ಇಯರ್‌ ಫೋನ್‌ ಬಳಸೋ ಮುನ್ನ ಎಚ್ಚರ. : ಈ ಗಂಭೀರ ಸಮಸ್ಯೆ ಎದುರಾಗಬಹುದು ಇಲ್ಲಿದ ಓದಿ

ನಿಮ್ಮ ಮಕ್ಕಳು ಸದಾ ಇಯರ್ ಫೋನ್ ಬಳಕೆ ಮಾಡುತ್ತಾರಾ, ಡಿಜೆ ಹಾಗೂ ಅಬ್ಬರದ ಮ್ಯೂಸಿಕ್ ಕೇಳುತ್ತಿರುತ್ತಾರಾ? ಆದ್ದರಿಂದ ಪೂರಕ ಎಚ್ಚೆತ್ತುಕೊಳ್ಳಲೇ ಬೇಕು. ಕೋವಿಡ್ ನಂತರ ಮಕ್ಕಳು ಈಯರ್ ಫೋನ್ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ, ಆನ್‌ಲೈನ್ ತರಗತಿಗಳಿಂದ ಅಭ್ಯಾಸ ಆರಂಭಿಸಿದ್ದಾರೆ, ಇದೀಗ ಶಾಲೆಯಿಂದ ಆ ಅಭ್ಯಾಸ ಬಿಡುತ್ತಿಲ್ಲ. ಸದಾ ಇಯರ್ ಫೋನ್ ಬಳಕೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಈ ಕುರಿತ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ

 

ಶ್ರವಣ ದೋಷ: ಎಲ್ಲಾ ಇಯರ್‌ಫೋನ್‌ಗಳು ಹೆಚ್ಚಿನ ಡೆಸಿಬಲ್ ತರಂಗಗಳನ್ನು ಹೊಂದಿರುತ್ತವೆ. ಇದನ್ನು ಬಳಸುವುದರಿಂದ ನೀವು ಶಾಶ್ವತವಾಗಿ ಕೇಳುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು.

ಮೆದುಳಿಗೆ ಹಾನಿ: ಇಯರ್‌ಫೋನ್‌ ಮೂಲಕ ಹೆಚ್ಚು ಹೊತ್ತು ಸಂಗೀತ ಕೇಳುವುದರಿಂದ ಮೆದುಳಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಈ ಗಂಭೀರ ಸಮಸ್ಯೆಗಳನ್ನು ತಪ್ಪಿಸಲು ಇಯರ್‌ಫೋನ್‌ಗಳನ್ನು ಮಿತವಾಗಿ ಬಳಸಿ.

ಕಿವಿಯ ಸೋಂಕಿಗೆ ಕಾರಣ  : ದೀರ್ಘಕಾಲದವರೆಗೆ ಸಂಗೀತವನ್ನು ಕೇಳುವುದು ಸಹ ಕಿವಿ ಸೋಂಕಿಗೆ ಕಾರಣವಾಗಬಹುದು. ನೀವು ಯಾರೊಂದಿಗಾದರೂ ಇಯರ್‌ಫೋನ್‌ಗಳನ್ನು ಹಂಚಿಕೊಂಡಾಗ, ನಂತರ ಅವುಗಳನ್ನು ಸ್ಯಾನಿಟೈಜರ್‌ನಿಂದ ಸ್ವಚ್ಛಗೊಳಿಸಿ.

ಹೃದ್ರೋಗ ಮತ್ತು ಕ್ಯಾನ್ಸರ್: ಜೋರಾಗಿ ಸಂಗೀತವನ್ನು ಕೇಳುವುದರಿಂದ ಮಾನಸಿಕ ಸಮಸ್ಯೆಗಳು, ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ.

ಕಿವುಡುತನ ಸಮಸ್ಯೆ: ಇದರ ನಿರಂತರ ಬಳಕೆಯು ಕೇಳುವ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಕೇಳುವ ಸಾಮರ್ಥ್ಯವು 40 ರಿಂದ 50 ಡೆಸಿಬಲ್ಗಳಷ್ಟು ಕಡಿಮೆಯಾಗುತ್ತದೆ. ಇದು ಕಿವುಡುತನಕ್ಕೂ ಕಾರಣವಾಗಬಹುದು.
ಇಯರ್ ಫೋನ್ ಎಷ್ಟು ಬಳಕೆ ಸೇಫ್?
ಮನುಷ್ಯ ದಿನದಲ್ಲಿ 60 ನಿಮಿಷಗಳಿಗಿಂತ ಹೆಚ್ಚು ಹೊತ್ತು ಇಯರ್ ಫೋನ್ ಬಳಕೆ ಮಾಡಬಾರದು ಎಂದು ಅಧ್ಯಯನ ಹೇಳುತ್ತದೆ.

Leave A Reply

Your email address will not be published.