Kantara : ಮಂಡ್ಯದಲ್ಲಿ ಬಂದ ಕಾಂತಾರ ದೇವಿ | ಓ ಎಂದು ಕೂಗಿ ದುಡ್ಡು ವಸೂಲಿ |

Share the Article

ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಲೇ ಇದೆ. ಎಲ್ಲಿವರೆಗೆ ಮೋಸ ಹೋಗುವವರು ಇರುತ್ತಾರೆ ಅಲ್ಲಿವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಮನುಷ್ಯ ಮಾಡುವ ಕೆಲವೊಂದು ಕೃತ್ಯಗಳು ಅನ್ಯಾಯಗಳು ಯಾಕಾಗಿ ಮಾಡುತ್ತಾರೆ ಎನ್ನುವುದು ಊಹಿಸಲು ಸಹ ಸಾಧ್ಯವಿಲ್ಲ. ಅದರಲ್ಲೂ ದೇವರ ಹೆಸರಲ್ಲಿ ಜನರ ನಂಬಿಕೆ ಮತ್ತು ಭಾವನೆಗಳ ಜೊತೆಗೆ ಇಲ್ಲೊಬ್ಬಳು ಹೆಂಗಸು ಚೆಲ್ಲಾಟ ಆಡಿರುವುದು ಬೆಳಕಿಗೆ ಬಂದಿದೆ.

ಪ್ರಸ್ತುತ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಳವಳ್ಳಿ ಟೌನ್ ನ ಪೇಟೆ ಬೀದಿಯಲ್ಲಿ ಶಿವಲಿಂಗಮ್ಮ ಎಂಬಾಕೆ ಅಮಾಯಕ ಜನರಿಗೆ ವಂಚಿಸುತ್ತಿದ್ದಳು. ಹೌದು ಕಾಂತಾರ ಚಿತ್ರ ರಿಲೀಸ್ ಆಗಿದ್ದೇ ಆಗಿದ್ದು ಎಲ್ಲೆಡೆ ಕಾಂತಾರ ದೇವರು ಪ್ರತ್ಯಕ್ಷವಾಗುತ್ತಿದ್ದಾರೆ. ಎಲ್ಲಾ ಕಡೆ ಅದರದೇ ಹವಾ ಎದ್ದಿದೆ. ಅದೇ ರೀತಿ ಮಂಡ್ಯದಲ್ಲಿ ಮಹಿಳೆಯೊಬ್ಬಳು ತನ್ನ ಮೈ ಮೇಲೆ ಕಾಂತಾರ ದೇವರು ಬರುತ್ತಾರೆಂದು ನಂಬಿಸಿ ಮೋಸ ಮಾಡುತ್ತಿದ್ದಾಳೆ.

ಈಕೆ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಕೂಗುವ ರೀತಿಯೇ ಕೂಗಿ ಜನರಿಗೆ ಮರಳು ಮಾಡ್ತಿದ್ದಾರಂತೆ. ಪರಿಹಾರ ನೀಡುವುದಾಗಿ ಹಣ ಪೀಕುತ್ತಿದ್ದಾಳೆ. ಸದ್ಯ ಮಹಿಳೆಯ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು ಕಾಂತಾರ ಚಿತ್ರದ ಕ್ಲೈ ಮ್ಯಾಕ್ಸ್ ನಲ್ಲಿ ಕಿರುಚುವ ಹಾಗೆ ಕಿರುಚಿ ಜನರಿಗೆ ಮಂಕು ಬೂದಿ ಎರುಚುತ್ತಿರುವ ಮಹಿಳೆ ವಿರುದ್ಧ ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಎನ್​ಸಿಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗಿದೆ.

ಜನರ ಆಚಾರ ವಿಚಾರ ನಂಬಿಕೆ ಭರವಸೆ ಗೆ ಧಕ್ಕೆ ತರುವುದರ ಜೊತೆಗೆ ಸಾಮಾಜಿಕ ಕಳಂಕವು ಹೌದು ಅದಲ್ಲದೆ ಜನರ ಕೈಯಿಂದ ಪರಿಹಾರದ ಹೆಸರಿನಲ್ಲಿ ಸುಳಿಗೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Leave A Reply