ಹದಿಹರೆಯದ ಪ್ರೀತಿ, ಮದುವೆಯಾಗಲು ನಿರಾಕರಿಸಿದ ಡೆಂಟಲ್ ವಿದ್ಯಾರ್ಥಿನಿ | ಕತ್ತು ಸೀಳಿ ಕೊಂದನೇ ಟೆಕ್ಕಿ ಗೆಳೆಯ?

ಒಬ್ಬರಿಗೊಬ್ಬರು ಹುಡುಗ ಹುಡುಗಿಯರು ಒಡನಾಟ ಅಥವಾ ಸ್ನೇಹ ಬೆಳೆಸಿಕೊಳ್ಳುವುದೇನು ತಪ್ಪಲ್ಲ ಆದರೆ ನಿಮ್ಮ ಸ್ನೇಹ ಸಂಬಂಧದ ಒಡನಾಟಗಳು ಎಲ್ಲಿ ಹೋಗಿ ಯಾವ ಸ್ಥಿತಿಗೆ ತಲುಪಬಹುದು ಎಂಬ ಮುಂದಾಲೋಚನೆ ಮಾಡುವುದು ಉತ್ತಮ. ಸದ್ಯ ಇಲ್ಲೊಬ್ಬನು ಪ್ರೀತಿಸಿದಾಕೆ ಮದುವೆಯಾಗಲು ಒಪ್ಪಲಿಲ್ಲ ಎಂದು ಆಕೆಯನ್ನು ಕತ್ತು ಸೀಳಿ ಕೊಂದ ಘಟನೆ ಬೆಳಕಿಗೆ ಬಂದಿದೆ.

 

ಸದ್ಯ ಮುಂಬೈ ಮೂಲದ ತಪಸ್ವಿ ವಿಜಯವಾಡದ ಸಿದ್ದಾರ್ಥಾ ಮೆಡಿಕಲ್ ಕಾಲೇಜಿನಲ್ಲಿ ದಂತ ವಿಜ್ಞಾನ ಪದವಿಯ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದು ಆಕೆ ವಿಜಯವಾಡದಲ್ಲಿರುವ ಕಾಲೇಜು ಹಾಸ್ಟೆಲ್ ನಲ್ಲಿ ವಾಸವಿದ್ದಳು. ಈಕೆಗೆ ಸುಮಾರು ಸುಮಾರು ಎರಡು ವರ್ಷಗಳ ಹಿಂದೆ ಇನ್ ಸ್ಟಾಗ್ರಾಮ್ ಮೂಲಕ 26-ವರ್ಷ-ವಯಸ್ಸಿನ ಸಾಫ್ಟ್ ವೇರ್ ಇಂಜಿನೀಯರ್ ಆಗಿರುವ ಗ್ಯಾನೇಶ್ವರ್ ಪರಿಚಯ ಆಗಿತ್ತು.ನಂತರ ಅವರ ನಡುವೆ ಬಾಂಧವ್ಯ ಬೆಸೆದು ಪ್ರೀತಿಗೆ ತಿರುಗಿದೆ. ಆದರೆ ಕೆಲಸ ತಿಂಗಳ ನಂತರ ಇವರಿಬ್ಬರಿಗೆ ಆಗಾಗ ಜಗಳ ಮುನಿಸುಗಳು ಆಗುತ್ತಿದ್ದೂ ತಪಸ್ವಿ ಗ್ಯಾನೇಶ್ವರ್ ನ್ನು ದೂರವಿರಿಸಲು ಆರಂಭಿಸಿದ್ದಳು

ಆದರೆ ಗ್ಯಾನೇಶ್ವರ್ ಆಕೆಯಲ್ಲಿ ಮದುವೆ ಪ್ರಸ್ತಾಪವನ್ನು ಮಾಡಿದಾಗ ಆಕೆ ತಿರಸ್ಕರಿಸಿದ ಕೋಪದಿಂದ ಸರ್ಜರಿಗಳಿಗೆ ಉಪಯೋಗಿಸುವ ಚಾಕುವಿನಿಂದ ಆಕೆಯ ಗಂಟಲು ಸೀಳಿ ಕೊಂದಿರುವನೆಂದು ಆರೋಪಿಸಲಾಗಿದೆ.

ಪೊಲೀಸ್ ವರದಿ ಪ್ರಕಾರ ಸದ್ಯ ಈ ಭಯಾನಕ ಘಟನೆ ಮಂಗಳವಾರ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ತಕ್ಕೆಲಪಾಡು ಎಂಬಲ್ಲಿ ನಡೆದಿದೆ ಎಂದು ತಿಳಿಸಿದ್ದಾರೆ.

ಸದ್ಯ ವಿಜಯವಾಡದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಅಗಿ ಕೆಲಸ ಮಾಡುತ್ತಿದ್ದ ಗ್ಯಾನೇಶ್ವೆರ್ ಎನ್ನುವವನನ್ನು ಬಂಧಿಸಿ ಇಂಡಿಯನ್ ಪೀನಲ್ ಕೋಡ್ 302 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ,’ ಎಂದು ಸ್ಥಳೀಯ ಅಧಿಕಾರಿ ಬಂಡಾರು ಸುರೇಶ್ ಬಾಬು ತಿಳಿಸಿದ್ದಾರೆ.

ಸುಮಾರು 4 ತಿಂಗಳ ಹಿಂದೆ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ತಪಸ್ವಿ ಮತ್ತು ಗ್ಯಾನೇಶ್ವರ್ ನಡುವೆ ವಿರಸ ಉಂಟಾಗಿತ್ತು ಹಾಗೂ ಅವರು ಸಂಬಂಧ ಕಡಿದುಕೊಂಡಿದ್ದರು. ಅದಾದ ಮೇಲೆ ಅವನು ನಿರಂತರವಾಗಿ ತನ್ನನ್ನು ಮದುವೆಯಾಗುವಂತೆ ತಪಸ್ವಿಯನ್ನು ಪೀಡಿಸುತ್ತಾ ಕಿರುಕುಳ ನೀಡುತ್ತಿದ್ದ. ಅವನ ಹಿಂಸೆ ತಾಳಲಾರದೆ ಯವತಿಯು ಸುಮಾರು 10 ದಿನಗಳ ಹಿಂದೆ ತನ್ನ ಒಬ್ಬ ಕ್ಲಾಸ್ ಮೇಟ್ ಜೊತೆ ವಾಸ ಮಾಡತೊಡಗಿದ್ದಳು,’ ಎಂದು ಸುರೇಶ್ ಬಾಬು ಹೇಳಿದ್ದಾರೆ.

ಸೋಮವಾರ ರಾತ್ರಿ ಗ್ಯಾನೇಶ್ವರ್ ತಪಸ್ವಿ ವಾಸವಾಗಿದ್ದ ಅವಳ ಕ್ಲಾಸ್ ಮೇಟ್ ರೂಮಿಗೆ ತೆರಳಿ ಜಗಳ ಶುರುವಿಟ್ಟುಕೊಂಡಿದ್ದಾನೆ. ತಪಸ್ವಿಯ ಸಹಪಾಠಿ ಅವನನ್ನು ಶಾಂತಗೊಳಿಸುವ ಪ್ರಯತ್ನ ನಡೆಸಿದರೂ ಅವನು ಸುಮ್ಮನಾಗಿಲ್ಲ. ನಂತರ ಅವನು ತನ್ನ ಜೇಬಿನಲ್ಲಿದ್ದ ಸರ್ಜಿಕಲ್ ಚಾಕು ಹೊರತೆಗೆದು ತಪಸ್ವಿ ಮೇಲೆ ಹಲ್ಲೆ ನಡೆಸಿದ್ದಾನೆ. ಕೂಡಲೇ ಅವಳ ಸಹಪಾಠಿ ನೆರೆಹೊರೆಯವರ ಸಹಾಯ ಯಾಚಿಸಲು ಓಡಿದ್ದಾಳೆ .

ಆದರೆ ಅಷ್ಟರಲ್ಲಿ ಗ್ಯಾನೇಶ್ವರ್ ತಪಸ್ವಿ ಯ ಗಂಟಲು ಸೀಳಿ ಅವಳನ್ನು ಮತ್ತೊಂದು ರೂಮಿಗೆ ಎಳೆದೊಯ್ದು ಒಳಗಿನಿಂದ ಬೋಲ್ಟ್ ಹಾಕಿಕೊಂಡಿದ್ದ. ಕೂಡಲೇ ‘ನೆರೆಹೊರೆಯವರು ಬಾಗಿಲು ಮುರಿದು ಒಳಹೊಕ್ಕು ತನ್ನ ಕೈ ಕೊಯ್ದುಕೊಳ್ಳುವ ಪ್ರಯತ್ನದಲ್ಲಿದ್ದ ಗ್ಯಾನೇಶ್ವರ್ ನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಘಟನೆ ನಂತರ ತಪಸ್ವಿಯನ್ನು ಕೂಡಲೇ ಗುಂಟೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು ಅಷ್ಟರಲ್ಲಿ ಅವಳು ಪ್ರಾಣಬಿಟ್ಟಿದ್ದಳು. ಮರಣೋತ್ತರ ಪರೀಕ್ಷೆಗಾಗಿ ಅವಳ ದೇಹವನ್ನು ಗುಂಟೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ಮುಂದಿನ ತನಿಖೆ ಜಾರಿಯಲ್ಲಿದೆ ಮತ್ತು ಹೆಚ್ಚಿನ ಮಾಹಿತಿ ಗ್ಯಾನೇಶ್ವರ್ ವಿಚಾರಣೆ ನಂತರ ತಿಳಿದು ಬರಬೇಕಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Leave A Reply

Your email address will not be published.