ಟಾಟಾ ಕಾರು ಖರೀದಿಸುವ ಯೋಚನೆ ಇದ್ದರೆ ಈಗಲೇ ಖರೀದಿಸಿ | ಹೊಸ ವರ್ಷಕ್ಕೆ ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ
ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಬಿಗುತ್ತಿದೆ. ನೀವು ಸಹ ಹೊಸ ಕಾರು ಖರೀದಿಸಲು ಬಯಸಿದರೆ, ಈಗಲೇ ಖರೀದಿಸಿ. ಏಕೆಂದರೆ ಈಗ ಆಫರ್‌ಗಳಿವೆ. ಅಲ್ಲದೆ, ಮುಂದಿನ ವರ್ಷದಿಂದ ಕಾರುಗಳ ಬೆಲೆಗಳು ಹೆಚ್ಚಾಗಲಿವೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಸದ್ಯ ಮುಂದಿನ ವರ್ಷದಿಂದ ಕಾರುಗಳ ಬೆಲೆ ಏರಿಕೆಯಾಗಲಿದೆ.ಈಗಾಗಲೇ ಪ್ರಸಿದ್ಧ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಕಾರುಗಳ ಬೆಲೆಯನ್ನು ಪ್ರಕಟಿಸಿದೆ. ನೀವು ಹೊಸ ಕಾರು ಖರೀದಿಸುವ ಯೋಚನೆಯಲ್ಲಿದ್ದರೆ ಈ ವರ್ಷವೇ ಖರೀದಿ ಮಾಡಿಬಿಡಿ.
ಅದಲ್ಲದೆ ಟಾಟಾ ಮೋಟಾರ್ಸ್ ಕೂಡ ಮುಂದಿನ ವರ್ಷದಿಂದ ಪ್ರಯಾಣಿಕ ವಾಹನಗಳ ಬೆಲೆಯನ್ನು ಹೆಚ್ಚಿಸಲು ಸಿದ್ಧವಾಗುತ್ತಿದೆಯಂತೆ. ಮಾರುತಿ ಸುಜುಕಿಯ ಹಾದಿಯನ್ನೇ ಟಾಟಾ ಮೋಟಾರ್ಸ್ ಕೂಡ ಅನುಸರಿಸಲಿದೆ.
ಹೌದು ಮುಂದಿನ ವರ್ಷ ಏಪ್ರಿಲ್ 1 ರಿಂದ ಕಟ್ಟುನಿಟ್ಟಾದ ನಿಯಮಗಳು ಜಾರಿಗೆ ಬರಲಿವೆ. ಅದರಂತೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆಯನ್ನು ಹೆಚ್ಚಿಸುವ ಅವಕಾಶವಿದೆಯಂತೆ. ಎಲ್ಲಾ ಟಾಟಾ ಮೋಟಾರ್ಸ್ ಕಾರುಗಳು ಸಹ ಈ ಮಾನದಂಡಗಳನ್ನು ಅನುಸರಿಸುತ್ತವೆ ಎಂದು ಮಾಹಿತಿ ಇದೆ.
ಏಪ್ರಿಲ್ 1, 2023 ರಿಂದ, ವಾಹನಗಳು ಆನ್‌ಬೋರ್ಡ್ ಸ್ವಯಂ-ರೋಗನಿರ್ಣಯ ಸಾಧನಗಳನ್ನು ಹೊಂದಿರಬೇಕು. ಇವುಗಳು ನೈಜ-ಸಮಯದ ಡ್ರೈವಿಂಗ್ ಎಮಿಷನ್ ಮಟ್ಟವನ್ನು ಒದಗಿಸುತ್ತವೆ. ಈ ಸಾಧನಗಳು ಮಾಲಿನ್ಯಕಾರಕ ಹೊರಸೂಸುವಿಕೆಯನ್ನು ಉಂಟುಮಾಡುವ ನಿರ್ಣಾಯಕ ಘಟಕಗಳ ಪರಿಸರವನ್ನು ನಿಯತಕಾಲಿಕವಾಗಿ ಮೇಲ್ವಿಚಾರಣೆ ಮಾಡುತ್ತವೆ. ಪ್ರೋಗ್ರಾಮ್ ಮಾಡಲಾದ ಇಂಧನ ಇಂಜೆಕ್ಟರ್‌ಗಳು ಸಹ ಇರುತ್ತವೆ. ಸೆಮಿಕಂಡಕ್ಟರ್‌ಗಳನ್ನು ಸಹ ನವೀಕರಿಸಲಾಗುವುದು ಎಂದು ಮಾಹಿತಿ ಇದೆ.
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಶೈಲೇಶ್ ಚಂದ್ರ ಅವರು ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಹೇಳಿದ್ದಾರೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಎಂದು ತಿಳಿಸಿದರು. ಹಾಗೂ ನಿಯಂತ್ರಣ ಬದಲಾವಣೆಗಳಿಂದಾಗಿ ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ ಎಂದು ಅವರು ಹೇಳಿದರು. ಅದಲ್ಲದೆ ಮುಂದಿನ ತ್ರೈಮಾಸಿಕದಿಂದ ವಸ್ತುಗಳ ಬೆಲೆ ಇಳಿಕೆಯ ಪರಿಣಾಮವನ್ನು ಕಾಣಬಹುದು ಎಂದು ತಿಳಿಸಲಾಗಿದೆ.
ಬ್ಯಾಟರಿ ಬೆಲೆಯೂ ಏರಿಕೆಯಾಗಿದ್ದು ಹೀಗಾಗಿ ಬೆಲೆ ಏರಿಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು. ಬ್ಯಾಟರಿ ಬೆಲೆಗಳು, ನಿಯಂತ್ರಣ ಬದಲಾವಣೆಗಳು ಮತ್ತು ಸರಕುಗಳ ಬೆಲೆಗಳಂತಹ ಅಂಶಗಳು ಪ್ರಭಾವ ಬೀರುತ್ತಿವೆ ಎಂದು ಅವರು ವಿವರಿಸಿದರು.
ಸದ್ಯ ಟಾಟಾ ಮೋಟಾರ್ಸ್ ಮಾರುಕಟ್ಟೆಯಲ್ಲಿ ಪಂಚ್, ನೆಕ್ಸಾನ್, ಹ್ಯಾರಿಯರ್, ಸಫಾರಿ ಸೇರಿದಂತೆ ವಿವಿಧ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಇದು ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. Tiago EV ಮತ್ತು Nexon EV ಮಾದರಿಗಳನ್ನು ನೀಡುತ್ತಿದೆ.
ಹೌದು ಈ ಎಲ್ಲಾ ಕಾರಣದಿಂದ ಮುಂದಿನ ವರ್ಷದಿಂದ ಕಾರುಗಳ ಬೆಲೆಗಳು ಹೆಚ್ಚಾಗಲಿವೆ ಎಂಬ ಸುದ್ದಿ ಇದೆ.