ಪಿಂಚಣಿದಾರರಿಗೆ ಮುಖ್ಯವಾದ ಮಾಹಿತಿ | ಈ ಕೆಲಸ ಮಾಡಿಲ್ಲದಿದ್ದರೇ ವಾರ್ಷಿಕ ಪಿಂಚಣಿ ಸ್ಥಗಿತ!
ಸರ್ಕಾರವು ದುರ್ಬಲ ವರ್ಗದ ಜನರಿಗಾಗಿ ವೇತನವನ್ನು ನೀಡುತ್ತಿದೆ. ಅವುಗಳಲ್ಲಿ ತಮ್ಮ ಜೀವನವನ್ನು ನಿರ್ವಹಿಸಲು ಕಷ್ಟ ಪಡುವ ಹಿರಿಯ ನಾಗರಿಕರಿಗೆ ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷಾ,18 ವರ್ಷಗಳಿಗಿಂತ ಮೇಲ್ಪಟ್ಟ ನಿರ್ಗತಿಕ ವಿಧವೆಯರಿಗೆ ವಿಧವಾ ವೇತನ, ಅಂಗವೈಫಲ್ಯ ಉಳ್ಳವರಿಗೆ ಅಂಗವಿಕಲ ವೇತನವನ್ನು ನೀಡುತ್ತಿದೆ.
ಇದೀಗ ಈ ವೇತನದಲ್ಲಿ ಮಾಸಿಕ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ತಮ್ಮ ಕಂದಾಯ ಇಲಾಖೆ ಸಿಬ್ಬಂದಿಯವರಲ್ಲಿ ಮೂಲ ಆಧಾರ್, ಬ್ಯಾಂಕ್ ಪಾಸ್ ಬುಕ್ ನೊಂದಿಗೆ ಖುದ್ದಾಗಿ ಹಾಜರಾಗಿ ತಮ್ಮ ಪಿಂಚಣಿಯ ವಾರ್ಷಿಕ ಪರಿಶೀಲನೆ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಹೊಸಪೇಟೆ ಗ್ರೇಡ್-2 ತಹಶೀಲ್ದಾರ್ ತಿಳಿಸಿದ್ದಾರೆ.
ಹೊಸಪೇಟೆ ತಹಶೀಲ್ದಾರರ ಕಚೇರಿ, ಕಮಲಾಪುರ ನಾಡಕಚೇರಿ, ಮರಿಯಮ್ಮನಹಳ್ಳಿ ನಾಡಕಚೇರಿಗಳಿಗೆ ಪಿಂಚಣಿದಾರರು ಖುದ್ದಾಗಿ ಹೋಗಿ ವಾರ್ಷಿಕ ಪರಿಶೀಲನೆಯನ್ನು ಮಾಡಿಸಬೇಕು. ತಪ್ಪಿದಲ್ಲಿ ಪಿಂಚಣಿ ಯೋಜನೆಯಲ್ಲಿ ಆಸಕ್ತಿ ಇಲ್ಲವೆಂದು ಪರಿಗಣಿಸಿ ಡಿ.30ರ ನಂತರ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.
ತಾತ್ಕಾಲಿಕವಾಗಿ ಸ್ಥಗಿತಗೊಂಡ ಪ್ರಕರಣಗಳಲ್ಲಿ ಫಲಾನುಭವಿಗಳು ತಮ್ಮ ಅಧಾರ್ ಮತ್ತು ಬ್ಯಾಂಕ್/ಅಂಚೆ ಖಾತೆ ವಿವರಗಳನ್ನು ಸಲ್ಲಿಸಿದ ನಂತರ ಮರುಚಾಲನೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.