ಮಂಗಳೂರು:ಕುಡುಕನಿಗೆ ಸಿಕ್ಕಿದ 10 ಲಕ್ಷ ನೋಟಿನ ಕಂತೆ!!ಠಾಣೆ ಮೆಟ್ಟಿಲೇರಿದ ಬಳಿಕ ಮುಚ್ಚಿಹೋಯಿತೇ!? ಮಂಗಳೂರು ನಗರ ಪೊಲೀಸರ ನಡೆಯಲ್ಲಿ ಹಲವು ಅನುಮಾನ!?

ಮಂಗಳೂರು:ಕುಡುಕನಿಗೆ ಸಿಕ್ಕಿದ 10 ಲಕ್ಷ ನೋಟಿನ ಕಂತೆ!!ಠಾಣೆ ಮೆಟ್ಟಿಲೇರಿದ ಬಳಿಕ ಮುಚ್ಚಿಹೋಯಿತೇ!? ಮಂಗಳೂರು ನಗರ ಪೊಲೀಸರ ನಡೆಯಲ್ಲಿ ಹಲವು ಅನುಮಾನ!?

ಮಂಗಳೂರು: ನಗರದ ಪಂಪ್ ವೆಲ್ ನ ಬಳಿಯ ಬಾರ್ ಒಂದರ ಬಳಿ ನವೆಂಬರ್​ 27ರಂದು 2,000, 500 ರೂಂ ಮುಖಬೆಲೆಯ ಗರಿ ಗರಿನೋಟಿನ ಹಣದ ಬಾಕ್ಸ್ ಕುಡುಕರೊಬ್ಬರಿಗೆ ಸಿಕ್ಕಿದ್ದು,ಬಳಿಕ ಕುಡುಕನ ಸಹಿತ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದು,ದಿನಗಳು ಹಲವು ಕಳೆದರೂ ಈ ವರೆಗೆ ಯಾವುದೇ ಪ್ರಕರಣ ದಾಖಲಾಗದೆ ತೆರೆಮರೆಯಲ್ಲೇ ಮುಚ್ಚಿಹೋಗಿರುವ ವಿಚಾರವೊಂದು ಕುಡುಕನಿಂದಲೇ ವೈರಲ್ ಆಗಿದ್ದು, ನಗರ ಪೊಲೀಸರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮದ್ಯ ವ್ಯಸನಿಯಾಗಿದ್ದ ಹಣ ಶಿವರಾಜ್​​ ಎಂಬಾತನಿಗೆ ಬಾರ್ ಬಳಿಯಲ್ಲಿ ಬ್ಯಾಗ್ ಒಂದು ಕಂಡಿದ್ದು, ಅಲ್ಲೇ ಇದ್ದ ಕಾರ್ಮಿಕನೊಂದಿಗೆ ಸೇರಿ ಅದನ್ನು ಪರಿಶೀಲಿಸಿದಾಗ ಸಾವಿರ ಮುಖಬೆಲೆಯ ಗರಿಗರಿ ನೋಟುಗಳು ಕಂಡುಬಂದಿತ್ತು.ಆ ಹಣದಲ್ಲಿ ಕಾರ್ಮಿಕನಿಗೆ ಒಂದೆರಡು ಕಂತೆ ನೀಡಿದ ಬಳಿಕ, ಇಬ್ಬರೂ ಸೇರಿ ಮದ್ಯ ಸೇವಿಸಿದ್ದಾರ.

ಮಾರನೇ ದಿನ ಈ ವಿಚಾರ ಕಂಕನಾಡಿ ಪೊಲೀಸರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದು ಹಣದ ಬಾಕ್ಸ್​ ಸಮೇತ ಶಿವರಾಜ್​ನನ್ನ ವಶಕ್ಕೆ ಪಡೆದಿದ್ದಾರೆ.ಹಣದ ಮೂಲ ಪತ್ತೆ ಮಾಡುವ ಉದ್ದೇಶದಿಂದ ಮೂರು ದಿನಗಳ ಕಾಲ ಠಾಣೆಯಲ್ಲಿ ಇಟ್ಟುಕೊಂಡು ನಂತರ ಶಿವರಾಜ್ ನನ್ನು ಬಿಟ್ಟು ಕಳಿಸಿದ್ದಾರೆ. ಈ ವಿಚಾರವನ್ನು ಶಿವರಾಜ್ ಬಹಿರಂಗಗೊಳಿಸಿದ್ದು,ಶಿವರಾಜ್​​ ಬಾಕ್ಸ್​ನಲ್ಲಿ 5ರಿಂದ 10 ಲಕ್ಷ ಇತ್ತು ಎಂದು ಹೇಳಿಕೆ ನೀಡಿದ್ದ ವಿಡಿಯೋ ಒಂದು ಮಾಧ್ಯಮಗಳಿಗೆ ಸಿಕ್ಕಿತ್ತು.

ಈ ಬಗ್ಗೆ ಈ ವರೆಗೆ ಪೊಲೀಸರು ಯಾವುದೇ ಕೇಸ್ ದಾಖಲಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು,ನೋಟಿನ ಕಂತೆಯ ವಾರೀಸುದಾರರ ಪತ್ತೆಗಾಗಲಿ, ಅಥವಾ ಹಣದ ಮೂಲದ ಪತ್ತೆಗೆ ಪೊಲೀಸರು ಮನಸ್ಸು ಮಾಡದೆ ಇರುವುದು ಸಾರ್ವಜನಿಕರಿಗೆ ಅನುಮಾನ ಹೆಚ್ಚಿಸಿದೆ. ಈ ಹಿಂದೆ ಸೀಜ್ ಮಾಡಿದ್ದ ವಾಹನಗಳನ್ನು ಸೇಲ್ ಮಾಡಿದ್ದ ನಗರ ಪೊಲೀಸರ ಮುಡಿಗೆ ಕುಡುಕನ ಹಣದ ವಿಚಾರ ಕಿರೀಟವಾದಂತಿದೆ ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರಿಕರು.

Leave A Reply

Your email address will not be published.