ಮೂಕ ಪ್ರಾಣಿಯ ಮೇಲೆ ಮಾನವನ ಕ್ರೌರ್ಯ | ತನ್ನ ತೋಟದಲ್ಲಿ ಮೇಯುತ್ತಿದ್ದ ಹಸುನ ಗುಂಡಿಕ್ಕಿ ಕೊಂದ ಪಾಪಿ!!!

ಹಸುಗಳು ತನ್ನ ಎಸ್ಟೇಟ್’ಗೆ ನುಗ್ಗಿದವು ಎಂದು ಹಸುಗಳನ್ನು ಗುಂಡಿಕ್ಕಿ ಕೊಂದ ಅಮಾನವೀಯ ಘಟನೆಯೊಂದು ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದಲ್ಲಿ ನಡೆದಿದೆ. ನರೇಂದ್ರ ನಾಯ್ಡು ಒಡೆತನದ ಎಸ್ಟೇಟ್​ನಲ್ಲಿ ಹಸುಗಳು ಹುಲ್ಲು ಮೇಯುತ್ತಿದ್ದವು.ನನ್ನ ಜಾಗದಲ್ಲಿ ಮೇಯುತ್ತಿದೆ ಎಂಬ ಕಾರಣಕ್ಕಾಗಿ ಎಸ್ಟೇಟ್ ಮಾಲೀಕ ಮೂರು ಹಸುಗಳಲ್ಲಿ ಎರಡು ಹಸುಗಳನ್ನು ಗುಂಡಿಟ್ಟು ಕೊಂದು ಹಾಕಿದ್ದಾನೆ.

 

ಈ ಮೂರು ಹಸುಗಳು ಸಿ.ಕೆ.ಮಣಿ ಎಂಬುವರಿಗೆ ಸೇರಿದ್ದೂ, ಹಲವು ಹಸುಗಳನ್ನು ಸಾಕಿದ್ದರು. ಇವರು ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಮೊನ್ನೆ (ಡಿ.5) ರಂದು ಮಣಿಯ ಮೂರು ಹಸುಗಳಲ್ಲಿ ಒಂದು ಮಾತ್ರ ಮನೆಗೆ ವಾಪಾಸ್ ಆಗಿದ್ದೂ, ಆ ಹಸು ಕೂಡ ಗಂಭೀರವಾಗಿ ಗಾಯಗೊಂಡಿರುವುದನ್ನು ಮಣಿ ಗಮನಿಸಿದ್ದಾರೆ. ನಂತರ ಹಸುವಿಗೆ ಗುಂಡು ತಗುಲಿದ್ದು ಗೊತ್ತಾಗಿ ಚಿಕಿತ್ಸೆ ನೀಡಿದ್ದಾರೆ.

ಇನ್ನು ಉಳಿದ ಎರಡು ಹಸುಗಳನ್ನು ಹುಡುಕಾಡಲು ಹೋದಾಗ ಪಕ್ಕದ ಎಸ್ಟೇಟ್‌ನಲ್ಲಿ ಸತ್ತ ಹಸುಗಳ ದೇಹ ಪತ್ತೆಯಾಗಿದೆ. ಎಸ್ಟೇಟ್‌ನಲ್ಲಿ ಸತ್ತು ಬಿದ್ದಿದ್ದ ಹಸುಗಳ ದೇಹದ ಮೇಲೆ ಗುಂಡಿನ ಗುರುತುಗಳಿದ್ದು, ತನ್ನ ಹಸುಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಮಣಿ ಆರೋಪಿಸಿದ್ದಾರೆ.

ಘಟನೆ ಸಂಬಂಧಿಸಿದಂತೆ ಸಿ.ಕೆ.ಮಣಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಎಸ್ಟೇಟ್ ಮಾಲಿಕ ನರೇಂದ್ರ ನಾಯ್ಡು ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave A Reply

Your email address will not be published.