ಅನ್ನದಾತರಿಗೆ ಖುಷಿಯ ಸುದ್ದಿ | ಈ ವಿಷಯ ನಿಮ್ಮನ್ನು ಟೆನ್ಶನ್‌ ನಿಂದ ದೂರ ಮಾಡುತ್ತೆ

ಇಂದಿಗೂ ದೇಶದಲ್ಲಿ ಕೃಷಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರಿಂದ ದೇಶದ ಜನತೆ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುತ್ತಿದೆ. ಆದರೆ, ಕೃಷಿಯನ್ನೇ ನೆಚ್ಚಿಕೊಂಡು ಹಗಲಿರುಳು ದುಡಿಯುವ ಅನ್ನದಾತನ ಬದುಕು ಸಾಲದ ಸುಳಿಯಲ್ಲಿ ಸಿಲುಕಿ, ಬೆಳೆದ ಬೆಳೆಗೆ ಸೂಕ್ತಬೆಲೆ ದೊರೆಯದೆ ಪರಿತಪಿಸುವಂತಾಗಿದೆ.
ಈ ನಡುವೆ ಸರ್ಕಾರ ಕೃಷಿಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಬೆಂಬಲ ಬೆಲೆ ನಿಗದಿ, ಕೃಷಿ ಉಪಕರಣಗಳ ಮೂಲಕ, ಆರ್ಥಿಕ ನೆರವು ಒದಗಿಸುವ ಜೊತೆಗೆ ಕಡಿಮೆ ಬೆಲೆಯಲ್ಲಿ ರಸಗೊಬ್ಬರ, ಬಿತ್ತನೆ ಬೀಜ ಹೀಗೆ ನಾನಾ ರೀತಿಯಲ್ಲಿ ಅನ್ನದಾತನ ಬದುಕು ಹಸನಾಗಲೂ ನೆರವಾಗುತ್ತಿದೆ.

 

Farmer Grievance Redressal Portal: ಇದೀಗ, ಕೇಂದ್ರ ಸರ್ಕಾರ ರೈತರ ಕುಂದುಕೊರತೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಪೋರ್ಟಲ್ ರಚನೆ ಮಾಡಲಿದೆ. ಹೀಗಾಗಿ, ಪ್ರಾಯೋಗಿಕವಾಗಿ ಪ್ರಯೋಗ ನಡೆಸಲು ಕೇಂದ್ರ ಸರ್ಕಾರ ಛತ್ತೀಸ್‌ಗಢ ವನ್ನು ಆಯ್ದುಕೊಂಡಿದೆ. ಈ ಪೋರ್ಟಲ್‌ ಮುಖೇನ ರೈತರ ಸಲಹೆಗಳನ್ನೂ ಸರ್ಕಾರ ಪಡೆದುಕೊಳ್ಳಲಿದೆ.

ಕೇಂದ್ರ ಸರ್ಕಾರ ರೈತರಿಗಾಗಿ ಈ ವಿಶೇಷ ಸೇವೆ ಆರಂಭಿಸಲು ಮುಂದಾಗಿದೆ . ರೈತರು ಯಾವುದೇ ದೂರುಗಳನ್ನು ನೀಡಬೇಕಾದರು ಕೂಡ ಈ ಪೋರ್ಟಲ್ ಬಳಸಬಹುದು. ಅಂದರೆ, ರೈತ ವಿಮಾ ಯೋಜನೆಯ ಲಾಭ ಸಿಗದಿರುವ ಬಗ್ಗೆ ದೂರು ನೀಡಿದರೆ ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ.

ಬೀಜ, ಗೊಬ್ಬರದ ವಿಚಾರದಲ್ಲಿ ಅಧಿಕಾರಿಗಳು ಅಡಚಣೆ ಉಂಟು ಮಾಡಿದರು ಕೂಡ ದೂರು ನೀಡಬಹುದಾಗಿದೆ.
ಸರಕಾರ ರೈತರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದರು ಕೂಡ ಕೆಲ ಕಾರಣಗಳಿಂದ ಬೆಳೆ ವಿಮೆ ಯೋಜನೆ ಇಲ್ಲವೇ ರಸಗೊಬ್ಬರ ಯೋಜನೆಗಳ ಪ್ರಯೋಜನಗಳು ರೈತರಿಗೆ ತಲುಪದಿರುವುದು ರೈತರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದ್ದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರಕಾರ ಮುಂದಾಗಿದೆ.

ಸರ್ಕಾರ ಜಾರಿಗೆ ತಂದ ಯೋಜನೆಗಳ ಪ್ರಯೋಜನ ಪಡೆಯಲು ರೈತರು ತೊಂದರೆ ಅನುಭವಿಸಬೇಕಾಗುತ್ತದೆ. ಇಷ್ಟೇ ಅಲ್ಲದೆ, ರೈತರು ಆಗಾಗ ಅಧಿಕಾರಿಗಳ ಕಿರುಕುಳ ಎದುರಿಸುವ , ಸರ್ಕಾರಿ ಕಚೇರಿಗೆ ಆಗಾಗ ಅಲೆದಾಡುವ ಪರಿಸ್ಥಿತಿ ಎದುರಾಗುತ್ತದೆ. ಆದರೆ, ಈ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರೈತರ ಪ್ರತಿ ದ್ವನಿಯಾಗಿ ಸರ್ಕಾರವನ್ನು ತಲುಪಲು ಕೇಂದ್ರ ಸರ್ಕಾರವು ರೈತ ಕುಂದುಕೊರತೆ ನಿವಾರಣಾ ಪೋರ್ಟಲ್ ರಚಿಸಲು ತಯಾರಿ ನಡೆದಿದೆ. ಹೀಗಾಗಿ, ಛತ್ತೀಸ್‌ಗಢದಲ್ಲಿ ಇದರ ಪ್ರಯೋಗ ಆರಂಭವಾಗಿದೆ.

ಇದೇ ರೀತಿ, ಫಸಲ್ ಬಿಮಾ ಯೋಜನೆಯ ಪ್ರಯೋಜನ ಸಿಗದೇ ಇದ್ದಾಗ ಅದಕ್ಕೆ ಹೊಣೆಗಾರರಾದವರ ​​ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಬೀಜಗಳು ಮತ್ತು ರಸಗೊಬ್ಬರಗಳ ಲಭ್ಯತೆಯಿಲ್ಲದ ಬಗ್ಗೆ ದೂರುಗಳು ಸುಲಭವಾಗಿ ಎಫ್‌ಸಿಐ ಬೆಳೆ ಖರೀದಿಸದಿದ್ದರೂ ದೂರು ನೀಡಬಹುದಾಗಿದೆ. ಈ ಪೋರ್ಟಲ್ ಮೂಲಕ ರೈತರು ತಮ್ಮ ಕುಂದು ಕೊರತೆಗಳ ಬಗ್ಗೆ ಮಾಹಿತಿ ನೀಡಬಹುದಾಗಿದೆ.

Leave A Reply

Your email address will not be published.