Smart TV Offer: 65 ಇಂಚಿನ ಸ್ಮಾರ್ಟ್​ಟಿವಿ ಕೇವಲ 36 ಸಾವಿರ ರೂಪಾಯಿಯಲ್ಲಿ ಲಭ್ಯ | ಈ ಅವಕಾಶ ಇಂದು ಮಾತ್ರ

ಪ್ರಸ್ತುತ ಜನರಿಗಾಗಿ ವಿಶೇಷ ಫೀಚರ್ಸ್​ಗಳುಳ್ಳ ಸ್ಮಾರ್ಟ್​ಟಿವಿಗಳನ್ನು ಕಂಪನಿಗಳು ಪರಿಚಯಿಸುತ್ತಲೇ ಇರುತ್ತದೆ.ಹೌದು, ಸ್ಮಾರ್ಟ್​ಟಿವಿಗಳು ಈಗ ಎಲ್ಲರ ಮನೆಯಲ್ಲೂ ಇದೆ. ಇದರ ಫೀಚರ್ಸ್​ ಅನ್ನು ನೋಡಿ ಜನರು ಆಕರ್ಷಿತರಾಗುತ್ತಾರೆ. ಜನರು ಸಹ ಎಷ್ಟೇ ಕೆಲಸದ ಒತ್ತಡ ಇದ್ದರೂ ಸಹ ಮನೋರಂಜನೆಗಾಗಿ ಸ್ವಲ್ಪ ಬಿಡುವು ಮಾಡಿಕೊಳ್ಳುತ್ತಾರೆ ಅನ್ನೋದು ಸತ್ಯ. ಹೌದು ಸಿನಿಮಾ, ಆಟೋಟ, ರಿಯಾಲಿಟಿ ಶೋ ಮುಂತಾದವುಗಳನ್ನು ವೀಕ್ಷಿಸುವುದರಲ್ಲಿ ಕೆಲವರಂತೂ ಎತ್ತಿದ ಕೈ ಅನ್ನಬಹುದು. ಅದಲ್ಲದೆ ಈಗಿನ ಕಾಲದ ಸ್ಮಾರ್ಟ್​ಟಿವಿಗಳ ಫೀಚರ್ಸ್​ಗಳು ಕೂಡ ಮೊಬೈಲ್​ನಂತೆಯೇ ಫೀಚರ್ಸ್​ ಅನ್ನು ಹೊಂದಿದೆ. ಯಾವುದೇ ಸಿನೆಮಾ, ವೆಬ್​ಸೀರಿಸ್​, ಧಾರವಾಹಿ ಇವುಗಳನ್ನು ನೋಡಬೇಕಾದರು ಈಗ ಸ್ಮಾರ್ಟ್​ಟಿವಿಗಳಲ್ಲೇ ನೋಡಬಹುದು.

 

ಸದ್ಯ ಹೊಸ ಸ್ಮಾರ್ಟ್​​ಟಿವಿ ಖರೀದಿಸುವ ಯೋಜನೆಯಲ್ಲಿರುವವರಿಗೆ ಕಂಪನಿ ಒಂದು ಒಳ್ಳೆಯ ಸುದ್ದಿ ನೀಡಿದೆ. ಸ್ಮಾರ್ಟ್​​​ಟಿವಿ ಪ್ರಿಯರಿಗಾಗಿ ಉತ್ತಮ ಫೀಚರ್ಸ್​ ಹೊಂದಿದ ಟಿವಿ ಲಭ್ಯವಿದೆ.

ಹೌದು ಫಾಕ್ಸ್​ಸ್ಕೈ ಸ್ಮಾರ್ಟ್ ಟಿವಿಯಲ್ಲಿ ಈ ಗಮನ ಸೆಳೆಯುವ ಆಫರ್ಸ್​ ಲಭ್ಯವಿದೆ. ಒಟ್ಟಾಗಿ ಈ ಸ್ಮಾರ್ಟ್​​ಟಿವಿ ಮೆಲೆ ರೂ. 93 ಸಾವಿರಕ್ಕೂ ಹೆಚ್ಚು ರಿಯಾಯಿತಿ ಲಭ್ಯವಿದೆ. ಈ ಕೊಡುಗೆಯು ಕಂಪನಿಯ 65 ಇಂಚಿನ ಸ್ಮಾರ್ಟ್ ಟಿವಿಯ ಮಾರಾಟದಲ್ಲಿ ನೀಡಿದೆ. ವಿಶೇಷವಾಗಿ ಈ ಸ್ಮಾರ್ಟ್​ಟಿವಿಯ ಮೇಲೆ ಸರಿಸುಮಾರು 70% ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಪ್ರಸ್ತುತ ಫಾಕ್ಸ್ ​​ಸ್ಕೈ 65 ಇಂಚಿನ ಸ್ಮಾರ್ಟ್ ಟಿವಿ ಯ ಮೂಲ ಬೆಲೆ ರೂ. 1,29,990 ಆಗಿದೆ. ಆದರೆ ಈ ಟಿವಿ ಈಗ 38,990 ರೂಪಾಯಿಯಲ್ಲಿ ಖರೀದಿಸಬಹುದು. ಅಂದರೆ ಶೇಕಡಾ 70 ರಷ್ಟು ರಿಯಾಯಿತಿಯೊಂದಿಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್​​ಟಿವಿಯ ಮೇಲೆ ರಿಯಾಯಿತಿ ಮಾತ್ರವಲ್ಲದೇ ಇತರ ಕೊಡುಗೆಗಳು ಕೂಡ ಲಭ್ಯವಿದೆ.

ಈ ಸ್ಮಾರ್ಟ್ ಟಿವಿಯನ್ನು ಬ್ಯಾಂಕ್ ಆಫರ್‌ಗಳ ಮೂಲಕ ಖರೀದಿಸುವ ಅವಕಾಶವಿದೆ. ಐಸಿಐಸಿಐ ಬ್ಯಾಂಕ್ ಗ್ರಾಹಕರು 10 ಶೇಕಡಾದವರೆಗೆ ರಿಯಾಯಿತಿಯನ್ನು ಪಡೆಯಬಹುದು. ಅಂದರೆ 2,500 ರೂಪಾಯಿ ರಿಯಾಯಿತಿ ನೀಡಲಾಗುವುದು. ಇದೇ ಆಫರ್ ಕೊಡುಗೆಯು ಫೆಡರಲ್ ಬ್ಯಾಂಕ್ ಗ್ರಾಹಕರಿಗೂ ಲಭ್ಯವಿದೆ.

ಸದ್ಯ ಬ್ಯಾಂಕ್ ಆಫರ್ ಮೂಲಕ ಖರೀದಿ ಮಾಡಿದರೆ ಈ ದೊಡ್ಡ ಸ್ಮಾರ್ಟ್ ಟಿವಿ ಬೆಲೆ ಮತ್ತಷ್ಟು ಕಡಿಮೆಯಾಗುತ್ತದೆ ಎನ್ನಬಹುದು. ಆಗ ಈ 4ಕೆ ಟಿವಿ ಕೇವಲ 36,490 ರೂಪಾಯಿಗೆ ಖರೀದಿಸಬಹುದು. ಅಂದರೆ ಖರೀದಿದಾರರಿಗೆ ಒಟ್ಟು 93 ಸಾವಿರ ರೂಪಾಯಿಗೂ ಹೆಚ್ಚು ರಿಯಾಯಿತಿ ಲಾಭ ಸಿಗಬಹುದು.

ಅಂದರೆ ಬ್ಯಾಂಕ್ ಆಫರ್ ಮೂಲಕ ಖರೀದಿ ಮಾಡಿದರೆ ಈ ದೊಡ್ಡ ಸ್ಮಾರ್ಟ್ ಟಿವಿ ಬೆಲೆ ಮತ್ತಷ್ಟು ಕಡಿಮೆಯಾಗುತ್ತದೆ ಎನ್ನಬಹುದು. ಆಗ ಈ 4ಕೆ ಟಿವಿ ಕೇವಲ 36,490 ರೂಪಾಯಿಗೆ ಖರೀದಿಸಬಹುದು. ಅಂದರೆ ಖರೀದಿದಾರರಿಗೆ ಒಟ್ಟು 93 ಸಾವಿರ ರೂಪಾಯಿಗೂ ಹೆಚ್ಚು ರಿಯಾಯಿತಿ ಲಾಭ ಸಿಗಬಹುದು.
ಈ ಟಿವಿಯಲ್ಲಿ ಕಡಿಮೆಯಲ್ಲಿ ಇಎಮ್​ಐ ಆಫರ್‌ಗಳೂ ಇವೆ. ಮಾಸಿಕ ಇಎಮ್​ಐ ರೂ. 1835 ರಿಂದ ಪ್ರಾರಂಭವಾಗುತ್ತದೆ. ಇದು 24 ತಿಂಗಳ ಅವಧಿಯನ್ನು ಹೊಂದಿರುತ್ತದೆ. ನೀವು ಅದೇ 18 ತಿಂಗಳ ಅವಧಿಯನ್ನು ಆಯ್ಕೆ ಮಾಡಿದರೆ ರೂ. 2432 ಪಾವತಿಸಬೇಕಾಗುತ್ತದೆ.

ಹಾಗೆಯೇ ನೀವು 12 ತಿಂಗಳ ಇಎಮ್​ಐ ಹಾಕಿದರೆ ರೂ. 3,500 ತೆಗೆದುಕೊಳ್ಳಲಾಗುವುದು. 9 ತಿಂಗಳ ಅವಧಿಗೆ ಇಎಮ್​ಐ ರೂ. 4589 ಪಾವತಿಸಬೇಕು. ಆರು ತಿಂಗಳ ಇಎಂಐ ರೂ. 6766 ಪಾವತಿಸಬೇಕಾಗುತ್ತದೆ. ಮೂರು ತಿಂಗಳ ಇಎಮ್​ಐ ಆಯ್ಕೆಯೂ ಇದೆ. ಈ ಆಯ್ಕೆಯಲ್ಲಿ ರೂ 13,279 ಪಾವತಿಸಬೇಕು.

ಫಾಕ್ಸ್ ​​ಸ್ಕೈ 65 ಇಂಚಿನ ಸ್ಮಾರ್ಟ್ ಟಿವಿ ಯ ವಿಶೇಷತೆಗಳು :
• LED Ultra HD 4K,
• 60 Hz ರಿಫ್ರೆಶ್ ರೇಟ್,
• 2 HDMI ಪೋರ್ಟ್‌ಗಳು,
• 2 USB ಪೋರ್ಟ್‌ಗಳು,
• ವೈಫೈ,
• ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್,
• 30 ವ್ಯಾಟ್ ಸ್ಪೀಕರ್,
• ಡಾಲ್ಬಿ ಐಟಮ್ಸ್,
• ಎ ಪ್ಲಸ್ ಗ್ರೇಡ್ ಪ್ಯಾನೆಲ್ ಮುಂತಾದ ಫೀಚರ್ಸ್​​ಗಳಿವೆ.
• ನೆಟ್​ಫ್ಲಿಕ್ಸ್​,
• ಅಮೆಜಾನ್ ಪ್ರೈಮ್ ವಿಡಿಯೋ,
• ಯೂಟ್ಯೂಬ್,
• ಹಾಟ್​ಸ್ಟಾರ್​ನಂತಹ ಹಲವು ಅಪ್ಲಿಕೇಶನ್‌ಗಳು ಇದರಲ್ಲಿ ಲಭ್ಯವಿದೆ.

ಒಟ್ಟಿನಲ್ಲಿ ಸ್ಮಾರ್ಟ್ ಟಿವಿಗಳು ಜನರ ಮನಸ್ಸನ್ನು ಗೆದ್ದಿರುವುದು ಖಂಡಿತ. ಯಾಕೆಂದರೆ ಟಿವಿ ಕಂಪನಿಗಳು ದಿನೇ ದಿನೇ ಉತ್ತಮ ಬೆಳವಣಿಗೆ ಕಾಣುತ್ತಿದೆ.

Leave A Reply

Your email address will not be published.