Vivo Y02: ಬಜೆಟ್ ಬೆಲೆಗೆ ಬೊಂಬಾಟ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ ವಿವೋ: ಎಷ್ಟು ರೂ.?

Share the Article

ಇತ್ತೀಚೆಗೆ ಸ್ಮಾರ್ಟ್ಫೋನ್ ಕಂಪನಿಗಳಿಂದ ಹೊಸ ಹೊಸ ಸ್ಮಾರ್ಟ್ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಗ್ರಾಹಕರ ಕಣ್ಮನ ಸೆಳೆಯಲು ಸ್ಮಾರ್ಟ್ಫೋನ್ ಗಳು ಪೈಪೋಟಿಗೆ ನಿಂತಿವೆ. ಪ್ರಸಿದ್ಧ ವಿವೋ ಕಂಪನಿಯ ಇದೀಗ ಹೊಸ Vivo Y02 ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಬಜೆಟ್ ಬೆಲೆಯ ಫೋನಾಗಿದೆ. ಇನ್ನೂ ಈ ಸ್ಮಾರ್ಟ್ಫೋನ್ ನ ಬೆಲೆ ಎಷ್ಟು? ಇದರ ಫೀಚರ್ಸ್ ಹೇಗಿದೆ? ಎಂಬುದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಈ ಹೊಸ Vivo Y02 ಸ್ಮಾರ್ಟ್‌ಫೋನ್‌ ತನ್ನ ವೈಶಿಷ್ಟ್ಯಗಳ ಮೂಲಕ ಗ್ರಾಹಕರ ಕಣ್ಮನ ಸೆಳೆಯಲು ಬರುತ್ತಿದೆ. ಈ ಸ್ಮಾರ್ಟ್ಫೋನ್ ಮೀಡಿಯಾಟೆಕ್‌ ಪ್ರೊಸೆಸರ್‌ ಅನ್ನು ಹೊಂದಿದ್ದು, ಬಲಿಷ್ಠವಾದ 5,000mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ ಅತ್ಯುತ್ತಮ ಫೀಚರ್ಸ್ಗಳನ್ನು ಒಳಗೊಂಡಿದೆ.

ಇನ್ನೂ ಈ ಹೊಸ ಸ್ಮಾರ್ಟ್ಫೋನ್ ವಿವೋ ಕಂಪನಿಯ ಅಧಿಕೃತ ವೆಬ್​ಸೈಟ್ ಮತ್ತು ರಿಟೇಲ್ ಸ್ಟೋರ್​ಗಳಲ್ಲಿ ಖರೀದಿಸಬಹುದಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ಫ್ಲಿಪ್​ಕಾರ್ಟ್ ಅಥವಾ ಅಮೆಜಾನ್​ನಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.

ಈ ಸ್ಮಾರ್ಟ್ಫೋನ್ 3GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದ್ದು, ಇದರ ಬೆಲೆ ಕೇವಲ 8,999 ರೂ. ಆಗಿದೆ. ಹಾಗೂ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.51 ಇಂಚಿನ ಫುಲ್‌ ಹೆಚ್‌ಡಿ+ ಫುಲ್ ವೀವ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಡಿಸ್​ಪ್ಲೇಯಲ್ಲಿನ ವಿಶೇಷತೆ ಏನೆಂದರೆ, ಇದು ಕಣ್ಣಿನ ಪ್ರೊಟೆಕ್ಷನ್ ಫೀಚರ್ ಹೊಂದಿದೆ. ವಾಟರ್​ಡ್ರಾಪ್ ಸ್ಟೈನ್​ನ ಕಟೌಟ್​ನಿಂದ ಕೂಡಿದೆ.

ಹಾಗೇ ಬಲಿಷ್ಠವಾದ ಮೀಡಿಯಾಟೆಕ್‌ ಹೀಲಿಯೊ P22 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಗೋ ಎಡಿಷನ್​ OS ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನೂ ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್ಫೋನ್ ನಿಮಗಾಗಿ.

Leave A Reply