Ration Card: ಇನ್ಮುಂದೆ ಪಡಿತರ ಚೀಟಿದಾರರಿಗೆ ಉಚಿತವಾಗಿ ಸಿಗುತ್ತೆ 150 ಕೆಜಿ ಅಕ್ಕಿ: ಸರ್ಕಾರದಿಂದ ಮಹತ್ವದ ಘೋಷಣೆ

ರಾಜ್ಯದ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಸರ್ಕಾರ ವಿಭಿನ್ನ ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕ ನೆರವು, ಮಕ್ಕಳ ವ್ಯಾಸಂಗಕ್ಕೆ ಉಚಿತ ಶಿಕ್ಷಣ, ಉದ್ಯೋಗ ಅವಕಾಶ, ಮಹಿಳೆಯರಿಗೆ ಆರ್ಥಿಕ ನೆರವು ಹೀಗೆ ನಾನಾ ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ . ಜನತೆಯ ಆರ್ಥಿಕ ಸ್ಥಿತಿಗತಿಯನ್ನು ಪರಾಮರ್ಶೆ ನಡೆಸಿ ಅದರಂತೆ ಎಪಿಎಲ್ ಹಾಗೂ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿ, ಪಡಿತರ ಚೀಟಿ ವಿತರಣೆ ಮಾಡಿ ನೆರವಾಗುತ್ತಿವೆ.

 

ಪಡಿತರ ಚೀಟಿ ಫಲಾನುಭವಿಗಳಿಗೆ ಮತ್ತೊಮ್ಮೆ ಸಂತಸದ ಸುದ್ದಿ ಸಿಕ್ಕಿದೆ. ಇದೀಗ, ಪಡಿತರ ಚೀಟಿದಾರರಿಗೆ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು, ಈ ಯೋಜನೆಯಡಿ ಲಭ್ಯವಿರುವ ಪಡಿತರ ಬಗ್ಗೆ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ಹೌದು!!.ಪಡಿತರ ಚೀಟಿ ಮೂಲಕ ಪಡಿತರ ಚೀಟಿದಾರರಿಗೆ ಈಗ ಮೊದಲಿಗಿಂತ ಹೆಚ್ಚು ಅಕ್ಕಿ ದೊರೆಯಲಿದೆ. ಈ ಯೋಜನೆಯಡಿ ಬಡವರಿಗೆ 135 ರಿಂದ 150 ಕೆಜಿ ಅಕ್ಕಿ ಉಚಿತವಾಗಿ ಲಭ್ಯವಾಗಲಿದೆ.

ಪಡಿತರ ಚೀಟಿ ಹೊಂದಿರುವ ಕೋಟಿಗಟ್ಟಲೆ ಜನರಿಗೆ ಉಚಿತ ಪಡಿತರವನ್ನು ನೀಡಲಾಗುತ್ತದೆ. ಈಗ ಕಾರ್ಡ್ ಹೊಂದಿರುವವರಿಗೆ 150 ಕೆಜಿ ಉಚಿತ ಅಕ್ಕಿ ಸಿಗಲಿದ್ದು, ಈ ಕುರಿತು ಸರ್ಕಾರ ಘೋಷಣೆ ಮಾಡಿದೆ. ದಿನಂಪ್ರತಿ ಏರುತ್ತಿರುವ ಹಣದುಬ್ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರು ಸರ್ಕಾರದ ಈ ಯೋಜನೆಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಈ ಯೋಜನೆಯಲ್ಲಿ ಕುಟುಂಬ ಸದಸ್ಯರ ಸಂಖ್ಯೆಯನ್ನು ಆಧರಿಸಿ ಪಡಿತರ ವಿತರಣೆ ಮಾಡಲಾಗುತ್ತದೆ.

ಈ ಹಿಂದೆ 35 ಕೆಜಿ ಉಚಿತ ಅಕ್ಕಿ ಪಡೆಯುತ್ತಿದ್ದ ಪಡಿತರ ಚೀಟಿದಾರರಿಗೆ ಈಗ 135 ಕೆಜಿ ಅಕ್ಕಿ ನೀಡಲಾಗುತ್ತದೆ. ಇದರ ಜೊತೆಗೆ, ಕೆಲವು ಕಾರ್ಡ್ ಹೊಂದಿರುವವರಿಗೆ 150 ಕೆಜಿ ವರೆಗೆ ಉಚಿತ ಅಕ್ಕಿ ಸಿಗಲಿದ್ದು ಆದರೆ, ಇದಕ್ಕೆ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದೆ.

ಛತ್ತೀಸ್‌ಗಢದ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಈ ಘೋಷಣೆ ಮಾಡಿದ್ದು. ಇದರ ಅನುಕೂಲ ಪಡೆಯಲು, ನೀವು ಛತ್ತೀಸ್‌ಗಢದ ನಿವಾಸಿಯಾಗಿರಬೇಕಾಗುತ್ತದೆ. ಹೀಗಿದ್ದರೆ ಮಾತ್ರ 45 ಕೆಜಿಯಿಂದ 135 ಕೆಜಿಯವರೆಗಿನ ಅಕ್ಕಿಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬಹುದು. ಇದಲ್ಲದೇ ರಾಜ್ಯದ ಆದ್ಯತಾ ಪಡಿತರ ಚೀಟಿದಾರರಿಗೆ 15 ಕೆ.ಜಿ.ಯಿಂದ 150 ಕೆ.ಜಿ.ವರೆಗೆ ಅಕ್ಕಿ ಕೂಡ ಲಭ್ಯವಾಗಲಿದೆ.

ಈಗ ಛತ್ತೀಸ್‌ಗಢ ಸರ್ಕಾರವು ತನ್ನ ಕಾರ್ಡ್ ಹೊಂದಿರುವವರಿಗೆ 15 ರಿಂದ 150 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಿದ್ದು, ಛತ್ತೀಸ್‌ಗಢ ರಾಜ್ಯ ಸರ್ಕಾರದ ಆದ್ಯತೆಯ ಕಾರ್ಡ್‌ನಲ್ಲಿ, ಛತ್ತೀಸ್‌ಗಢ ಸರ್ಕಾರದ ಕೋಟಾಕ್ಕಿಂತ ಹೆಚ್ಚಿನ ಅಕ್ಕಿಯನ್ನು ನೀಡಲಾಗುತ್ತದೆ. ಇದರ ಅಡಿಯಲ್ಲಿ ಪಡಿತರ ಚೀಟಿದಾರರಿಗೆ ಕುಟುಂಬದ ಸದಸ್ಯರ ಆಧಾರದ ಮೇಲೆ 15 ರಿಂದ 150 ಕೆಜಿ ವರೆಗಿನ ಉಚಿತ ಅಕ್ಕಿ ವಿತರಿಸಲಾಗುತ್ತದೆ. ಕೇಂದ್ರ ಸರ್ಕಾರ ಎರಡು ತಿಂಗಳ ಹೆಚ್ಚುವರಿ ಅಕ್ಕಿಯನ್ನು ಸೇರಿಸಿದ್ದರಿಂದ ಒಂದೇ ಬಾರಿಗೆ ಅಕ್ಕಿಯ ಪ್ರಮಾಣ ಹೆಚ್ಚಾಗಲಿದೆ.

ಕೇಂದ್ರ ಸರಕಾರದಿಂದ ಉಚಿತ ಪಡಿತರ ವಿತರಣೆ ಅಕ್ಟೋಬರ್‌ನಲ್ಲಿಯೇ ಲಭ್ಯವಾಗಬೇಕಿತ್ತು ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಈಗ ರಾಜ್ಯ ಸರ್ಕಾರಕ್ಕೆ ಅಕ್ಟೋಬರ್-ನವೆಂಬರ್‌ನಲ್ಲಿ ಎರಡು ತಿಂಗಳ ಕಾಲ ಅಕ್ಕಿಯ ಕೋಟಾವನ್ನು ನೀಡಲಾಗಿದೆ.

ಅಂದರೆ, ಈಗ ಸರ್ಕಾರವು ತನ್ನದೇ ಆದ ಮತ್ತು ಕೇಂದ್ರ ಸರ್ಕಾರದ 2 ತಿಂಗಳ ಕೋಟಾವನ್ನು ಹೊಂದಿದ್ದು, ಈ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಪಡಿತರ ಚೀಟಿದಾರರಿಗೆ 5 ರಿಂದ 50 ಕೆಜಿ ಅಕ್ಕಿ ವಿತರಿಸಲಿದೆ.

Leave A Reply

Your email address will not be published.