ಎಣ್ಣೆಪ್ರಿಯರಿಗೆ ಶಾಕಿಂಗ್ ನ್ಯೂಸ್ | ಇಂದು ಮದ್ಯ ಮಾರಾಟ ಬಂದ್!

ಸಾವಿರಾರು ದತ್ತಮಾಲಾಧಾರಿಗಳು ಅರೇಹಳ್ಳಿ, ಬೇಲೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ತೆರಳಲಿರುವ ಹಿನ್ನೆಲೆ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಹಾಗಾಗಿ ಚಿಕ್ಕಮಗಳೂರಿನ ಪಕ್ಕದ ಜಿಲ್ಲೆ ಹಾಸನದ 2 ತಾಲೂಕುಗಳಲ್ಲಿ ನಾಳೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಮದ್ಯ ಮಾರಾಟ ಬಂದ್ ಮಾಡಿದೆ.
ಬೇಲೂರು ಹಾಗೂ ಸಕಲೇಶಪುರ ತಾಲ್ಲೂಕಿನಾದ್ಯಂತ ನಾಳೆ ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ಮದ್ಯ ಸಾಗಾಟ ಹಾಗೂ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

ಹಾಸನ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ 2 ತಾಲೂಕುಗಳಲ್ಲಿ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ.

Leave A Reply

Your email address will not be published.