BIGG NEWS : ದ್ವಿಚಕ್ರ ವಾಹನ ಸವಾರರಿಗೆ ಬಹುಮುಖ್ಯ ಮಾಹಿತಿ!!!

ಬೈಕ್ ಎಂದರೆ ಎಲ್ಲರಿಗೂ ಇಷ್ಟ. ಯುವಕರಿಗಂತೂ ಬೈಕ್ ಪಂಚ ಪ್ರಾಣ. ಕೆಲವರಂತೂ ತಾನೇ ರೋಡ್ ರೋಮಿಯೋ ಎಂದು ಇಷ್ಟ ಬಂದಂತೆ ರಸ್ತೆಯಲ್ಲಿ ಹೆಲ್ಮೆಟ್ ಸರಿಯಾಗಿ ಧರಿಸದೆ ಆಪತ್ತು ತಂದು ಕೊಳ್ಳುತ್ತಾರೆ. ಹಾಗಾಗಿ ಬೈಕ್ ಸವಾರರಿಗೆ ಬೆಂಗಳೂರಿನ ಸಂಚಾರಿ ಪೊಲೀಸರು ಮಹತ್ವದ ಸೂಚನೆಯೊಂದನ್ನು ನೀಡಿದ್ದು, ಟೋಪಿ ಮಾದರಿಯ ಅರ್ಧ ಹೆಲ್ಮೆಟ್ ಅಥವಾ ISI ಮುದ್ರೆ ಇಲ್ಲದ ಹೆಲ್ಮೆಟ್ ಧರಿಸಿದರೆ ದಂಡ ವಿಧಿಸಲು ನಿರ್ಧರಿಸಿದ್ದಾರೆ.

 

ಮೋಟಾರು ವಾಹನ ನಿಯಮಗಳ 1989 ನಿಯಮ 230(1) ಕ್ಕೆ ತಿದ್ದುಪಡಿಯಲ್ಲಿ ರಾಜ್ಯವ್ಯಾಪಿ ಬೈಕ್ ಸವಾರ ಮತ್ತು ಹಿಂಬದಿ ಸವಾರರು ಐಎಸ್ ಐ ಮುದ್ರೆಯ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ದ್ವಿಚಕ್ರ ವಾಹನ ಸವಾರರು ಅರ್ಧ ಹೆಲ್ಮೆಟ್ ಗಳನ್ನು ಧರಿಸಿಕೊಂಡು ಸವಾರಿ ಮಾಡುತ್ತಿದ್ದಾರೆ. ಟೋಪಿ ಮಾದರಿಯ ಹೆಲ್ಮೆಟ್ ಗಳನ್ನು ಹೆಲ್ಮೆಟ್ ರಹಿತ ಚಾಲನೆ ಎಂದು ಪರಿಗಣಿಸಿ 500 ರೂ. ದಂಡ ವಿಧಿಸಲಾಗುತ್ತಿದೆ.

ಸದ್ಯ ಬೆಂಗಳೂರು ಸಂಚಾರ ಪೊಲೀಸರು ಅರ್ಧ ಹೆಲ್ಮೆಟ್ ನ್ನು ಹೆಲ್ಮೆಟ್ ರಹಿತ ಚಾಲನೆ ಎಂದೇ ಪರಿಗಣಿಸಿ ದಂಡ ವಿಧಿಸುತ್ತಿದ್ದಾರೆ. ಒಟ್ಟಾರೆಯಾಗಿ ಸರ್ಕಾರದ ನಿಯಮಗಳ ಪಾಲನೆ ಆಗದೆ ಇರುವುದರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸವಾರರಿಗೆ ಈ ನಿಯಮ ರೂಪಿಸಲಾಗಿದೆ .

Leave A Reply

Your email address will not be published.