ಸಂಗೀತ ಪ್ರಿಯರಿಗೆ ಸಿಹಿ ಸುದ್ದಿ: ಫಿಲಿಪ್ಸ್ ಬಿಡುಗಡೆಗೊಳಿಸಿದೆ ಎರಡು ಹೊಸ ಸೌಂಡ್ ಬಾರ್!!
ಪ್ರಸಿದ್ದ ಫಿಲಿಪ್ಸ್ ಕಂಪನಿ ತನ್ನ ಕಂಪನಿಯಿಂದ ಸ್ಮಾರ್ಟ್ಟಿವಿ, ಆಡಿಯೋ ಆ್ಯಕ್ಸಸರೀಸ್, ಸೌಂಡ್ಬಾರ್ಗಳನ್ನು ಬಿಡುಗಡೆ ಮಾಡಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಫಿಲಿಪ್ಸ್ ಕಂಪನಿಯು ಎರಡು ಸೌಂಡ್ಬಾರ್ಗಳನ್ನು ಬಿಡುಗಡೆ ಮಾಡುತ್ತಿದೆ. ಹೌದು!!!.. ಇದೀಗ, ಪ್ರಸಿದ್ದ ಫಿಲಿಪ್ಸ್ ಕಂಪನಿ ತನ್ನಬ್ರಾಂಡ್ ಮೂಲಕ 2 ಸೌಂಡ್ಬಾರ್ಗಳನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಫಿಲಿಪ್ಸ್ TAB8947 3.1.2 CH ಮತ್ತು TAB7807 3.1 CH ಸೌಂಡ್‌ಬಾರ್ ಎಂದು ಹೆಸರಿಡಲಾಗಿದ್ದು, ಇದು ವಯರ್‌ಲೆಸ್ ಕನೆಕ್ಟಿವಿಟಿ ಫೀಚರ್ಸ್ ಅನ್ನು ಹೊಂದಿದೆ .
ಮನಸ್ಸಿಗೆ ಉಲ್ಲಾಸದ ಜೊತೆಗೆ ಕಿವಿಗೆ ಇಂಪನ್ನು ನೀಡುವ ಮ್ಯೂಸಿಕ್ (Music) ಅನ್ನು ಬಯಸದೆ ಇರುವವರೇ ವಿರಳ. ಎಲ್ಲೇ ಹೋದರೂ ಬಂದರೂ ಮೊಬೈಲ್ ನಲ್ಲಿ ಹಾಡು ಜೋರಾಗಿ ಕೇಳುವಂತೆ ಲೌಡ್ ಸ್ಪೀಕರ್ ನಲ್ಲಿ ಇಡುವುದು ವಾಡಿಕೆ. ಇಲ್ಲವೇ ಹಾಡು, ಸಿನೆಮಾಗಳನ್ನು ನೋಡಬೇಕಾದರೆ ಇಯರ್ಫೋನ್ (Earphone) ಅಥವಾ ಇಯರ್ ಬಡ್ಸ್ (Earbuds) ಅನ್ನು ಕನೆಕ್ಟ್ ಮಾಡಿಕೊಂಡು ನೋಡುವುದು ಕಾಮನ್ .. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸೌಂಡ್ ಬಾರ್ಗಳನ್ನು ಉಪಯೋಗಿಸಲು ಶುರು ಮಾಡಿದ್ದಾರೆ. ಈ ಸೌಂಡ್ಬಾರ್ಗಳ ಮೂಲಕ (Soundbar) ಮೊಬೈಲ್ ಮತ್ತು ಟಿವಿಗೂ ಎರಡಕ್ಕೂ ಕನೆಕ್ಟ್ ಮಾಡಬಹುದಾದ ವಿಶೇಷತೆಯನ್ನು ಒಳಗೊಂಡಿರುವುದರಿಂದ ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಒಳಗೊಂಡಿವೆ.
ಫಿಲಿಪ್ಸ್ TAB7807 3.1 CHಫಿಲಿಪ್ಸ್ TAB7807 3.1 CH ಸೌಂಡ್‌ಬಾರ್ 3.1-ಚಾನೆಲ್ ಅನ್ನು ಹೊಂದಿದ್ದು, ಆದರೆ ಇದು 6 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಸಂಪೂರ್ಣ ಸಿಸ್ಟಮ್‌ಗೆ ವಯರ್‌ಲೆಸ್ ಮೂಲಕ ಕನೆಕ್ಟ್ ಮಾಡುವ 8-ಇಂಚಿನ ಸಬ್ ವೂಫರ್ ಅನ್ನು ನೀಡಲಾಗಿದ್ದು, ಈ ಫಿಲಿಪ್ಸ್ ಸೌಂಡ್‌ಬಾರ್‌ನ ಎರಡೂ ತುದಿಯಲ್ಲಿ ಎರಡು ಹೆಚ್ಚುವರಿ ಸ್ಪೀಕರ್‌ಗಳನ್ನು ನೀಡಲಾಗಿದೆ ಎನ್ನಲಾಗುತ್ತಿದೆ.
ಫಿಲಿಪ್ಸ್ನ ಈ ಸೌಂಡ್‌ಬಾರ್ ಡಾಲ್ಬಿ ಅಟ್ಮಾಸ್ ಅನ್ನು ಬೆಂಬಲಿಸುವುದರಿಂದ ಇದರ ಮೂಲಕ ಉತ್ತಮ ಗುಣಮಟ್ಟದ ಆಡಿಯೋ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಫಿಲ್ಮ್. ನೋಡುವಾಗ ಅತ್ಯುತ್ತಮವಾದ ಅನುಭವವನ್ನು ಪಡೆದುಕೊಳ್ಳುವಂತಹ ಫೀಚರ್ಸ್ ಅನ್ನು ಇದು ಹೊಂದಿದೆ..
ಫಿಲಿಪ್ಸ್ TAB8947 3.1.2 CH ಸೌಂಡ್‌ಬಾರ್‌ನ ವಿಶೇಷತೆ ಗಮನಿಸಿದರೆ:
ಫಿಲಿಪ್ಸ್ TAB8947 3.1.2 CH ಸೌಂಡ್‌ಬಾರ್ 8 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್ ಅನ್ನು ಹೊಂದಿದ್ದು, ಇದು 3.1.2 ಚಾನೆಲ್‌ಗಳನ್ನು ಮತ್ತು 8-ಇಂಚಿನ ಸಬ್ ವೂಫರ್ ಅನ್ನು ಹೊಂದಿರಲಿದೆ. ಇದರ ಜೊತೆಗೆ ಡಾಲ್ಬಿ ಅಟ್ಮೋಸ್ ಬೆಂಬಲವನ್ನು ಹೊಂದಿರುವುದರಿಂದ ಉತ್ತಮ ಸೌಂಡ್ ಅನುಭವವನ್ನು ಒದಗಿಸುತ್ತದೆ. ಈ ಸೌಂಡ್ಬಾರ್ನಲ್ಲಿ ಕೇವಲ ಒಂದು ರಿಮೋಟ್ ಕಂಟ್ರೋಲ್ ಮೂಲಕ EQ ಮೋಡ್‌ಗಳು, ಬಾಸ್, ಟ್ರೆಬಲ್ ಮತ್ತು ವಾಲ್ಯೂಮ್ ಸೆಟ್ಟಿಂಗ್‌ಗಳನ್ನು ಸೆಟ್ ಮಾಡಬಹುದಾಗಿದೆ.
ಇನ್ನು ಫಿಲಿಪ್ಸ್ TAB8947 3.1.2 CH ಸೌಂಡ್‌ಬಾರ್ ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್ ಸಿರಿ ಗೆ ಬೆಂಬಲವನ್ನು ನೀಡುವುದಲ್ಲದೆ, ನೀವು ಕ್ರೋಮಾಕಾಸ್ಟ್ ಮತ್ತು ಏರ್‌ಪ್ಲೇ ಡೌನ್ಲೋಡ್ ಮಾಡಿಕೊಂಡು ನಿಮ್ಮ ಫೋನ್‌ನಿಂದ ಯಾವುದನ್ನು ಬೇಕಾದರೂ ಪ್ಲೇ ಮಾಡಬಹುದಾಗಿದ್ದು, ಹಾಗೆಯೇ HDMI eARC ನೊಂದಿಗೆ, ಟಿವಿ ಗೆ ಕನೆಕ್ಟ್ ಮಾಡಿದಾಗ ಟಿವಿ ರಿಮೋಟ್ ಮೂಲಕ ಸೌಂಡ್‌ಬಾರ್ ಕಂಟ್ರೋಲ್ ಮಾಡಬಹುದಾಗಿದೆ. ಇನ್ನು ಈ ಸೌಂಡ್‌ಬಾರ್ ಕ್ಲಿಯರ್ ಸೌಂಡ್ ಮಾತ್ರವಲ್ಲದೆ ಹೆಚ್ಚಿನ ಬಾಸ್‌ಅನ್ನು ಕೂಡ ಹೊಂದಿರಲಿದೆ.
ಹಾಗೆಯೇ ರೆಸಲ್ಯೂಶನ್ ನಷ್ಟವಿಲ್ಲದೆ 4K ಪಾಸ್-ಥ್ರೂ ಅನ್ನು ಅನುಮತಿಸುತ್ತದೆ .ಇದಷ್ಟೇ ಅಲ್ಲದೇ, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಝೀ 5 ನಂತಹ ಒಟಿಟಿ ಸೇವೆಗಳಲ್ಲಿ ಕೂಡ ಡಾಲ್ಬಿ ಅಟ್ಮೋಸ್ ಅನ್ನು ಕಾರ್ಯನಿರ್ವಹಿಸುತ್ತದೆ.
ಭಾರತದಲ್ಲಿ ಫಿಲಿಪ್ಸ್ TAB8947 3.1.2 CH ಸೌಂಡ್‌ಬಾರ್‌ನ ಬೆಲೆ 35,990ರೂಪಾಯಿ ಆಗಿದ್ದು, ಇದೆ ರೀತಿ, ಫಿಲಿಪ್ಸ್ TAB7807 3.1 CH ಸೌಂಡ್‌ಬಾರ್‌ನ ಬೆಲೆ 28,990ರೂಪಾಯಿ ಆಗಿದೆ. ಈ ಎರಡು ಸೌಂಡ್‌ಬಾರ್‌ಗಳು ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್ ಸ್ಟೋರ್‌ಗಳಲ್ಲಿ ಮತ್ತು ಕಂಪೆನಿಯ ಶೋರೂಂಗಳಲ್ಲಿ ಖರೀದಿ ಮಾಡಬಹುದಾಗಿದೆ.