ಐಫೋನ್ ಬೆಲೆ ಗೊತ್ತಿಲ್ಲದೆ ಬೇಡಿಕೆ ಇಟ್ಟ ಅತ್ತೆ |ನಂತರ ಏನಾಯ್ತು?
ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಕ್ಕೂ ದೊಡ್ದ ರಾದ್ದಂತ ಮಾಡುವ ಪ್ರಮೇಯಗಳನ್ನು ಕಂಡಾಗ ಹೀಗೂ ಉಂಟೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದೇ ರೀತಿಯ ಪ್ರಕರಣವೊಂದು ಮುನ್ನಲೆಗೆ ಬಂದಿದ್ದು, ಇದನ್ನು ಕಂಡು ನಿಮಗೆ ಅಚ್ಚರಿಯಾದರೂ ಅತಿಶೋಕ್ತಿಯಲ್ಲ.
ಸಾಮಾನ್ಯವಾಗಿ ಮಕ್ಕಳು ವಿದೇಶದಲ್ಲಿ ಕೆಲಸದಲ್ಲಿ ಇದ್ದಾರೆ ಎಂದಾಗ ಸಹಜವಾಗಿ ಪೋಷಕರು ಮಕ್ಕಳು ವಿದೇಶದಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದ್ದಾರೆ ಎಂದು ಭಾವಿಸಿ ಮಕ್ಕಳ ಬಳಿ ತಮಗೆ ಬೇಕೆನಿಸಿದನ್ನು ಕೇಳುವುದು ಸಹಜ. ಆದರೆ, ಅದನ್ನೇ ತಪ್ಪು ಎಂಬ ರೀತಿ ಬಿಂಬಿಸಿರುವ ಘಟನೆ ನಡೆದಿದೆ.
ಹುಟ್ಟಿದಾಗಿನಿಂದ ಮಕ್ಕಳ ಬೇಕು ಬೇಡ ಗಳೆಲ್ಲವನ್ನು ಜೊತೆಗೆ ಮಕ್ಕಳಿಗಾಗಿಯೆ ತಮ್ಮೆಲ್ಲ ಜೀವನವನ್ನು ಮುಡಿಪಿಟ್ಟ ಪೋಷಕರು ಮಕ್ಕಳ ಬಳಿ ತಮ್ಮ ಬಯಕೆಗಳನ್ನು ಕೇಳುವುದು ಸಹಜ ಹಾಗೂ ಇದನ್ನು ದೂಷಿಸುವುದು ಕೂಡ ಸರಿಯಲ್ಲ .
ಯಾರೇ ಆದರೂ ವಿದೇಶದಲ್ಲಿ ನೆಲೆಸಿದ್ದಾರೆ ಎಂದಾಗ ಅವರು ಶ್ರೀಮಂತರಾಗಿರ್ತಾರೆ (Rich) ಪೌಂಡ್ ಗಳಲ್ಲಿ, ಡಾಲರ್ ಗಳಲ್ಲಿ ಸಂಬಳ (Salary) ಪಡೆದು ಆರಾಮಾಗಿದ್ದಾರೆ ಎಂದುಕೊಂಡರು ಕೂಡ ಕೆಲವರ ಪರಿಸ್ಥಿತಿ ಇದಕ್ಕೆ ತದ್ವಿರುದ್ದ ವಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದ ಜೀವನದ (Life) ಕಠಿಣ ಪರಿಸ್ಥಿತಿಯೊಂದಿಗೆ ಸೆಣಸಾಡುತ್ತಿರುತ್ತಾರೆ.
ಇತ್ತೀಚೆಗೆ, ಕೆನಡಾದ ಮಹಿಳೆಯೊಬ್ಬರು ರೆಡ್ಇಟ್ ವೆಬ್ ಸೈಟ್ ನಲ್ಲಿ ತಮ್ಮ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದು, ‘ನನಗೆ ಅರ್ಥಮಾಡಿಕೊಳ್ಳಲು ಸಹಾಯ (Healp) ಮಾಡಿ’ ಎಂದು ಮನವಿ ಮಾಡಿದ್ದಾರೆ. ಮಹಿಳೆ ತಮ್ಮ ಪೋಸ್ಟ್ನಲ್ಲಿ, “ನಾವು ಕೆನಡಾದಲ್ಲಿ ವಾಸಿಸುತ್ತಿದ್ದು, ನಾನು ಕೆನಡಿಯನ್ ಮತ್ತು ನನ್ನ ಪತಿ ಭಾರತೀಯರಾಗಿದ್ದು, ನಮಗೆ ಕೆಲವೇ ವಾರಗಳಲ್ಲಿ ಮಗುವಾಗುತ್ತಿದೆ. ನಾವು ತುಂಬಾ ಮಿತವ್ಯಯಿಗಳಾಗಿದ್ದು, ಅಲ್ಪ ಸ್ವಲ್ಪ ಉಳಿತಾಯ ಮಾಡಿಕೊಂಡಿದ್ದೇವೆ ಎಂದಿದ್ದಾರೆ. ಆದರೆ, ಪತಿಯ ಮನೆಯವರು ಭಾರತದಲ್ಲಿ ನೆಲೆಸಿದ್ದು, ಈ ಖುಶಿಯ ನಡುವೆ ಪತಿಯ ಮನೆಯವರು ನಾವು ಶ್ರೀಮಂತರು ಉತ್ತಮ ಗಳಿಕೆಯನ್ನು ಹೊಂದಿದ್ದೇವೆ ಎಂದು ಭಾವಿಸಿದ್ದಾರೆ.
ಹಾಗಾಗಿ, ಗಂಡನ ಪೋಷಕರು ನಮಗೆ 2 ಐಫೋನ್ಗಳನ್ನು ಉಡುಗೊರೆಯಾಗಿ ಖರೀದಿಸಲು ಕೇಳಿದ್ದಾರೆ. ನನ್ನ ಪತಿ ನಿಜವಾಗಿಯೂ ಅದನ್ನು ಖರೀದಿ ಮಾಡಲು ನಿರ್ಧರಿಸಿರುವುದು ನನಗೆ ಶಾಕ್ ಆಗಿದೆ” ಎಂದು ಮಹಿಳೆ ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಅವರು ಮಗು ಆಗುತ್ತಿದೆ ಎಂಬ ಸಂತೋಷದ ನಡುವೆ ದೊಡ್ಡ ಉಡುಗೊರೆಗಳನ್ನು ಕೇಳುವುದು ಸಾಮಾನ್ಯವೇ ಎಂದು ರೆಡ್ ಇಟ್ ಬಳಕೆದಾರರನ್ನು ಕೇಳಿದ್ದಾರೆ.
ಮಹಿಳೆಯ ಸಮಸ್ಯೆ ಕೇಳಿ ನೆಟ್ಟಿಗರು ವಿಭಿನ್ನ ಸಲಹೆ ಕಮೆಂಟ್ ಮಾಡಿದ್ದಾರೆ. ಕೆನಡಿಯನ್ ಮಹಿಳೆಯ ಈ ಪೋಸ್ಟ್ ಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದು, ಕೆಲವರು ಆಕೆಯ ಅತ್ತೆ ಮಾವನನ್ನು ಟೀಕಿಸಿದ್ದರೆ, ಇನ್ನೂ ಕೆಲವರು ಮಹಿಳೆಗೆ ಸಮಯೋಜಿತ ಸಲಹೆಗಳನ್ನು ನೀಡಿದ್ದಾರೆ. ಅದರಲ್ಲಿ ಕೂಡ ಕೆಲವು ಕಾಮೆಂಟ್ ವಿಶೇಷವೆನಿಸಿದೆ.
ಇಂಥ ಸಮಯದಲ್ಲಿ ಯಾರು ಉಡುಗೊರೆಗಳನ್ನು ಕೇಳುತ್ತಾರೆ? ಅತ್ತೆ ಮಾವನಿಗೆ ನೀವು “ಅಮ್ಮಾ, ಅಪ್ಪಾ ನಾವು ನಿಮಗೆ ಕೊಡಬಹುದಾದ ಅತ್ಯುತ್ತಮ ಉಡುಗೊರೆಯೆಂದರೆ ನಿಮ್ಮ ಮೊಮ್ಮಗು ಎಂದು ಹೇಳಿ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬ ರೆಡ್ ಇಟ್ ಬಳಕೆದಾರರು, “ದಯವಿಟ್ಟು ಸಂಸ್ಕೃತಿ, ಸಂವೇದನಾಶೀಲತೆ ಹೆಸರಿನಲ್ಲಿ ಅತ್ತೆಮಾವನ ಮೂರ್ಖತನದ ಬೇಡಿಕೆಗಳಿಗೆ ಸಮ್ಮತಿಸಬೇಡಿ ಎಂದಿದ್ದಾರೆ.
ಮಹಿಳೆಯ ಪೋಸ್ಟ್ ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದು, ಕೆಲವೊಮ್ಮ ಪೋಷಕರು ಮಕ್ಕಳಿಗಾಗಿ ಸಾಲ ಮಾಡುವುದು ಸೇರಿದಂತೆ ಬಹಳಷ್ಟು ತ್ಯಾಗ ಮಾಡಿರುವುದರಿಂದ ಅನಾರೋಗ್ಯಕರ ನಿರೀಕ್ಷೆಗಳನ್ನು ಸೃಷ್ಟಿಸಲು ಕಾರಣವಾಗುತ್ತದೆ ಎಂದಿದ್ದಾರೆ.
ಮತ್ತೊಬ್ಬರು ನಿಮ್ಮ ಪತಿ ಸ್ಪಷ್ಟವಾಗಿ ಅವರ ಹೆತ್ತವರಿಗೆ ಅವನ ಆರ್ಥಿಕ ಸ್ಥಿತಿ ಬಗ್ಗೆ ಮಾಹಿತಿ ನೀಡದೇ ಇರುವುದರಿಂದ ಸಮಸ್ಯೆ ಉಂಟಾಗಿದೆ. ಪ್ರಸ್ತುತ ಕ್ಷಣದಲ್ಲಿ ಐಫೋನ್ ಗಳನ್ನು ತೆಗೆಸಿಕೊಡಲು ಸಾಧ್ಯವಿಲ್ಲ ಎಂದು ಪತಿಗೆ ತಿಳಿಸುವಂತೆ ಸಲಹೆ ನೀಡಿದ್ದಾರೆ.
ಈ ಪೋಸ್ಟ್ ಗೆ ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದು, ‘ನಾನು ಮೊದಲ ಬಾರಿಗೆ ಇಂತಹದನ್ನು ನೋಡುತ್ತಿರುವುದು. ನಿಮ್ಮ ಪತಿ ಅವರ ಪೋಷಕರಿಗೆ ಐಫೋನ್ಗಳನ್ನು ಉಡುಗೊರೆಯಾಗಿ ನೀಡಲು ತುಂಬಾ ಉತ್ಸುಕರಾಗಿದ್ದರೆ, ಅವರಿಗೆ ಸೆಕೆಂಡ್ ಹ್ಯಾಂಡ್ ಐಫೋನ್ಗಳನ್ನು ಉಡುಗೊರೆಯಾಗಿ ನೀಡಲು ಸಲಹೆ ನೀಡಿ ಅದು ನಿಮಗೆ ಸ್ವಲ್ಪ ಹಣವನ್ನು ಉಳಿಸುತ್ತದೆ’ ಎಂದಿದ್ದಾರೆ.
ತನಗೆ ಸಲಹೆ ನೀಡಿದ ಎಲ್ಲ ರೆಡ್ ಇಟ್ ಬಳಕೆದಾರರಿಗೆ ಧನ್ಯವಾದ ಅರ್ಪಿಸಿರುವ ಮಹಿಳೆ, ಪತಿಯ ಹೊಸ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗ “ಕೆಲವು ಕಡಿಮೆ ಬೆಲೆಯ, ನವೀಕರಿಸಿದ ಫೋನ್ಗಳನ್ನು (ಬಹುಶಃ ಸ್ಯಾಮ್ಸಂಗ್ ಮತ್ತು ಅವರು ಬಯಸಿದಂತೆ ಐಫೋನ್ ಅಲ್ಲ) ಖರೀದಿಸುವ ಮೂಲಕ ಪತಿ ತನ್ನ ಮನೆಯವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದಾರೆ. ಅದನ್ನು ತನ್ನ ಪೋಷಕರಿಗಾಗಿ ಭಾರತಕ್ಕೆ ಕಳುಹಿಸುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಏನೇ ಆಗಲಿ..ತಮ್ಮ ಹೆತ್ತವರು ಏನೋ ಕೇಳಿದರೂ ಎಂದ ಮಾತ್ರಕ್ಕೆ ಅವರನ್ನು ದೋಷಿಯಂತೆ ದೂಷಿಸುವುದು ಕೂಡ ಸರಿಯಲ್ಲ. ಮಕ್ಕಳ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಪೋಷಕರು ಅರಿತಿದ್ದರೆ, ಮಕ್ಕಳಿಗೆ ತೊಂದರೆ ಉಂಟು ಮಾಡಲು ಪೋಷಕರು ಕೂಡ ಬಯಸುವುದಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.