ಸ್ಕಾಲರ್‌ಶಿಪ್ : ವಿದ್ಯಾರ್ಥಿಗಳಿಗೆ ಸಿಗಲಿದೆ ರೂ. 1 ಲಕ್ಷ ವಿದ್ಯಾರ್ಥಿವೇತನ | ಈ ಆಫರ್‌ ಮಿಸ್‌ ಮಾಡ್ಕೋಬೇಡಿ

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ
ಫೆಡರಲ್ ಬ್ಯಾಂಕ್ ಹಾರ್ಮಿಸ್ ಮೆಮೋರಿಯಲ್ ಫೌಂಡೇಶನ್ ವಿದ್ಯಾರ್ಥಿವೇತನವನ್ನು ನೀಡಲು ಯೋಜನೆ ರೂಪಿಸಿದೆ. ಈ ವಿದ್ಯಾರ್ಥಿ ವೇತನವನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನವು ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್ ಮತ್ತು ತಮಿಳುನಾಡಿನ ಪ್ರತಿಭಾವಂತ ವಿದ್ಯಾರ್ಥಿಗಳ ಅಧ್ಯಯನವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.

 

ಫೆಡರಲ್ ಬ್ಯಾಂಕ್ ಹಾರ್ಮಿಸ್ ಮೆಮೋರಿಯಲ್ ಫೌಂಡೇಶನ್ ಸ್ಕಾಲರ್‌ಶಿಪ್ 2022-23 ಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಮೊದಲನೇ ವರ್ಷದ ಎಂಬಿಬಿಎಸ್‌, ಇಂಜಿನಿಯರಿಂಗ್, ಬಿಎಸ್‌ಸಿ ನರ್ಸಿಂಗ್ ಮತ್ತು ಬಿಎಸ್ಸಿ ಅಗ್ರಿ ಸೇರಿದಂತೆ ಇನ್ನಿತರ ವೃತ್ತಿಪರ ಕೋರ್ಸ್‌ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು, ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿವೇತನದ ವಿವರಗಳು :

  • ವಿದ್ಯಾರ್ಥಿವೇತನದ ಹೆಸರು- ಫೆಡರಲ್ ಬ್ಯಾಂಕ್ ಹಾರ್ಮಿಸ್‌ ಮೆಮೋರಿಯಲ್ ಫೌಂಡೇಶನ್ ವಿದ್ಯಾರ್ಥಿವೇತನ.
  • ವಿದ್ಯಾರ್ಥಿವೇತನದ ಮೊತ್ತ – ಗರಿಷ್ಠ ರೂ. 1/- ಲಕ್ಷ.
  • ಎಂಬಿಬಿಎಸ್‌, ಇಂಜಿನಿಯರಿಂಗ್, ಬಿಎಸ್‌ಸಿ ನರ್ಸಿಂಗ್ ಮತ್ತು ಬಿಎಸ್ಸಿ ಅಗ್ರಿ ಸೇರಿದಂತೆ ಇನ್ನಿತರ ವೃತ್ತಿಪರ ಕೋರ್ಸ್‌ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಿಗಲಿದೆ.
  • ಕುಟುಂಬದ ಆದಾಯ ವು ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು
  • ಅರ್ಜಿ ಸಲ್ಲಿಸಲು ಲಿಂಕ್ – WWW.federalbank.co.in
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 31 ಆಗಿರುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

  • ಪಡಿತರ ಚೀಟಿ.
  • ಆಧಾರ್ ಕಾರ್ಡ್‌.
  • ಪ್ರವೇಶ ಪತ್ರ.
  • ಕಾಲೇಜಿನಿಂದ ದೃಢಿಕೃತ ಪ್ರಮಾಣ ಪತ್ರ.
  • ಶುಲ್ಕ ಪಾವತಿಸಿದ ರಶೀದಿ.
  • ಅರ್ಹತಾ ಪರೀಕ್ಷೆಯ ಅಂಕಪಟ್ಟಿಗಳ ಪ್ರತಿ.
  • ಆದಾಯ ಪ್ರಮಾಣ ಪತ್ರ ಪ್ರತಿ.
  • ವಿಶೇಷ ಚೆತನ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರಮಾಣ ಪತ್ರ.

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ, ಆರ್ಥಿಕವಾಗಿ ಸಹಾಯ ಮಾಡುವುದು ಈ ವಿದ್ಯಾರ್ಥಿವೇತನದ ಮುಖ್ಯ ಉದ್ದೇಶವಾಗಿದ್ದು, ಈ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳು ರಶೀದಿಗಳನ್ನು ಸಲ್ಲಿಸಿದ ನಂತರ ಕಾಲೇಜಿನ ಶುಲ್ಕ ರಚನೆಯ ಪ್ರಕಾರ ಪಾವತಿಸಿದ 100% ಬೋಧನಾ ಶುಲ್ಕ ಮತ್ತು ಇತರ ಶುಲ್ಕಗಳನ್ನು ನಗದು ಪ್ರಶಸ್ತಿಯನ್ನು ನೀಡಲಾಗುತ್ತದೆ.

ಈ ಮೇಲಿನ ವಿದ್ಯಾರ್ಥಿ ವೇತನದ ಸದುಪಯೋಗವನ್ನು ಅರ್ಹ ಬಡ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.