Dye Jeans: ಜೀನ್ಸ್‌ ಪ್ರಿಯರೇ ನೀವು ಡೈ ಜೀನ್ಸ್ ಧರಿಸ್ತೀರಾ? ಫ್ಯಾಷನ್​ ಗಾಗಿ ಆರೋಗ್ಯ ಹಾಳು ಮಾಡ್ಕೋಬೇಡಿ | ಎಚ್ಚರ

ಫ್ಯಾಷನ್ ಮಾಡುವುದು ತಪ್ಪಲ್ಲ. ಮನುಷ್ಯರು ಎಂದಿಗೂ ತಮ್ಮ ಯೌವ್ವನದ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಹಾಗೂ ಹೊಸತನವನ್ನು ಇಷ್ಟಪಡುತ್ತಾರೆ. ಫ್ಯಾಶನ್ ಎಂದಾಗ ಸ್ವಲ್ಪ ಜಾಗರೂಕತೆ ವಹಿಸಬೇಕಾಗುತ್ತದೆ. ಫ್ಯಾಷನ್​ನಿಂದಾಗಿ ನಿಮ್ಮ ಆರೋಗ್ಯ ಕೆಡಬಹುದು ಎಚ್ಚರ. ನಿತ್ಯವೂ ಫ್ಯಾಷನ್ ಬದಲಾಗುತ್ತಲೇ ಇರುತ್ತದೆ, ಹಾಗಂತ ನಾವು ಫ್ಯಾಷನ್ ಮೊರೆ ಹೋಗಿ ನಮ್ಮ ಆರೋಗ್ಯ ಕೆಡಿಸಬಾರದು. ಉಡುಗೆ ತೊಡುಗೆಗಳಿಂದ ಹಿಡಿದು ಮೇಕಪ್‌ವರೆಗೆ ಎಲ್ಲಾ ಹೊಸ ಫ್ಯಾಷನ್ ಅನ್ನು ಅಳವಡಿಸಿಕೊಳ್ಳುವಾಗ ಆರೋಗ್ಯದ ಕಡೆಗೆ ಗಮನ ವಹಿಸುವುದು ಉತ್ತಮ.

 

ಮುಖ್ಯವಾಗಿ ಸೆಲೆಬ್ರಿಟಿಗಳು ಧರಿಸುವ ಜೀನ್ಸ್‌ನ ಬಣ್ಣ ಅಥವಾ ವಿನ್ಯಾಸವು ಟ್ರೆಂಡಿಯಾಗಿರುತ್ತದೆ, ನೀವೂ ಕೂಡ ಅದನ್ನೇ ಫಾಲೋ ಮಾಡ ಬಯಸಬಹುದು. ಫ್ಯಾಷನ್ ಮತ್ತು ಟ್ರೆಂಡಿ ಬಣ್ಣಗಳಿಂದಾಗಿ ಜನರು ಬಣ್ಣ ಹಾಕಿದ ಜೀನ್ಸ್ ಅನ್ನು ಅನೇಕ ಬಾರಿ ಧರಿಸಿರುತ್ತೀರಿ ಇದು ವಾಸ್ತವ ಸತ್ಯ ಆದರೆ ಜೀನ್ಸ್ ಗೆ ಬಣ್ಣ ಹಚ್ಚಲು ಹಲವು ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತದೆ.
ಮತ್ತು ಈ ರಾಸಾಯನಿಕವು ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿದೆ.

ಹೆಚ್ಚಾಗಿ ಜೀನ್ಸ್ ಧರಿಸುವರು ಈ ಮಾಹಿತಿ ತಿಳಿದು ಕೊಳ್ಳಲೇ ಬೇಕು :

  • ಚರ್ಮದ ಸಮಸ್ಯೆ ಗೆ ಬಿಗಿಯಾದ ಜೀನ್ಸ್ ಕಾರಣ, ನೀವು ಅನೇಕ ರೀತಿಯ ಚರ್ಮದ ಸೋಂಕುಗಳನ್ನು ಪಡೆಯಬಹುದು. ಇದು ರಕ್ತ ಪರಿಚಲನೆ ಮತ್ತು ನರಮಂಡಲದ ಮೇಲೂ ಪರಿಣಾಮ ಬೀರಬಹುದು.
  • ಜೀನ್ಸ್ ಅನ್ನು ಬೇರೆಯ ಕಲರ್ ಮಾಡಲು ಬಳಸುವ ಬಣ್ಣಗಳಲ್ಲಿ ಬಹಳಷ್ಟು ಸಿಂಥೆಟಿಕ್ ಕಂಡುಬರುತ್ತದೆ, ಇದರಿಂದಾಗಿ ಇದು ಚರ್ಮಕ್ಕೆ ತುಂಬಾ ಅಪಾಯಕಾರಿ ಎಂದು ಸಾಬೀತಾಗಿದೆ.
  • ಜೀನ್ಸ್ ಗೆ ಲೇಪಿಸುವ ಬಣ್ಣವು ಚರ್ಮದ ಮೇಲೆ ಅಲರ್ಜಿಯನ್ನು ಉಂಟುಮಾಡಬಹುದು. ನಿಮಗೆ ತಿಳಿದಿರುವಂತೆ, ಜೀನ್ಸ್ ತುಂಬಾ ಬಿಗಿಯಾಗಿರುತ್ತದೆ, ಈ ಬಣ್ಣಗಳು ಅಲರ್ಜಿಯನ್ನು ಉಂಟು ಮಾಡಬಹುದು.
  • ತುಂಬಾ ಬಿಗಿಯಾದ ಜೀನ್ಸ್ ಧರಿಸಬೇಡಿ ತುಂಬಾ ಬಿಗಿಯಾದ ಜೀನ್ಸ್ ಧರಿಸುವುದರಿಂದ ರಕ್ತ ಪರಿಚಲನೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ತುಂಬಾ ಬಿಗಿಯಾದ ಜೀನ್ಸ್ ಸಹ ನಿಮಗೆ ಅನಾನುಕೂಲವನ್ನು ಉಂಟುಮಾಡಬಹುದು.
  • ಫಲವತ್ತತೆ ಹೆಚ್ಚು ಬಿಗಿಯಾದ ಮತ್ತು ಬಣ್ಣಬಣ್ಣದ ಜೀನ್ಸ್ ಧರಿಸುವುದರಿಂದ ಮೂತ್ರನಾಳದಲ್ಲಿ ಊತ ಉಂಟಾಗುತ್ತದೆ ಎಂದು ಅನೇಕ ಸಂಶೋಧನೆಗಳಲ್ಲಿ ಬಹಿರಂಗಪಡಿಸಲಾಗಿದೆ. ಮತ್ತೊಂದೆಡೆ, ಪುರುಷರು ಬಿಗಿಯಾದ ಜೀನ್ಸ್ ಧರಿಸಿದರೆ, ಅವರ ವೀರ್ಯದ ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅಲ್ಲದೆ, ಶಿಲೀಂಧ್ರಗಳ ಸೋಂಕಿನ ಅಪಾಯವು ಹೆಚ್ಚಾಗುತ್ತದೆ.

ಈ ಮೇಲಿನ ಸಮಸ್ಯೆಗಳನ್ನು ತಪ್ಪಿಸಲು ಇತ್ತೀಚಿನ ಟ್ರೆಂಡ್ ಆಗಿರುವ ಜೀನ್ಸ್ ನ್ನು ಬಳಸುವಾಗ ಜಾಗೃತ ವಹಿಸುವುದು ಸೂಕ್ತ.

Leave A Reply

Your email address will not be published.