Maruti Suzuki : ಮಾರುತಿ ಕಾರು ಇದ್ದವರು ಇದನ್ನು ಖಂಡಿತಾ ಓದಬೇಕು | ಕಂಪನಿಯಿಂದ ಬಂದಿದೆ ಎಚ್ಚರಿಕೆಯ ಸಂದೇಶ!

ಇಂದಿನ ಜೀವನ ಶೈಲಿಗೆ ಅನುಗುಣವಾಗಿ ಪ್ರತಿಯೊಬ್ಬರ ಮನೆಯಲ್ಲೂ ವಾಹನಗಳು ಇರುವುದು ಸಹಜ. ದಿನನಿತ್ಯದ ಓಡಾಟಕ್ಕೆ ವಾಹನಗಳು ಅವಶ್ಯಕವಾಗಿದ್ದು, ಬಸ್ ಗಳಿಗೆ ಕಾಯುತ್ತಾ ಟ್ರಾಫಿಕ್ ನಡುವಲ್ಲಿ ಸಿಲುಕಿಕೊಂಡು ಗಂಟೆಗಟ್ಟಲೆ ಕಾಯುವ ಸಮಯದಲ್ಲಿ ವಾಹನಗಳು ನೆರವಾಗುತ್ತವೆ. ಆಫೀಸ್, ಕೆಲಸ, ಮನೆ ಹೀಗೆ ಎಲ್ಲ ಕಡೆ ಸಂಚರಿಸಲು ನೆರವಾಗುವ ವಾಹನಗಳಿಂದ ಬೇಕಾದಲ್ಲಿಗೆ ಬೇಕಾದ ಸಮಯಕ್ಕೆ ತೆರಳಬಹುದು.

 

ಮಾರುಕಟ್ಟೆಯಲ್ಲಿ ಹೆಸರು ಪಡೆದಿರುವ ಮಾರುತಿ ಸುಜುಕಿ ಕಾರುಗಳನ್ನು ಹೆಚ್ಚಾಗಿ ನೋಡಬಹುದಾಗಿದೆ. ಆದರೆ ಇದೀಗ ಮಾರುತಿ ಸುಜುಕಿ ಕಾರು ಹೊಂದಿರುವ ಗ್ರಾಹಕರಿಗೆ ಬಿಗ್​ ಶಾಕ್​ ಎದುರಾಗಿದ್ದು, ಅದರಲ್ಲಿ ಕೂಡಾ ಇತ್ತೀಚೆಗೆ ಮಾರುತಿ ಕಾರು ಖರೀದಿ ಮಾಡಿದ್ದರೆ ನಿಮಗೆ ಬ್ಯಾಡ್ ನ್ಯೂಸ್ ಇದೆ. ಹೌದು!! ಮಾರುತಿ ಸುಜುಕಿ ತಾಂತ್ರಿಕ ದೋಷದ ಕಾರಣದಿಂದ ಕಂಪನಿಯು ಸಿಯಾಜ್ ಸೇರಿದಂತೆ 5 ಮಾದರಿಗಳನ್ನು ಹಿಂಪಡೆಯುತ್ತಿದೆ.ಸದ್ಯ ತನ್ನ ಐದು ಮಾದರಿಗಳ 9125 ವಾಹನಗಳನ್ನು ಹಿಂಪಡೆದಿದೆ ಎನ್ನಲಾಗಿದೆ.

ಸಿಎನ್‌ಬಿಸಿ ಆವಾಜ್ ಪ್ರಕಾರ, ಇವುಗಳು ನವೆಂಬರ್ 2 ಮತ್ತು 28 ರ ನಡುವೆ ತಯಾರಿಸಲಾದ ಮಾದರಿಗಳಾಗಿದ್ದು, ಸೀಟ್ ಬೆಲ್ಟ್ ದೋಷದಿಂದ ಈ ಮಾದರಿಗಳನ್ನು ಹಿಂಪಡೆಯಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಇದರ ಜೊತೆಗೆ ಮಾರುತಿ ಸುಜುಕಿ ಕಂಪನಿಯ ಗ್ರಾಹಕರಿಗೆ ಇದೆ ಮಾದರಿಯ ಕಾರುಗಳನ್ನು ಹೊಂದಿದ್ದರೆ ಹಿಂದಿರುಗಿಸುವಂತೆ ಹೇಳಿದೆ.

ಈ ಹಿಂದೆಯೂ ಇದೇ ರೀತಿ ತನ್ನ ವ್ಯಾಗನಾರ್ ಕಾರುಗಳನ್ನು ಮಾರುತಿ ಹಿಂಪಡೆದಿದ್ದು, ಇದೀಗ, 5 ಮಾದರಿಗಳನ್ನು ಹಿಂಪಡೆಯಲು ನಿರ್ಧರಿಸಿದೆ.

ಮಾರುತಿ ಸುಜುಕಿ ಇದೀಗ ವರ್ಷಾಂತ್ಯದ ಆಫರ್ ಘೋಷಿಸಿದ್ದು, ಈ ಮೂಲಕ ಕಾರು ಮಾರಾಟದಲ್ಲಿ ದಾಖಲೆ ಸೃಷ್ಟಿ ಮಾಡಲು ಅಣಿಯಾಗಿದೆ. ಮಾರುತಿ ಸುಜುಕಿ ಆಯ್ದ ಕಾರುಗಳ ಮೇಲೆ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಮಾರುತಿ ಸುಜುಕಿ ವರ್ಷದ ಆರಂಭದಲ್ಲಿ ನವೀನ ಮಾದರಿಯ ಕಾರುಗಳ ಬಿಡುಗಡೆ, ಮಾರಾಟದಲ್ಲೂ ಚೇತರಿಕೆ ಕಾಣುವ ಮೂಲಕ ಉತ್ತಮವಾಗಿ ಸಾಗುತ್ತಿದೆ.

ಅಲ್ಲದೆ, ಮಾರುತಿ ಸುಜುಕಿ ಅಲ್ಟೋ 800 ಕಾರಿಗೆ ಗರಿಷ್ಠ 52,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಣೆ ಮಾಡಿದೆ. ಇದರಲ್ಲಿ 30,000 ನಗದು ಡಿಸ್ಕೌಂಟ್, 15,000 ರೂಪಾಯಿ ಎಕ್ಸ್‌ಜೇಂಜ್ ಬೋನಸ್, 7,000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಅನ್ನು ಕೂಡ ಒಳಗೊಂಡಿದೆ.

Leave A Reply

Your email address will not be published.