ವಿವಾಹಿತರ ಖಾತೆಗೆ ಬರುವುದು 59,400 ರೂಪಾಯಿ | Iಅಂಚೆ ಕಚೇರಿಯ ಈ ಯೋಜನೆಯ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

ಮುಂದಿನ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಈ ನಡುವೆ ಹಣ ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್‌ನಲ್ಲಿ ಅನೇಕ ಸ್ಕಿಮ್‌ಗಳಿವೆ. ಅಂಚೆ ಕಚೇರಿಯ ಯೋಜನಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನೂ ಪಡೆಯಬಹುದು. ಅಂಚೆ ಕಚೇರಿ ಯೋಜನೆಗಳಲ್ಲಿ ಸಿಗುವ ಬಡ್ಡಿಯ ಪ್ರಮಾಣವು ಜನರು ಅವುಗಳಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುತ್ತದೆ.

 

ಹೌದು ಪೋಸ್ಟ್ ಆಫೀಸ್ ಯೋಜನೆಯಡಿಯಲ್ಲಿ ಉತ್ತಮ ಉಳಿತಾಯ ಯೋಜನೆಗಳನ್ನು ಜಾರಿ ಮಾಡಲಾಗಿದೆ . ಯಾವುದೇ ಅಪಾಯವಿಲ್ಲದೆ ಹಣ ಹೂಡಿಕೆ ಮಾಡುವ ಯೋಜನೆಯಲ್ಲಿ ಹಣ ಹಾಕುವುದು ಮುಖ್ಯ. ಈ ದೃಷ್ಟಿಯಿಂದ ನೋಡುವುದಾದರೆ ಪೋಸ್ಟ್ ಆಫೀಸ್ ಹೂಡಿಕೆಗೆ ಅತ್ಯುತ್ತಮ ಆಯ್ಕೆಯಾಗಿದೆ.

ಅಂಚೆ ಕಚೇರಿಯ ಈ ಹೊಸ ಯೋಜನೆಯ ಹೆಸರು ಮಾಸಿಕ ಉಳಿತಾಯ ಯೋಜನೆ ಅಥವಾ ಮಂಥ್ಲಿ ಸೇವಿಂಗ್ ಸ್ಕೀಮ್. ಈ ಯೋಜನೆಯಲ್ಲಿ ಹಣ ಹೂಡುವ ಮೂಲಕ ಪ್ರತಿ ತಿಂಗಳು ಹಣ ಗಳಿಸುವುದು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ಸಿಂಗಲ್ ಖಾತೆಯನ್ನಾದರೂ ತೆರೆಯಬಹುದು. ಇಲ್ಲಾ ನೀವು ಮತ್ತು ನಿಮ್ಮ ಸಂಗಾತಿ ಇಬ್ಬರ ಹೆಸರಿನಲ್ಲಿ ಜಂಟಿ ಖಾತೆಯನ್ನಾದರೂ ತೆರೆಯಬಹುದು.

ಮಾಸಿಕ ಉಳಿತಾಯ ಯೋಜನೆಯಲ್ಲಿ ವಿವಾಹಿತರು ಜಂಟಿ ಖಾತೆಯನ್ನು ತೆರೆಯಬಹುದು. ಈ ಉಳಿತಾಯ ಖಾತೆಯ ಪ್ರಕಾರ, 9 ಲಕ್ಷ ರೂಪಾಯಿಯನ್ನು ಠೇವಣಿ ಮಾಡಬೇಕಾಗುತ್ತದೆ. ಹೀಗೆ ಠೇವಣಿ ಮಾಡಿದ ಹಣದ ಮೇಲೆ ಶೇಕಡಾ 6.6 ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ.

ಅಲ್ಲದೆ ವಾರ್ಷಿಕ ಆದಾಯದ ಬಗ್ಗೆ ಹೇಳುವುದಾದರೆ , ಇದರಲ್ಲಿ ಸುಮಾರು 59,400 ರೂಪಾಯಿಗಳ ಲಾಭ ಸಿಗಲಿದೆ. ಅಂದರೆ ಪ್ರತಿ ತಿಂಗಳು ನಿಮ್ಮ ಖಾತೆಗೆ 4,950 ರೂಪಾಯಿಗಳು ಬರುತ್ತವೆ.

ಮಾಸಿಕ ಉಳಿತಾಯ ಯೋಜನೆಯ ಅಡಿಯಲ್ಲಿ, ನಿಮ್ಮ ಒಟ್ಟು ಠೇವಣಿಯ ವಾರ್ಷಿಕ ಬಡ್ಡಿಯ ಲಾಭವನ್ನು ಪಡೆಯುವುದು ಸಾಧ್ಯವಾಗುತ್ತದೆ. ಇದರಲ್ಲಿ, ನಿಮ್ಮ ಒಟ್ಟು ಆದಾಯವನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಈ ಲಾಭವನ್ನು 12 ಭಾಗಗಳಾಗಿ ವಿಭಜಿಸಿದರೆ ಅದರಲ್ಲಿ ಒಂದು ಭಾಗವನ್ನು ಪ್ರತಿ ತಿಂಗಳು ನಿಮ್ಮ ಖಾತೆಗೆ ಬರುವಂತೆ ಮಾಡಲಾಗುತ್ತದೆ. ಹೀಗೆ ಪ್ರತಿ ತಿಂಗಳು ಹಣ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದಾದರೆ, ಅಸಲು ಮೊತ್ತದೊಂದಿಗೆ ಮೆಚ್ಯುರಿಟಿ ಸಮಯದಲ್ಲಿ ದೊಡ್ಡ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ.

ಈ ರೀತಿಯಾಗಿ ಪೋಸ್ಟ್ ಆಫೀಸ್ ಮೂಲಕ ಮಾಸಿಕ ಉಳಿತಾಯ ಯೋಜನೆಯ ಅಡಿಯಲ್ಲಿ ಉತ್ತಮ ಹೂಡಿಕೆ ಲಾಭವನ್ನು ಪಡೆಯಬಹುದಾಗಿದೆ.

Leave A Reply

Your email address will not be published.