ಪಡ್ಡೆಹುಡುಗರ ಹೃದಯ ಬಡಿತ ಏರಿಸಿದ ಉರ್ಫೀ | ಬಾಲಕರ ವಿರುದ್ಧ ದೂರು ದಾಖಲಿಸಿದ ಬಾಲಿವುಡ್‌ ತಾರೆ| ಈ ಬಾಲಕರು ಮಾಡಿದ್ದಾದರೂ ಏನು?

ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಕೆಲವರು ಇದರ ವಿರುದ್ಧ ದ್ವನಿ ಎತ್ತಿದರೆ ಮತ್ತೆ ಕೆಲವರು ಮನೆಯ ಮರ್ಯಾದಿಯ ಸಲುವಾಗಿ ಎಲ್ಲವನ್ನು ಸಹಿಸಿಕೊಂಡು ಮೌನಕ್ಕೆ ಶರಣಾಗುತ್ತಾರೆ. ಇದೀಗ, ನಟಿ ಉರ್ಫಿ ಜಾವೇದ್ ಅವರು ಕೂಡ ನಿರಂತರವಾಗಿ ಕಿರುಕುಳಕ್ಕೆ ಒಳಗಾಗಿದ್ದು,  ತಮಗೆ ಕಿರುಕುಳ ನೀಡುತ್ತಿದ್ದ  10 ಜನ ಹುಡುಗರ ವಿರುದ್ಧ ದ್ವನಿ ಎತ್ತಿದ್ದು, ಅವರ ವಿರುದ್ಧ ಪೊಲೀಸ್ ದೂರು ನೀಡಲು ಮುಂದಾಗಿದ್ದಾರೆ.

ಸೆಲೆಬ್ರಿಟಿಗಳಿಗೆ ನೆಟ್ಟಿಗರಿಂದ ಇಲ್ಲವೇ ಅನಾಮಿಕರಿಂದ  ನಿಂದನೆ ಮತ್ತು ಕೆಟ್ಟ ಪದಳ ಬಳಕೆ, ಕಿರುಕುಳ  ಪ್ರಕರಣಗಳು ಮೊದಲಿಂದ ನಡೆಯುತ್ತಿವೆ. ಈಗಾಗಲೇ ಅನೇಕ ನಟಿಯರು ಇಂತ ವ್ಯಕ್ತಿಗಳ ವಿರುದ್ಧ ಆಕ್ರೋಶ ಹೊರಹಾಕಿ ಪೊಲೀಸ್ ದೂರು  ಕೂಡ ನೀಡಿದ್ದಾರೆ. ಇದೀಗ ಉರ್ಫಿ ಕೂಡ ಅದೇ ಸಮಸ್ಯೆ ಎದುರಿಸುತ್ತಿದ್ದು, ದೂರು ನೀಡಲು ಮುಂದಾಗಿದ್ದಾರೆ.


ಬಿಗ್ ಬಾಸ್ ಒಟಿಟಿ ಮೂಲಕ ಖ್ಯಾತಿ ಗಳಿಸಿದ ಕಿರುತೆರೆ ನಟಿ ಮತ್ತು ಸಾಮಾಜಿಕ ಜಾಲತಾಣದ ಸ್ಟಾರ್ ಉರ್ಫಿ ಜಾವೇದ್ ವಿಭಿನ್ನ ಶೈಲಿಯ ದಿರಿಸಿನ ಡ್ರೆಸ್‌ಗಳ ಮೂಲಕವೆ ಜನರ ಮನದಲ್ಲಿ ಮಿಂಚಿದ್ದಾರೆ.

ಬಿಗ್ ಬಾಸ್ ಒಟಿಟಿಯ ನಡುವೆಯೂ  ಉರ್ಫಿ ಚಿತ್ರವಿಚಿತ್ರ ಬಟ್ಟೆಗಳ ಮೂಲಕ  ಹೆಚ್ಚು ಪ್ರಖ್ಯಾತಿ ಗಳಿಸಿದ್ದರು. ಈ ಹಿಂದೆ ಪ್ರಸಿದ್ಧ ಲೇಖಕ ಚೇತನ್ ಭಗತ್ ವಿರುದ್ಧ ಸಿಡಿದಿದ್ದ  ಉರ್ಫಿ  ಇದೀಗ 10 ಜನ ಹುಡುಗರ ವಿರುದ್ಧ ಅಸಮಾಧಾನದ ಜೊತೆಗೆ ಆಕ್ರೋಶ ಹೊರಹಾಕಿದ್ದಾರೆ. 

ಉರ್ಫಿ ತನ್ನ ಡ್ರೆಸ್ ಸ್ಟೈಲ್ ವಿಚಾರಕ್ಕೆ ಆಗಾಗ ಸುದ್ದಿಯಲಿದ್ದು, ಅದರಲ್ಲೂ ಧರಿಸುವ ಉಡುಪುಗಳ ಬಗ್ಗೆ ಬರುವ ನಿತ್ಯ ಟ್ರೊಲ್ ಗಳಿಗೇನು ಕಡಿಮೆಯಿಲ್ಲ.  ಇದಕ್ಕೆಲ್ಲ ಕ್ಯಾರೇ ಎನ್ನದೆ  ಉರ್ಫಿ ತನ್ನ ವಿಚಿತ್ರ ಡ್ರೆಸ್ ಸ್ಟೈಲ್ ಮೂಲಕ  ಕ್ಯಾಮರಾ ಮುಂದೆ ನಿಂತು ಫೋಸ್ ಕೊಟ್ಟು  ಫೋಟೊ ಶೂಟ್ ಮಾಡಿಕೊಂಡು ಖುಷಿಯಲ್ಲಿದ್ದಾರೆ.

ಅದೆಷ್ಟೇ ಟ್ರೋಲ್ ಗಳು ವಿವಾದಗಳು ತನ್ನ ಬೆನ್ನ ಹತ್ತಿದರು ಕೂಡ ತಮ್ಮ ಚಾಣಾಕ್ಷತನ ದಿಂದ ಬಗೆಹರಿಸಿಕೊಳ್ಳುತ್ತಾರೆ. ಆದರೆ, ಇತ್ತೀಚೆಗೆ  ಉರ್ಫಿ ಜಾವೇದ್‌ಗೆ ಯುವಕರ ಗುಪೊಂದು ನಿರಂತರವಾಗಿ ಕರೆ ಮಾಡಿ ಕೆಟ್ಟ ಪದಗಳಿಂದ ನಿಂದಿಸುತ್ತಿದ್ದು, ಕಿರುಕುಳ ಕೂಡ  ನೀಡುತ್ತಿದ್ದರು. ಈ ಬಗ್ಗೆ ಉರ್ಫಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

‘ಈ  ಹುಡುಗ ಮತ್ತು ಅವನ 10 ಸ್ನೇಹಿತರು ನನಗೆ ನಿರಂತರವಾಗಿ ಕರೆ ಮಾಡುತ್ತಿದ್ದು,   ಕರೆ ಮಾಡಿ ನಿಂದಿಸುತ್ತಿದ್ದಾರೆ. ಅಲ್ಲದೆ, ಈಗಿನ ಕಾಲದ ಮಕ್ಕಳಿಗೆ ಏನಾಗಿದೆ ಎಂದು ಪ್ರಶ್ನಿಸಿದ್ದು  ವಿನಾಕಾರಣ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಆ 10 ಜನರ ವಿರುದ್ಧ ಪೊಲೀಸ್ ದೂರು ನೀಡುತ್ತಿದ್ದು, ಯಾರಿಗಾದರೂ ಅವರ ಹೆತ್ತವರ ಬಗ್ಗೆ ತಿಳಿದಿದ್ದರೆ, ನನಗೆ ತಿಳಿಸಿ ಎಂದು ಹೇಳಿದ್ದು ನಾನು ನಿಮಗೆ ಬಹುಮಾನ ನೀಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ತನಗೆ  ನಿರಂತರವಾಗಿ ಕರೆ ಮಾಡಿ ನಿಂದಿಸುವ ಮತ್ತು ಕಿರುಕುಳ ನೀಡುತ್ತಿದ್ದ ಯುವಕರ ಗುಂಪನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಯುವಕರ ಫೋಟೋಗಳನ್ನು ಶೇರ್ ಮಾಡಿ ಉರ್ಫಿ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಪೋಲಿಸ್ ಠಾಣೆಯ ಮೆಟ್ಟಿಲೇರುವ ಬೆದರಿಕೆ ಹಾಕಿದ್ದಾರೆ. ಇದರ ಜೊತೆಗೆ ಆ ಯುವಕರ ಪೋಷಕರ ಮಾಹಿತಿ ಇದ್ದರೆ ತಿಳಿಸುವಂತೆ ಮನವಿ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ  ಬರೆದುಕೊಂಡಿದ್ದಾರೆ.

‘ಮುಂದಿನ ಪೀಳಿಗೆಯು ಅವನತಿಯ ಹಾದಿಯಲ್ಲಿ ಸಾಗುತ್ತಿದ್ದು ಮಕ್ಕಳು ತುಂಬಾ ಹೆಮ್ಮೆಯಿಂದ ಎಲ್ಲಾ ಶೇರ್ ಮಾಡುತ್ತಿದ್ದಾರೆ ಇದಲ್ಲದೆ, ಈ ಹುಡುಗ ಮತ್ತು ಅವನ ಸ್ನೇಹಿತರು ಹುಡುಗಿಯರನ್ನು ನಿಂದಿಸುತ್ತಿದ್ದಾರೆ ಮತ್ತು ಹುಡುಗಿಯರ ಬಗ್ಗೆ ಕೆಟ್ಟಾದಾಗಿ ಮಾತನಾಡುತ್ತಿರುವ ಜೊತೆಗೆ   ಕ್ಷಮೆ ಕೇಳುವ ಗೋಜಿಗೆ ಹೋಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.