Rain in Karnataka : ಚಂಡಮಾರುತ ಪ್ರಭಾವ | ನಾಲ್ಕು ದಿನ ಭರ್ಜರಿ ವರುಣಾರ್ಭಟ!

ಮಳೆಯ ಅವಾಂತರ ಒಂದಲ್ಲ ಎರಡಲ್ಲ. ಈಗಾಗಲೇ ಕೆಲವೆಡೆ ಪ್ರತಿಯೊಬ್ಬರ ಜೀವನ ಅಸ್ತ ವ್ಯಸ್ತ ಆಗಿ ಕಂಗಳಾಗಿ ಹೋಗಿದ್ದಾರೆ. ಆದ್ದರಿಂದ ಎಲ್ಲೆಡೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಕನಿಷ್ಠ ಪಕ್ಷ ಜನರು ಮಳೆ ಬಂದ ನಂತರ ದಿಕ್ಕಾಪಾಲಗಿ ಓಡುವುದಕ್ಕಿಂದ ಮುನ್ನಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.

ಈಗಾಗಲೇ ರಾಜ್ಯದಲ್ಲಿ ಚಳಿ ಕೂಡ ಏರಿಕೆಯಾಗಿದ್ದು, ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಾಗುವ ಬಗ್ಗೆಯೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದರ ಮಧ್ಯೆ ಈಗ ಮತ್ತೆ ಮಳೆಯ ಅಲರ್ಟ್ ನೀಡಲಾಗಿದೆ.

ಸಾಮಾನ್ಯವಾಗಿ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಚಳಿಯ ವಾತಾವರಣ ಇರುತ್ತದೆ. ಆದರೆ, ಈ ಬಾರಿ ರಾಜ್ಯದ ಹಲವು ಜಿಲ್ಲೆಯಲ್ಲಿ ಧಾರಾಕಾರ ಮಳೆ ಬರಲಿದೆ . ಇಂದು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇಂದು ಮ್ಯಾಂಡಸ್ ಚಂಡಮಾರುತ ತಮಿಳುನಾಡು ಮತ್ತು ಪುದುಚೇರಿ ಕರಾವಳಿಗೆ ಅಪ್ಪಳಿಸಲಿದ್ದು, ನೆರೆಯ ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಮಳೆಯಾಗಲಿದೆ. ಮ್ಯಾಂಡಸ್ ಚಂಡಮಾರುತ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ರೂಪಗೊಳ್ಳಲಿದೆ. ಈ ಹಿನ್ನೆಲೆ ತಮಿಳುನಾಡು ಮತ್ತು ಪುದುಚೇರಿ ಭಾಗದಲ್ಲಿ ಎನ್​ಡಿಆರ್​ಎಫ್ ತಂಡ ಅಲರ್ಟ್​ ಆಗಿದೆ.

ಹವಾಮಾನ ಇಲಾಖೆ ಪ್ರಕಾರ ಡಿಸೆಂಬರ್ 6ರಂದು ರಾತ್ರಿ 11.30ರ ವೇಳೆಗೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ರೂಪಗೊಂಡಿರುವ ಮ್ಯಾಂಡಸ್, ಕಾರೈಕಲ್​ನಿಂದ ಸುಮಾರು 840 ಕಿಮೀ ಪೂರ್ವ ಆಗ್ನೇಯಕ್ಕೆ ಮತ್ತು ಚೆನ್ನೈನಿಂದ ಸುಮಾರು 900 ಕಿ ಮೀ ಅಗ್ನೇಯದಲ್ಲಿ ಡಿಪ್ರೆಶನ್ ಆರಂಭಗೊಂಡಿದೆ ಎಂದು ತಿಳಿಸಲಾಗಿದೆ.

ಬರುವ ದಿನಗಳಲ್ಲಿ ಚಂಡಮಾರುತ ವೇಗ ಪಡೆದುಕೊಳ್ಳಲಿದ್ದು, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಪುದುಚೇರಿಯ ಕರಾವಳಿಗೆ ಅಪ್ಪಳಿಸಲಿದೆ. ಪರಿಣಾಮ ನಾಳೆಯಿಂದ ಡಿಸೆಂಬರ್ 12ರವರೆಗೂ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ತಿಳಿಸಿದೆ.

ಡಿಸೆಂಬರ್ 17ರಂದು ದಕ್ಷಿಣ ಒಳನಾಡಿನ ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೊಡಗು ಚಿಕ್ಕಮಗಳೂರಿನಲ್ಲಿ ಅಧಿಕ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಈ ದಿನದಂದು ಯೆಲ್ಲೋ ಅಲರ್ಟ್​ ಪ್ರಕಟಿಸಲಾಗಿದೆ.

ಅದಲ್ಲದೆ ನಾಳೆಯಿಂದ ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿಯೂ ಮಳೆಯಾಗಲಿದೆ.
ಇದರ ಜೊತೆ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿಯೂ ಚಂಡಮಾರುತದ ಎಫೆಕ್ಟ್​ ಕಾಣಿಸಿಕೊಳ್ಳಲಿದೆ.

ಮಳೆ ಎಲ್ಲೆಂದರಲ್ಲಿ ಯಾವಾಗ ಬೇಕು ಆವಾಗ ಮನಸೋ ಇಚ್ಛೆ ಸುರಿಯುತ್ತಿದೆ. ಹಾಗಾಗಿ ಹವಾಮಾನ ವರದಿಯಂತೆ ಈ ಮೇಲಿನ ಪ್ರದೇಶಗಳಲ್ಲಿ ಎಲ್ಲೋ ಅಲರ್ಟ್ ಸೂಚಿಸಲಾಗಿದೆ

Leave A Reply

Your email address will not be published.