ತನ್ನ ಹುಟ್ಟುಹಬ್ಬವೆಂದು ಶಾಲೆಯಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಮಾಸ್ಕ್ ಧರಿಸಿದ ವ್ಯಕ್ತಿ ನೀಡಿದ ಚಾಕಲೇಟ್ | ಖುಷಿಯಿಂದ ಚಾಕಲೇಟ್ ತಿಂದ ಮಕ್ಕಳು ಆಸ್ಪತ್ರೆಗೆ ದಾಖಲು | ಆ ಚಾಕಲೇಟ್‌ನಲ್ಲೇನಿತ್ತು?
ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಲೇ ಇದೆ. ಎಲ್ಲಿವರೆಗೆ ಮೋಸ ಹೋಗುವವರು ಇರುತ್ತಾರೆ ಅಲ್ಲಿವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಮನುಷ್ಯ ಮಾಡುವ ಕೆಲವೊಂದು ಕೃತ್ಯಗಳು ಅನ್ಯಾಯಗಳು ಯಾಕಾಗಿ ಮಾಡುತ್ತಾರೆ ಎನ್ನುವುದು ಊಹಿಸಲು ಸಹ ಸಾಧ್ಯವಿಲ್ಲ. ಹೌದು ಇಲ್ಲೊಬ್ಬ
ಅಪರಿಚಿತ ವ್ಯಕ್ತಿಯೊಬ್ಬ ನೀಡಿದ ಚಾಕೇಟ್ ಅನ್ನು ತಿಂದು 17 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಹಾರಾಷ್ಟ್ರದ ನಾಗುರದಲ್ಲಿ ಶನಿವಾರ ನಡೆದಿದೆ.
ಮುಂಬೈ ನ ಉತ್ತರ ಅಂಬಾಝರಿ ರಸ್ತೆಯಲ್ಲಿರುವ ಮದನ್ ಗೋಪಾಲ್ ಪ್ರೌಢಶಾಲೆಯ 3ನೇ, 4ನೇ ಹಾಗೂ 5ನೇ ತರಗತಿಯ ವಿದ್ಯಾರ್ಥಿಗಳು ಊಟದ ಬಿಡುವಿನ ವೇಳೆ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮಕ್ಕಳಿಗೆ ಚಾಕ್ಲಟ್ ಅನ್ನು ವಿತರಿಸಿದ್ದಾನೆ.
ಚಾಕ್ಲಟ್ ಸೇವಿಸಿದ 1 ಗಂಟೆಯೊಳಗೆ 17 ವಿದ್ಯಾರ್ಥಿಗಳಿಗೆ ಎದೆನೋವು ಕಂಡುಬಂದಿದ್ದು, ಕೆಲವರು ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣವೇ ಅಸ್ವಸ್ಥ ಮಕ್ಕಳನ್ನು ಸೀತಾಬುಲ್ಲಿಯ ಲತಾ ಮಂಗೇಶ್ವರ್ ಆಸ್ಪತ್ರೆಗೆ ಸಾಗಿಸಲಾಯಿತು.
ವರದಿ ಪ್ರಕಾರ ತಮಗೆ ಚಾಕೆಟ್ ನೀಡಿದ ವ್ಯಕ್ತಿ ಕಪ್ಪು ಬಣ್ಣದ ಕಾರಿನಲ್ಲಿ ಬಂದಿದ್ದು ಮಾಸ್ಕ್ ಧರಿಸಿದ್ದ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಸೀತಾಬುಲ್ಲಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಹಿಡಿಯಲು ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಶಾಲಾ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.
ಸದ್ಯ ಅಸ್ವಸ್ತರಾಗಿದ್ದ ಎಲ್ಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರು ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈಗಾಗಲೇ ಮಕ್ಕಳಿಗೆ ಚಾಕ್ಲಟ್ ನೀಡಿದ ಅಪರಿಚಿತ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಅಪರಿಚಿತನ ಬಂಧನ ಆದ ನಂತರ ತಿಳಿದು ಬರಬೇಕಿದೆ.