Smart Tv Company: ಅಬ್ಬಾ | ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಟಿವಿ ಯಾವುದು? ಸಮೀಕ್ಷೆ ವರದಿ
ಪ್ರಸ್ತುತ ಜನರಿಗಾಗಿ ವಿಶೇಷ ಫೀಚರ್ಸ್ಗಳುಳ್ಳ ಸ್ಮಾರ್ಟ್ಟಿವಿಗಳನ್ನು ಕಂಪನಿಗಳು ಪರಿಚಯಿಸುತ್ತಲೇ ಇರುತ್ತದೆ.ಹೌದು, ಸ್ಮಾರ್ಟ್‌ಟಿವಿಗಳು ಈಗ ಎಲ್ಲರ ಮನೆಯಲ್ಲೂ ಇದೆ. ಇದರ ಫೀಚರ್ಸ್ ಅನ್ನು ನೋಡಿ ಜನರು ಆಕರ್ಷಿತರಾಗುತ್ತಾರೆ. ಜನರು ಸಹ ಎಷ್ಟೇ ಕೆಲಸದ ಒತ್ತಡ ಇದ್ದರೂ ಸಹ ಮನೋರಂಜನೆಗಾಗಿ ಸ್ವಲ್ಪ ಬಿಡುವು ಮಾಡಿಕೊಳ್ಳುತ್ತಾರೆ ಅನ್ನೋದು ಸತ್ಯ. ಹೌದು ಸಿನಿಮಾ, ಆಟೋಟ, ರಿಯಾಲಿಟಿ ಶೋ ಮುಂತಾದವುಗಳನ್ನು ವೀಕ್ಷಿಸುವುದರಲ್ಲಿ ಕೆಲವರಂತೂ ಎತ್ತಿದ ಕೈ ಅನ್ನಬಹುದು. ಅದಲ್ಲದೆ ಈಗಿನ ಕಾಲದ ಸ್ಮಾರ್ಟ್ಟಿವಿಗಳ ಫೀಚರ್ಸ್ಗಳು ಕೂಡ ಮೊಬೈಲ್ನಂತೆಯೇ ಫೀಚರ್ಸ್ ಅನ್ನು ಹೊಂದಿದೆ. ಯಾವುದೇ ಸಿನೆಮಾ, ವೆಬ್ಸೀರಿಸ್, ಧಾರವಾಹಿ ಇವುಗಳನ್ನು ನೋಡಬೇಕಾದರು ಈಗ ಸ್ಮಾರ್ಟ್ಟಿವಿಗಳಲ್ಲೇ ನೋಡಬಹುದು.
ಮುಖ್ಯವಾಗಿ ಶಿಯೋಮಿ, ಸ್ಯಾಮ್‌ಸಂಗ್, ಒನ್‌ಪ್ಲಸ್, ರೆಡ್ಮಿ ಸ್ಮಾರ್ಟ್‌ಟಿವಿಗಳು ಉತ್ತಮ ಜನಪ್ರಿಯತೆ ಪಡೆದುಕೊಂಡಿವೆ. ಆದರೆ ಅತೀ ಹೆಚ್ಚು ಮಾರಾಟ ಆಗಿರುವ ಟಿವಿ ಯಾವುದು ಎಂಬ ಪ್ರಶ್ನೆ ನಿಮಗೆ ಇರಬಹುದು. ಸದ್ಯ ಭಾರತದಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆಗಳು ಬಹಳಷ್ಟು ಉನ್ನತಮಟ್ಟದಲ್ಲಿ ಬೆಳೆಯುತ್ತಿವೆ. ಹಳೆಯ ಟಿವಿಗಳನ್ನು ಬಿಟ್ಟು ಸ್ಮಾರ್ಟ್ಟಿವಿಗಳ ಮೇಲೆಯೆ ಜನರು ಹೆಚ್ಚು ಒಲವನ್ನು ತೋರಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಸ್ಮಾರ್ಟ್ಟಿವಿಯ ಕಂಪನಿಗಳು ವ್ಯಾಪಕವಾಗಿ ಲಾಭಗಳಿಸಲು ಸಾಧ್ಯವಾಗಿದೆ ಎಂದು ಹೇಳಬಹುದು. ಈ ಸ್ಮಾರ್ಟ್ಟಿವಿಗಳ ಮೇಲೆ ಬೇಡಿಕೆಯನ್ನು ನೋಡಿ ಹಲವಾರು ವಿಭಿನ್ನ ಫೀಚರ್ಸ್ ಅನ್ನು ಒಳಗೊಂಡ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಗೆ ಬಂದಿವೆ. ಇದೀಗ ತಂತ್ರಜ್ಞಾನ ಕಂಪನಿಗಳೂ ಕೆಲವೊಂದು ಸಾಧನಗಳ ಮಾರಾಟದ ಮೇಲೆ ಸಮೀಕ್ಷೆಯನ್ನು ನಡೆಸಿತ್ತು. ಈ ಮೂಲಕ ಅತೀ ಹೆಚ್ಚು ಸ್ಮಾರ್ಟ್‌ಟಿವಿ ಯಾವ ಬ್ರಾಂಡ್ನಲ್ಲಿ ಸೇಲ್ ಆಗಿದೆ ಎಂಬ ವರದಿಯನ್ನು ಮಾಡಿದೆ.
ಕೌಂಟರ್ಪಾಯಿಂಟ್ ವರದಿಯ ಪ್ರಕಾರ ಶಿಯೋಮಿ ಭಾರತೀಯ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂದಿದೆ ಎಂದು ವರದಿಯಾಗಿದೆ. ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಶಿಯೋಮಿ ಬ್ರ್ಯಾಂಡ್ ಸಾಕಷ್ಟು ಫೀಚರ್ಸ್ ಅನ್ನು ಒಳಗೊಂಡ ಸ್ಮಾರ್ಟ್ಟಿವಿಯನ್ನು ಬಿಡುಗಡೆ ಮಾಡಿದೆ. ಅದರಿಂದಲೇ ಶಿಯೋಮಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
- ಶಿಯೋಮಿ ಕಂಪೆನಿ 2022ರ 3ನೇ ತ್ರೈಮಾಸಿಕದ ವರದಿಯ ಪ್ರಕಾರ ಅಗ್ರಸ್ಥಾನವನ್ನು ಗುರುತಿಸಿಕೊಂಡಿದೆ. 3ನೇ ತ್ರೈಮಾಸಿಕದ ವರದಿಯ ಪ್ರಕಾರ ಶಿಯೋಮಿ ಕಂಪನಿಯ ಉತ್ಪನ್ನದ ಮಾರಾಟದ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 38% ರಷ್ಟು ಹೆಚ್ಚಾಗಿದೆ.
ಅದರಲ್ಲೂ ಫೆಸ್ಟಿವಲ್ ಸೀಸನ್ ಸೇಲ್, ಆಕರ್ಷಕ ರಿಯಾಯಿತಿ, ಹೊಸ ಮಾದರಿಯ ಟೆಕ್ನಾಲಜಿಯಿಂದ ಶಿಯೋಮಿ ಬ್ರಾಂಡ್ನ ಟಿವಿಗಳು ಭಾರೀ ಬೇಡಿಕೆ ಪಡೆದುಕೊಂಡಿವೆ. ಸದ್ಯದ ಮಾಹಿತಿ ಪ್ರಕಾರ 2022ರ 3ನೇ ತ್ರೈಮಾಸಿಕದಲ್ಲಿ ಟಿವಿ ಮಾರುಕಟ್ಟೆಯಲ್ಲಿ ಶಿಯೋಮಿ 11% ಪಾಲನ್ನು ಪಡೆಯುವ ಮೂಲಕ ದೇಶದಲ್ಲಿ ನಂ. 1 ಸ್ಥಾನವನ್ನು ಪಡೆದುಕೊಂಡಿದೆ. - ಸ್ಯಾಮ್‌ಸಂಗ್ ಕಂಪನಿ ಕೂಡ ಶಿಯೋಮಿ ಕಂಪನಿಗೆ ಬಹಳಷ್ಟು ಪೈಪೋಟಿಯನ್ನು ನೀಡಿದೆ. ಸ್ಯಾಮ್‌ಸಂಗ್ ಕಂಪನಿ ಸ್ಮಾರ್ಟ್‌ಫೋನ್ ವಲಯದಲ್ಲಿ ಪೈಪೋಟಿ ನಡೆಸಿದಂತೆ ಸ್ಮಾರ್ಟ್‌ಟಿವಿ ವಲಯದಲ್ಲಿಯೂ ಕೂಡ ಪೈಪೋಟಿ ನಡೆಸುತ್ತಿದ್ದು, ಈ ವರ್ಷದ 3ನೇ ತ್ರೈಮಾಸಿಕದ ವರದಿಯ ಪ್ರಕಾರ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಅದರಂತೆ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಕಂಪನಿ 3ನೇ ತ್ರೈಮಾಸಿಕದಲ್ಲಿ 10% ಪಾಲನ್ನು ಪಡೆಯುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
- ಎಲೆಕ್ಟ್ರಾನಿಕ್ಸ್ ಸಾಧನಗಳ ಮಾರಾಟದಲ್ಲಿ ಬಹಳಷ್ಟು ಜನಪ್ರಿಯದಲ್ಲಿರುವ ಎಲ್‌ಜಿ ಕಂಪೆನಿ ಭಾರತದಲ್ಲಿ ಈ ವರ್ಷದ 3 ನೇ ತ್ರೈಮಾಸಿಕದ ವರದಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದೆ. ಈ ಅವಧಿಯಲ್ಲಿ ಎಲ್‌ಜಿ ಕಂಪೆನಿ 9% ಮಾರುಕಟ್ಟೆ ಪಾಲನ್ನು ಹೊಂದಿದೆ. ಎಲ್‌ಜಿ ಕಂಪೆನಿಯ ಜನಪ್ರಿಯತೆಯಲ್ಲಿ OLED ಟಿವಿಗಳು ಹೆಚ್ಚು ಮಾರಾಟವಾಗಿದೆ.
- ಒನ್‌ಪ್ಲಸ್ ಕಂಪನಿ ಕೂಡ ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯ ಟಾಪ್ ಐದು ಬ್ರ್ಯಾಂಡ್‌ಗಳಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಇದು 3ನೇ ತ್ರೈಮಾಸಿಕದಲ್ಲಿ ತನ್ನ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ 89% ಮಾರುಕಟ್ಟೆ ಪಾಲನ್ನು ಪಡೆದಿದೆ. ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ 8.5% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಇದರಲ್ಲಿ ಒನ್‌ಪ್ಲಸ್ Y1, Y1S ಮತ್ತು Y1S ಪ್ರೊ ಸರಣಿಯ ಸ್ಮಾರ್ಟ್‌ಟಿವಿಗಳು ಭಾರೀ ಬೇಡಿಕೆಗಳಿವೆ.
ಒಟ್ಟಿನಲ್ಲಿ ಸ್ಮಾರ್ಟ್ ಟಿವಿಗಳು ಜನರ ಮನಸ್ಸನ್ನು ಗೆದ್ದಿರುವುದು ಖಂಡಿತ. ಯಾಕೆಂದರೆ ಟಿವಿ ಕಂಪನಿಗಳು ದಿನೇ ದಿನೇ ಉತ್ತಮ ಬೆಳವಣಿಗೆ ಕಾಣುತ್ತಿದೆ.