಿರಂತರ ಪ್ರಗತಿಯಿಂದಾಗಿ, ಪ್ರಯೋಗಾಲಯದಲ್ಲಿ ಶಿಶುಗಳು ಹುಟ್ಟುವ ಪರಿಕಲ್ಪನೆಯು ಬಾಬಾ ವಂಗಾ ಅವರ ಭವಿಷ್ಯವಾಣಿಯಲ್ಲಿ ಸೇರಿದೆ.

2023 ರ ಬಾಬಾ ವಂಗಾ ಅವರ ಭವಿಷ್ಯವಾಣಿಯೆಂದರೆ ಸೂರ್ಯನ ಸುತ್ತ ಸುತ್ತುತ್ತಿರುವ ಭೂಮಿಯು 2023ರಲ್ಲಿ ತನ್ನ ಮಾರ್ಗವನ್ನು ಬದಲಾಯಿಸಬಹುದು. ನಮ್ಮ ಗ್ರಹವು ಸೂರ್ಯನ ಸುತ್ತ ಸುತ್ತುತ್ತಿರುವಾಗ ಪ್ರತಿ ವರ್ಷ 584 ಮಿಲಿಯನ್ ಮೈಲುಗಳಷ್ಟು ದೂರವನ್ನು ಪ್ರಯಾಣಿಸುತ್ತದೆ. ಇದು ಸಂಪೂರ್ಣ ವೃತ್ತಾಕಾರದ ಬದಲಿಗೆ ಅಂಡಾಕಾರದ ಪ್ರಯಾಣವಾಗಿದೆ. ಇದರಿಂದಾಗಿ ಇತರ ಗ್ರಹಗಳ ಗುರುತ್ವಾಕರ್ಷಣೆಯ ಬಲದಿಂದ ಪ್ರಭಾವಿತವಾಗಿರುತ್ತದೆ. ಅಂದರೆ ಭೂಮಿಯ ಕಕ್ಷೆಯಲ್ಲಿ ಬದಲಾವಣೆ ಆಗಬಹುದು ಎಂದು ತಮ್ಮ ಭವಿಷ್ಯವಾಣಿಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.