ಈ ಹೊಸ ಸ್ಮಾರ್ಟ್‌ವಾಚ್ ಬೆಲೆ ಕೇವಲ 1,999 ರೂ.! ಇದರ ವಿನ್ಯಾಸ ಆಪಲ್ ವಾಚ್ ನಂತಿದೆ!!! ಇದಕ್ಕೆ ಖಂಡಿತ ಮಾರು ಹೋಗ್ತೀರ!
ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಬಿಗುತ್ತಿದೆ. ಪ್ರಸ್ತುತ ಈಗಿನ ಟ್ರೆಂಡಿ ಆಗಿರುವ ಸ್ಮಾರ್ಟ್‌ವಾಚ್ ಅನ್ನು ಆಪಲ್ ವಾಚ್ ಹೋಲುವಂತಹ ವಿನ್ಯಾಸದಲ್ಲಿ ತರಲು ಕಂಪೆನಿ ಸಾಕಷ್ಟು ಪ್ರಯತ್ನಿಸುತ್ತಿದೆ.
ಹೌದು ಹೆಸರಾಂತ ಸ್ಮಾರ್ಟ್‌ವಾಚ್ ತಯಾರಕ ಬ್ರ್ಯಾಂಡ್ ಪೆಬಲ್ (Pebble) ಭಾರತದಲ್ಲಿ ಆಪಲ್ ವಾಚ್ ವಿನ್ಯಾಸವಿರುವ ಹೊಸ ಬ್ಲೂಟೂತ್ ಕಾಲಿಂಗ್ ಬೆಂಬಲದ ಸ್ಮಾರ್ಟ್‌ವಾಚ್ ಒಂದನ್ನು ಬಿಡುಗಡೆ ಮಾಡಿದೆ ಕೈಗೆಟಕುವ ಬೆಲೆಯಲ್ಲಿ ದುಬಾರಿ ಬೆಲೆಯ ಪ್ರೀಮಿಯಂ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಸ್ಮಾರ್ಟ್‌ವಾಚ್‌ಗೆ ‘ಪೆಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್’ ಎಂದು ಹೆಸರಿಸಲಾಗಿದ್ದು, ಇದು 100 ಕ್ಕೂ ಹೆಚ್ಚು ವಾಚ್ ಫೇಸ್, ಬ್ಲೂಟೂತ್ ಹ್ಯಾಂಡ್ಸ್-ಫ್ರೀ ಸ್ಪೀಕರ್ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
‘ಪೆಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್’ ವಿಶೇಷತೆಗಳು :
- ಆಪಲ್ ವಾಚ್‌ನಂತಹದ್ದೇ ಅತ್ಯಾಕರ್ಷಕ ನೋಟ ಹೊಂದಿರುವ ಹೊಸ ಪೆಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್ ಕನಿಷ್ಠ ಬೆಜೆಲ್‌ಗಳೊಂದಿಗೆ 1.87 ಇಂಚಿನ IPS 2.5D ಕರ್ವ್ಡ್ ಡಿಸ್‌ಪ್ಲೇ ಹೊಂದಿದೆ.
- ಈ ಡಿಸ್‌ಪ್ಲೇಯು ಚದರ ಡಯಲ್ ಅಥವಾ ಸ್ಟ್ರಾಪ್ ವಿನ್ಯಾಸದಲ್ಲಿದ್ದು, ವಾಚ್ ಬಲಭಾಗದಲ್ಲಿ ಸ್ಪಿನ್ ಮಾಡುವ ರೀತಿಯ ಬಟನ್ ಸಹ ನೀಡಲಾಗಿದೆ.
- ಈ ಸ್ಮಾರ್ಟ್‌ವಾಚ್ ಅನ್ನು ಆಪಲ್ ವಾಚ್ ಹೋಲುವಂತಹ ವಿನ್ಯಾಸದಲ್ಲಿ ತರಲು ಕಂಪೆನಿ ಸಾಕಷ್ಟು ಪ್ರಯತ್ನಿಸಿದಂತೆ ಕಾಣುತ್ತದೆ.
- ಒಂದು ಪೂರ್ಣ ಚಾರ್ಜ್‌ನಲ್ಲಿ 5 ದಿನಗಳವರೆಗೆ ಹಾಗೂ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 7 ದಿನಗಳವರೆಗೆ ಕೆಲಸ ಮಾಡಲಿರುವ ಈ ಸ್ಮಾರ್ಟ್‌ವಾಚ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಹೊಂದಿದೆ.
- ಈ ಸಾಧನವನ್ನು ಈಜುವ ವೇಳೆಯಲ್ಲಿ ಸಹ ಬಳಸಬಹುದು ಎಂದು ಕಂಪೆನಿ ತಿಳಿಸಿದೆ.
- ಹೊಸ ಪೆಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್ 100 ಕ್ಕೂ ಹೆಚ್ಚು ಕ್ಲೌಡ್-ಆಧಾರಿತ ವಾಚ್ ಫೇಸ್‌ಗಳೊಂದಿಗೆ ಹೊಂದಾಣಿಕೆ ಹೊಂದಿದೆ.
- ಬ್ರ್ಯಾಂಡ್‌ನ ಸ್ವಂತ ಕಂಪ್ಯಾನಿಯನ್ ಅಪ್ಲಿಕೇಶನ್ ಬಳಸಿಕೊಂಡು ಎಲ್ಲಾ ವಾಚ್ ಫೇಸ್‌ಗಳಿಗೆ ಪ್ರವೇಶಪಡೆಯಬಹುದಾಗಿದೆ.
- ಪೆಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್‌ನಲ್ಲಿಮ ಹಲವು ಸ್ಪೋರ್ಟ್ಸ್ ಮೋಡ್ ಆಯ್ಕೆಗಳು ಫಿಟ್‌ನೆಸ್ ಮತ್ತು ಹೊರಾಂಗಣ ಚಟುವಟಿಕೆಗಳ ಮೇಲೆ ಕೆಲಸ ಮಾಡಲಿವೆ.
- ಈ ವಾಚ್ ರಕ್ತದ ಆಮ್ಲಜನಕ, ಹೆಜ್ಜೆ ಮತ್ತು ನಿದ್ರೆಯ ಟ್ರ್ಯಾಕಿಂಗ್ ನಂತಹ ಅಂತರ್ನಿರ್ಮಿತ ಫಿಟ್‌ನೆಸ್ ಮತ್ತು ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರಿಂದ ನೀವು ರಿಯಲ್ ಟೈಮ್‌ನಲ್ಲಿ ಫಿಟ್‌ನೆಸ್ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ತಿಳಿಯಬಹುದು.
- ಈ ಪೆಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್ ಆಂಡ್ರಾಯ್ಡ್ ಮತ್ತು ಐಓಎಸ್ ಗಾಗಿ ಎಐ ಸಕ್ರಿಯಗೊಳಿಸಿದ ವಾಯ್ಸ್ ಅಸಿಸ್ಟೆಂಟ್ ಫೀಚರ್ಸ್‌ನಿಂದ ಪ್ಯಾಕ್ ಆಗಿದೆ.
- SPO2, 24X7 ಹಾರ್ಟ್ ರೇಟ್ ಮಾನಿಟರಿಂಗ್, ಸ್ಟೆಪ್ ಪೆಡೋಮೀಟರ್, ಸ್ಲೀಪ್ ಮಾನಿಟರ್, ಕ್ಯಾಲೋರಿ ಮಾನಿಟರ್, ಸ್ಟಾಪ್‌ವಾಚ್ ಮತ್ತು ಪಾಸ್‌ವರ್ಡ್ ಲಾಕ್ ಇದರ ಪ್ರಮುಖ ಫೀಚರ್ಸ್‌ಗಳಾಗಿವೆ.
- ಬ್ಲೂಟೂತ್ ಕಾಲ್ ಫೀಚರ್ ಮೂಲಕ ಕರೆಗಳನ್ನು ಮಾಡಬಹುದು ಹಾಗೂ ಸ್ವೀಕರಿಸಬಹುದು. ಇದರಿಂದ ಸಂಪರ್ಕಿತ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸ್ಮಾರ್ಟ್‌ವಾಚ್ ಹ್ಯಾಂಡ್ಸ್-ಫ್ರೀ ಸ್ಪೀಕರ್ ಸಿಸ್ಟಮ್‌ನಂತೆ ಕಾರ್ಯನಿರ್ವಹಿಸುತ್ತದೆ.
- ಕ್ಯಾಮೆರಾ ಕಂಟ್ರೋಲ್, ಕ್ಯಾಲ್ಕುಲೇಟರ್ ಮತ್ತು ಮ್ಯೂಸಿಕ್ ಕಂಟ್ರೋಲ್ ಮಾಡುವ ಹಲವು ಆಯ್ಕೆಗಳನ್ನು ಈ ಹೊಸ ಪೆಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್ ಹೊಂದಿದೆ.
ಸದ್ಯ ಭಾರತದಲ್ಲಿ ಹೊಸ ಪೆಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್ 1,999 ರೂ. ಬೆಲೆಯಲ್ಲಿ ಬಿಡುಗಡೆಗೊಂಡಿರುವ ಈ ಸ್ಮಾರ್ಟ್ ವಾಚ್ ಸದ್ಯ ಕಪ್ಪು, ನೀಲಿ, ಬೂದು ಮತ್ತು ಕಿತ್ತಳೆ ನಾಲ್ಕು ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ವಾಚ್ ಸಾಧನವನ್ನು ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಅವಕಾಶ ಮಾಡಿ ಕೊಡಲಾಗಿದೆ.