EPFO Merge Accounts : 2 ಪಿಎಫ್ ಖಾತೆಯಿದ್ದರೆ ಈ ರೀತಿಯಾಗಿ ವಿಲೀನ ಮಾಡಿ
ನಿಮ್ಮಲ್ಲಿ ಒಂದಕ್ಕಿಂತ ಅಧಿಕ ಪಿಎಫ್ ಖಾತೆಯಿದೆಯೇ ಹಾಗಿದ್ದರೆ ನಿಮಗೆ ಮುಖ್ಯ ಮಾಹಿತಿ ಇಲ್ಲಿದೆ.
ನಿಮಗೆ ಒಂದಕ್ಕಿಂತ ಅಧಿಕ ಪಿಎಫ್ ಖಾತೆ ಇದ್ದಲ್ಲಿ ನೀವು ಎಲ್ಲ ಖಾತೆಯನ್ನು ವಿಲೀನ ಮಾಡುವುದು ಅಗತ್ಯವಾಗಿದೆ.
ನೀವು ಮನೆಯಲ್ಲಿಯೇ ಕೂತು ಆನ್ಲೈನ್ ಮೂಲಕವೇ ನಿಮ್ಮ ಪಿಎಫ್ ಖಾತೆಗಳನ್ನು ವಿಲೀನ ಮಾಡಬಹುದಾಗಿದೆ.
ಈಗ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ಮೊಬೈಲ್ ಎಂಬ ಮಾಯಾವಿಯ ಬಳಕೆಯ ಮೂಲಕ ಎಲ್ಲ ಕೆಲಸಗಳು ಕ್ಷಣ ಮಾತ್ರದಲ್ಲಿ ನಡೆಸಲು ಸಾಧ್ಯವಾಗಿದೆ. ಇದೀಗ, ಬ್ಯಾಂಕ್ ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದ್ದು, ಯಾವುದೇ ಹಣಕಾಸು, ಬ್ಯಾಂಕಿನ ವ್ಯವಹಾರಗಳನ್ನು ಸುಲಭದಲ್ಲಿ ಮಾಡಬಹುದಾಗಿದೆ
ನೀವು ಎಲ್ಲ ಪಿಎಫ್ ಖಾತೆಯನ್ನು ವಿಲೀನ ಮಾಡುವುದರಿಂದಾಗಿ ಪದೇ ಪದೇ ಲಾಗಿನ್ ಆಗುವಾಗ ಉಂಟಾಗುವ ತಾಪತ್ರಯ ತಪ್ಪುತ್ತದೆ. ಅಷ್ಟೆ ಅಲ್ಲದೆ ನಿಮ್ಮ ಸಮಯವೂ ಕೂಡಾ ಉಳಿತಾಯವಾಗುವ ಜೊತೆಗೆ ಒಟ್ಟು ಮೊತ್ತದ ಲೆಕ್ಕಾಚಾರವು ಲಭ್ಯವಾಗಲಿದೆ.
ಪಿಎಫ್ ನಿಯಮ: ಐದು ಪ್ರಮುಖ ಬದಲಾವಣೆಗಳು ಹೀಗಿವೆ:
ನೀವು ಆನ್ಲೈನ್ ಮೂಲಕವೇ ಸರಳವಾಗಿ ಎರಡು ಪಿಎಫ್ ಖಾತೆಗಳನ್ನು ವಿಲೀನ ಮಾಡಬಹುದಾಗಿದೆ. ಒಂದಕ್ಕಿಂತ ಅಧಿಕವಿರುವ ಪಿಎಫ್ ಖಾತೆಯನ್ನು ಯಾಕಾಗಿ ನಾವು ವಿಲೀನ ಮಾಡಬೇಕು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ವಿಲೀನ ಮಾಡುವುದು ಯಾಕೆ ಮುಖ್ಯ, ಹೇಗೆ ವಿಲೀನ ಮಾಡುವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಪಿಎಫ್ ಖಾತೆ ವಿಲೀನ ಯಾಕೆ ಮುಖ್ಯ?
ನೀವು ಬೇರೆ ಸಂಸ್ಥೆಯಲ್ಲಿ ಉದ್ಯೋಗವನ್ನು ಆರಂಭ ಮಾಡುವಾಗ ಬೇರೆಯೇ ಪಿಎಫ್ ಖಾತೆಯನ್ನು ತೆರೆದಿರುವ ಸಾಧ್ಯತೆಗಳು ಇರುತ್ತವೆ . ನೀವು ಈಗಾಗಲೇ ಪಿಎಫ್ ಖಾತೆಯನ್ನು ಹೊಂದಿದ್ದರೆ ಹೊಸ ಸಂಸ್ಥೆಗೂ ಕೂಡಾ ಅದೇ ಯುಎಎನ್ ಸಂಖ್ಯೆಯನ್ನು ನೀಡುವುದು ಅಗತ್ಯವಾಗಿರುತ್ತದೆ.
ಹಾಗೆಯೇ ನೀವು ಹೊಸ ಸಂಸ್ಥೆಗೆ ಸೇರ್ಪಡೆಯಾದ ಬಳಿಕ ನಿಮ್ಮ ಹಳೆಯ ಯುಎಎನ್ ಸಂಖ್ಯೆಯನ್ನು ನೀಡಿದ್ದರೂ ಕೂಡ ಖಾತೆಯಲ್ಲಿನ ಮೊತ್ತ ಲಿಂಕ್ ಆಗಿರುವುದಿಲ್ಲ. ಹೀಗಾಗಿ, ನೀವು ಈ ಹಿಂದೆ ಇದ್ದ ಸಂಸ್ಥೆಯ ಪಿಎಫ್ ಮೊತ್ತ ತೆಗೆಯುವುದು ತ್ರಾಸವಾಗುತ್ತದೆ. ಹೀಗಾಗಿ, ಹಳೆಯ ಖಾತೆಯಲ್ಲಿನ ಮೊತ್ತವನ್ನು ನಿಮ್ಮ ಈಗಿನ ಖಾತೆಗೆ ವರ್ಗಾಯಿಸಬೇಕಾದರೆ ಎರಡು ಖಾತೆಯನ್ನು ನೀವು ವಿಲೀನ ಮಾಡಬೇಕಾಗುತ್ತದೆ.
ನೀವು ಹೂಡಿಕೆ ಇಲ್ಲವೇ ಹಣ ವಿತ್ ಡ್ರಾ ಅನ್ನು ಮಾಡದೆ 36 ತಿಂಗಳುಗಳು ಆಗಿದ್ದರೆ ನಿಮ್ಮ ಪಿಎಫ್ ಖಾತೆಯು ನಿಷ್ಕ್ರಿಯವಾಗಲಿದೆ. ನಿಮ್ಮ ಪಿಎಫ್ ಖಾತೆಗೆ ಹಣ ಜಮೆಯಾಗದ ಮೂರು ವರ್ಷದವರೆಗೆ ಸಕ್ರಿಯವಾಗಿರುತ್ತದೆ. ಆ ಬಳಿಕ ಖಾತೆ ಸಂಪೂರ್ಣವಾಗಿ ನಿಷ್ಕ್ರಿಯವಾಗುತ್ತದೆ ಎಂದು ಇಪಿಎಫ್ಒ ಹೇಳಿದೆ. ಈ ಪಿಎಫ್ ಖಾತೆಯು ನಾನ್-ಆಪರೇಟಿವ್ ಎಂದು ವರ್ಗಾಯಿಸಲಾಗಿರುತ್ತದೆ. ಹೀಗಾಗಿ, ನಿಮ್ಮ ಪಿಎಫ್ ಖಾತೆಯು ನಿಷ್ಕ್ರಿಯವಾಗುತ್ತದೆ.
ಇಪಿಎಫ್ ಖಾತೆಗಳನ್ನು ವಿಲೀನ ಮಾಡುವ ವಿಧಾನ ಹೀಗಿದೆ;
ಇಪಿಎಫ್ಒ ಅಧಿಕೃತ ವೆಬ್ಸೈಟ್ unifiedportal-mem.epfindia.gov.in ಭೇಟಿ ನೀಡಬೇಕು. ಬಳಿಕ one Member One EPF account ಮೇಲೆ ಕ್ಲಿಕ್ ಮಾಡಬೇಕು. ಆಗ ಸ್ಕ್ರೀನ್ನಲ್ಲಿ ನಿಮ್ಮ ಪಿಎಫ್ ಖಾತೆಗಳ ವಿವರದ ಜೊತೆ ವೈಯಕ್ತಿಕ ಮಾಹಿತಿ ಕಾಣಿಸಿಕೊಳ್ಳಲಿದ್ದು, ನಿಮ್ಮ ಈ ಹಿಂದಿನ ಖಾತೆಯನ್ನು ಈ ಖಾತೆಯೊಂದಿಗೆ ಮರ್ಜ್ ಮಾಡಲು, ನಿಮ್ಮ ಹಳೆ ಅಥವಾ ಹೊಸ ಉದ್ಯೋಗಿಗಳ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.
ನಿಮ್ಮ ಈ ಹಿಂದಿನ ಯುಎಎನ್ ಹಾಕಿ, ಹಿಂದಿನ ಪಿಎಫ್ ಖಾತೆ ಸಂಖ್ಯೆ, ಮೆಂಬರ್ ಐಡಿಯನ್ನು ನಮೂದಿಸಬೇಕು. ಬಳಿಕ ನೀವು ಒಟಿಪಿಯನ್ನು ನಮೂದಿಸಿದ ಬಳಿಕ ನಿಮ್ಮ ರಿಕ್ವೆಸ್ಟ್ ಸಬ್ಮಿಟ್ ಆಗಲಿದ್ದು, ನಿಮ್ಮ ಪ್ರಸ್ತುತ ಉದ್ಯೋಗಿಗಳ ಅನುಮೋದನೆಯ ಬಳಿಕ ಹಳೆ ಖಾತೆಯು ಈ ಖಾತೆಗೆ ವಿಲೀನವಾಗಲಿದೆ.