ನಿಮಗೇನಾದರೂ ಕೇಂದ್ರದಿಂದ ಬಂದಿದಾ 2.20 ಲಕ್ಷ ನೀಡೋ ಸಾಲದ ವಿಷಯ? ಹಾಗಾದರೆ ಇದನ್ನು ಓದಲೇಬೇಕು!
ದೇಶದ ಮಹಿಳೆಯರ ಏಳಿಗೆಗಾಗಿ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪ್ರಧಾನಮಂತ್ರಿ ನಾರಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೇಂದ್ರ ಸರ್ಕಾರವು ಆರ್ಥಿಕ ನೆರವು ನೀಡುತ್ತಿದೆ ಎಂಬ ಸುಳ್ಳು ಸಂದೇಶವೊಂದು ಹರಿದಾಡುತ್ತಿದೆ.
ಈ ಸಂದೇಶದಲ್ಲಿ ‘ಪ್ರಧಾನ ಮಂತ್ರಿ ನಾರಿ ಶಕ್ತಿ ಯೋಜನೆ’ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ಮಹಿಳೆಯರಿಗೆ 2 ಲಕ್ಷದ 20 ಸಾವಿರ ರೂ.ಗಳನ್ನು ನೀಡಲಿದೆ ಎಂದು ‘ಇಂಡಿಯನ್ ಜಾಬ್’ ಯೂಟ್ಯೂಬ್ ಹೆಸರಿನ ಚಾನೆಲ್ ಹೇಳಿಕೊಳ್ಳುತ್ತಿದೆ. ಆದರೆ ಫ್ಯಾಕ್ಟ್‌ಚೆಕ್‌ನಿಂದ ತಿಳಿದು ಬಂದಿರುವ ಸತ್ಯ ಏನೆಂದರೆ, ಇದೊಂದು ಸುಳ್ಳು ಸುದ್ದಿಯಾಗಿದ್ದೂ ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ನಾರಿ ಶಕ್ತಿ ಯೋಜನೆ’ ಎಂದು ಕರೆಯಲ್ಪಡುವ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ, ಅಂತಹ ಯಾವುದೇ ನೆರವನ್ನು ಕೇಂದ್ರ ಸರ್ಕಾರ ಘೋಷಿಸಿಲ್ಲ ಎಂದು ಪಿಐಬಿ ಬಹಿರಂಗಪಡಿಸಿದೆ. ಕೇಂದ್ರ ಮತ್ತು ಅದರ ಎಲ್ಲಾ ಏಜೆನ್ಸಿಗಳು ಯಾವಾಗಲೂ ಇಂತಹ ಸುಳ್ಳು ಹಕ್ಕುಗಳ ವಿರುದ್ಧ ಜನರನ್ನು ಎಚ್ಚರಿಸುತ್ತಲೇ ಇದ್ದಾರೆ.
ಪರಿಶೀಲಿಸಿದ ಮೂಲಗಳು ಮತ್ತು ಸರ್ಕಾರಿ ಅಧಿಕಾರಿಗಳು ಮಾತ್ರ ನಮ್ಮ ಮಾಹಿತಿಯ ಮೂಲವಾಗಿರಬೇಕು ಎಂದು ಜನರು ತಿಳಿದುಕೊಳ್ಳಬೇಕು. ವಿನಾಕಾರಣ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದ್ದು, ಇದನ್ನು ನಂಬಬಾರದು. ಇದರ ಪ್ರಯೋಜನ ಪಡೆದು ಕೆಲವೊಂದು ಲಿಂಕ್‌ಗಳನ್ನು ಕಳುಹಿಸಲಾಗುತ್ತಿದ್ದು, ದಯವಿಟ್ಟು ಯಾರೂ ಅದರ ಮೇಲೆ ಕ್ಲಿಕ್ ಮಾಡಬಾರದು ಎಂದು ಸರ್ಕಾರ ಹೇಳಿದೆ.