ನಶೆಯಲ್ಲಿದ್ದಾರಾ ಶ್ರೀದೇವಿ ಮಗಳು ಜಾನ್ವಿ ಕಪೂರ್‌ | ಹೀಗೊಂದು ಪ್ರಶ್ನೆಗೆ ಈ ವೀಡಿಯೋ ನೀಡುತ್ತೆ ಉತ್ತರ

ಸೆಲೆಬ್ರಿಟಿಗಳು ಏನೇ ಮಾಡಿದರೂ ಕೂಡ ಮೀಡಿಯಾದ ಕಣ್ಣುಗಳು ಅವರ ಮೇಲೆ ಇರೋದು ಕಾಮನ್.. ಇದೀಗ ಶ್ರೀದೇವಿ ಪುತ್ರಿ ಜಾನ್ವಿ( Janhvi Kapoor ) ಕಪೂರ್ ಬಗ್ಗೆ ಹೊಸ ವಿಚಾರವೊಂದು ಹರಿದಾಡುತ್ತಿದೆ.

 

ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ತನ್ನ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಎಲ್ಲರ ಪಾಲಿನ ಹಾಟ್ ಟಾಪಿಕ್ ಆಗಿರುವ ಜಾನ್ವಿ ಕಪೂರ್ ಹೆಚ್ಚಿನ ಸಂದರ್ಭದಲ್ಲಿ ಟ್ರೋಲ್ ಮೂಲಕ ಸುದ್ದಿಯಲ್ಲಿರುತ್ತಾರೆ. ಜಾನ್ವಿ ಸಿನಿಮಾಗಿಂತ ಹೆಚ್ಚಾಗಿ ಟ್ರೋಲಿಂಗ್ ಮುಖೇನ ಹೆಚ್ಚು ಚರ್ಚೆಯಲ್ಲಿರುತ್ತಾರೆ ಎಂದರೆ ತಪ್ಪಾಗದು. ಆದ್ರೆ, ಈ ಬಾರಿ ಕೂಡ ಜಾನ್ವಿ ಸುದ್ಧಿ ಜೋರಾಗಿ ಕೇಳಿ ಬರುತ್ತಿವೆ.

ಈ ಬಾರಿ ಆಕೆ ಸುದ್ದಿಯಲ್ಲಿರುವುದು ಉಡುಪಿನ ವಿಚಾರಕ್ಕಲ್ಲ. ಬದಲಾಗಿ ಗುಂಡಿನ ಮತ್ತು ನೆತ್ತಿಗೇರಿತೇ ಜಾನ್ವಿಗೆ?? ಎಂಬ ಪ್ರಶ್ನೆ ಸಹಜವಾಗಿ ಬುಗಿಲೆದ್ದಿದೆ. ಇದಕ್ಕೆ ಇಂಬು ನೀಡುವಂತಹ ವೀಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ಜಾನ್ವಿಯ ಬ್ಯೂಟಿ ಶೋ ನೆಟ್‌ ನೋಡಿದವರೆಲ್ಲ ಅಚ್ಚರಿ ಉಂಟಾಗಿದ್ದು, ಜಾಹ್ನವಿ ಕಪೂರ್ ಆಗಷ್ಟೇ ರೆಸ್ಟೋರೆಂಟ್‌ನಿಂದ ಹೊರಬಂದಿದ್ದು, ಕುಡಿದ ಅಮಲಿನಲ್ಲಿದ್ದಂತೆ ಕಂಡು ಬರುತ್ತಿರುವ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ. Janhvi Kapoor Drinking Video ನೋಡಿ ನೆಟ್ಟಿಗರು ಜಾನ್ವಿ ಕಪೂರ್ ಅವರನ್ನು ಟ್ರೊಲ್ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಜಾನ್ವಿ ಮನೆಯಿಂದ ಹೊರ ಕಾಲಿಟ್ಟ ಕೂಡಲೇ ಕ್ಯಾಮೆರಾ ಕಣ್ಣುಗಳು ಎಂದಿಗೂ ಆಕೆಯನ್ನು ಹಿಂಬಾಲಿಸುತ್ತಿರುತ್ತವೆ. ಆದರೆ ಇದೀಗ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಜಾನ್ವಿ ಎಣ್ಣೆಯ ನಶೆಯಲ್ಲಿ ತೇಲಾಡುತ್ತಿರುವಂತೆ ಕಂಡು ಬರುತ್ತಿದೆ. ಎಣ್ಣೆಯ ನಶೆಯಲ್ಲಿ ಆಕೆಗೆ ತನ್ನ ಕಾರು ಎಲ್ಲಿದೆ ಎಂಬ ವಿಚಾರ ತಿಳಿಯದೆ ಕಕ್ಕಾಬಿಕ್ಕಿಯಾಗಿ ಎಲ್ಲರ ಬಳಿಯಲ್ಲಿಯು ಕೂಡ ತನ್ನ ಕಾರು ಎಲ್ಲಿದೆ ಎಂದು ಪ್ರಶ್ನಿಸುತ್ತ ಓಡಾಡುತ್ತಿದ್ದಾರೆ. ಜಾನ್ವಿ ಅವರ ಹಿಂದೆಯೇ ಡ್ರೈವರ್ ಇದ್ದರೂ ಕೂಡ ಆಕೆಗೆ ತನ್ನ ಚಾಲಕನನ್ನು ಕೂಡ ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಸ್ಥಿತಿಯಲ್ಲಿ ಕಂಡು ಬರುತ್ತಿದ್ದು , ಈ ವೀಡಿಯೋ ನೋಡಿದವರಿಗೆ ಗುಂಡಿನ ಮತ್ತು ನೆತ್ತಿಗೆ ಏರಿದೆ ಎಂದು ಮಾತನಾಡುತ್ತಿದ್ದಾರೆ.

https://www.instagram.com/reel/ClwVhsLqzva/?utm_source=ig_web_copy_link

ಅಷ್ಟೆ ಅಲ್ಲ…ಕ್ಯಾಮರಾಮನ್‌ಗಳು ಕೂಡ ಏನೇ ಹೇಳಿದರೂ ಆಕೆಯ ಅರಿವಿಗೆ ಬರುತ್ತಿರಲಿಲ್ಲ. ಕೊನೆಗೆ, ನಿಮ್ಮ ಹಿಂದೆ ಒಬ್ಬ ಡ್ರೈವರ್ ಇದ್ದಾನೆ ಎಂದು ಯಾರೋ ತಿಳಿಸಿದ ಬಳಿಕ ಜಾನ್ವಿ ಕಪೂರ್ ವಾಸ್ತವ ಪ್ರಪಂಚಕ್ಕೆ ಬಂದಿದ್ದು, ಡ್ರೈವರ್ ಅನ್ನು ಗುರುತಿಸಿದ್ದಾರೆ. ಹೀಗಾಗಿ, ಜಾನ್ವಿ ಅವರ ಈ ವಿಡಿಯೋ ನೋಡಿದ ಜನ ಗುಂಡಿನ ಮತ್ತಿನಲ್ಲಿದ್ದರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಒಂದಲ್ಲ ಒಂದು ವಿಚಾರಕ್ಕೆ ಟ್ರೊಲ್ ಆಗುವ ಜಾನ್ವಿ ಕಪೂರ್ ಈಗ ಮತ್ತೆ ಟ್ರೋಲ್ ಆಗುತ್ತಿದ್ದಾರೆ. ಇಷ್ಟು ದಿನ ಉಡುಗೆ ವಿಚಾರವಾಗಿ ಟ್ರೋಲ್‌ ಆಗುತ್ತಿದ್ದ ಜಾನ್ವಿ ಈಗ ಕುಡಿದಿರುವ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಹೆಚ್ಚಿನವರು ಜಾನ್ವಿ ಈ ಲೋಕದಲ್ಲಿಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೆ ಕೆಲವರು ಕುಡಿದಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆಯಾಗಿ ಜಾನ್ವಿಯ ಈ ವಿಡಿಯೋ ಎಲ್ಲೆಡೆ ಸಂಚಲನ ಮೂಡಿಸಿ ಚರ್ಚಾ ವಿಷಯವಾಗಿ ಮಾರ್ಪಟ್ಟಿರುವುದು ಸುಳ್ಳಲ್ಲ.

Leave A Reply

Your email address will not be published.