ಬೆಂಗಳೂರಿನಲ್ಲಿ ಬೃಹತ್‌ ನಕಲಿ ಮಾರ್ಕ್ಸ್‌ ಕಾರ್ಡ್‌ ದಂಧೆ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು : ಐವರು ಆರೋಪಿಗಳ ಬಂಧನ

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ ದೇಶದ 29 ಪ್ರತಿಷ್ಟಿತ ಯೂನಿವರ್ಸಿಟಿಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಮಾಡಿ ಮಾರಾಟ ದಂಧೆ ಪ್ರಕರಣದ ಐವರು ಆರೋಪಿಗಳ ಬಂಧನ ಮಾಡಲಾಗಿದೆ.

 

5 ವರ್ಷದಿಂದ ಈ ದಂಧೆ ನಡೆಯುತ್ತಿದ್ದು, ಈಗಾಗಲೇ 1 ಲಕ್ಷದಿಂದ 15 ಲಕ್ಷಪಡೆದು ಮಾರ್ಕ್ಸ್‌ ಕಾರ್ಡ್‌ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಂಧಿತರಿಂದ 1500 ಅಧಿಕ ನಕಲಿ ಅಂಕಪಟ್ಟಿ ವಶಕ್ಕೆ ಪಡೆಯಲಾಗಿದೆ . 80 ನಕಲಿ ಸೀಲ್‌, 30 ಹಾಲೋ ಗ್ರಾಮ್‌ ಸ್ಟಿಕ್ಕರ್‌ ವಶಕ್ಕೆ ಪಡೆಯಲಾಗಿದೆ.

Leave A Reply

Your email address will not be published.