Viral Video | ರೈಲು ಬರುತ್ತಿರುವಾಗ ಪ್ಲಾಟ್ ಫಾರ್ಮ್ ನಿಂದ ಕೆಳಕ್ಕೆ ಬಿದ್ದು ಮಧ್ಯ ಸಿಕ್ಕಿಹಾಕಿಕೊಂಡ ಹುಡುಗಿ

Share the Article

ಆಂಧ್ರಪ್ರದೇಶದ ಗುಂಟೂರು ಎಕ್ಸ್‌ಪ್ರೆಸ್ ಹತ್ತುವ ವೇಳೆ ಅವಘಡ ಒಂದು ಸಂಭವಿಸಿದೆ. ಯುವತಿಯೊಬ್ಬಳು ರೈಲು ಹತ್ತುವಾಗ ಆಯತಪ್ಪಿ ಬಿದ್ದು ರೈಲು ಹಾಗೂ ಫ್ಲಾಟ್‌ಫಾರ್ಮ್ ನಡುವಿನ ಇರುಕಲು ಜಾಗದಲ್ಲಿ ಸಿಲುಕಿ ಹಾಕಿಕೊಂಡಿದ್ದಾಳೆ.

ಆಕೆ ರೈಲು ಮತ್ತು ಪ್ಲಾಟ್ ಫಾರ್ಮ್ ಮಧ್ಯದ ಜಾಗದಲ್ಲಿ ಸಿಲುಕಿ ಹಾಕಿಕೊಂಡಿದ್ದಾಳೆ. ಅದೃಷ್ಟವಶಾತ ಆಕೆಯ ಮೇಲೆ ರೈಲು ಹರಿದು ಹೋಗಿಲ್ಲ. ಆಕೆಯನ್ನು ಹೊರಗೆಳೆಯುವ ಯಾವುದೇ ಪ್ರಯತ್ನ ಫಲ ಕೊಡಲೇ ಇಲ್ಲ. ಆಕೆಯನ್ನು ಸ್ವಲ್ಪ ಮಿಸುಕಾಡಿಸಿದರೂ ಸಾಕು ನೋವಿನಿಂದ ಕಿರುಚಿಕೊಳ್ಳುತ್ತಿದ್ದಳು.

ಜಿಆರ್‌ಪಿ, ಆರ್‌ಪಿಎಫ್ ಮತ್ತು ರೈಲ್ವೆ ಎಂಜಿನಿಯರ್‌ಗಳು ಸ್ಥಳಕ್ಕೆ ಆಗಮಿಸಿ ಆಕೆಯ ಸಹಾಯಕ್ಕಾಗಿ ಧಾವಿಸಿದ್ದಾರೆ.
ಕೊನೆಗೆ ಏನೂ ಮಾಡಲು ಆಗದಿದ್ದಾಗ ರೈಲ್ವೆ ಫ್ಲಾಟ್‌ಫಾರ್ಮ್‌ ಅನ್ನು ಒಡೆದು ಆಕೆಯ ರಕ್ಷಣೆ ಮಾಡಬೇಕಾಯ್ತು.

ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯುವತಿ ಆ ವೈರಲ್ ಆದ ಆ ವಿಡಿಯೋ ಕೆಳಗಿದೆ ನೋಡಿ.

Leave A Reply