ಮಾನವನ ದೇಹದಲ್ಲಿ ಪತ್ತೆಯಾಯ್ತು ನಿಗೂಢ ಡಿಎನ್ ಎ!!! ತಜ್ಞರಿಂದ ಪತ್ತೆ
ಪ್ರತಿಯೊಬ್ಬರ ನಂಬಿಕೆಗಳು ವಿಭಿನ್ನವಾಗಿ ಇರುವುದು ಸಹಜ. ಅದರಲ್ಲಿಯೂ ಕೆಲವರಿಗೆ ದೇವರ ಅಸ್ತಿತ್ವದ ಮೇಲೆ ನಂಬಿಕೆ ಇದ್ದರೆ, ಮತ್ತೆ ಕೆಲವರ ಪಾಲಿಗೆ ಅದೆಲ್ಲ ಮೂಢನಂಬಿಕೆ ಎನ್ನುವುದು ಕೂಡ ಉಂಟು. ಏನಾದರು ಹೊಸ ವಿಚಾರದ ಬಗ್ಗೆ ಅನ್ವೇಷಣೆಯಲ್ಲಿ ತೊಡಗಿರುವ ವಿಜ್ಞಾನಿಗಳು ಇತ್ತೀಚಿನ ಅಧ್ಯಯನದಲ್ಲಿ ಆಧುನಿಕ ಮಾನವರ ಜೀನೋಮ್‌ನಲ್ಲಿ ಅವರ ಪೂರ್ವಜರ ನಿಗೂಢ ಡಿಎನ್‌ಎ ಅಂಶವನ್ನು ಕಂಡುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕೆಲವರು ಭೂತ-ಪ್ರೇತಗಳನ್ನು (Ghosts) (Believe)ನಂಬುವುದಿಲ್ಲ. ಹಾಗೆಯೇ ಕೆಲವರು ದೇವರು (God) ಇರುವುದು ಎಷ್ಟು ನಿಜವೋ ಹಾಗೆಯೇ ದೆವ್ವವೂ ಕೂಡ ಇದೆ ಎಂದು ವಾದ ಮಾಡುತ್ತಾರೆ. ಆದರೆ, ಈ ನಡುವೆ ವಿಜ್ಞಾನಿಗಳು ತಮ್ಮ ಇತ್ತೀಚಿನ ಅಧ್ಯಯನದಲ್ಲಿ ಆಧುನಿಕ ಮಾನವರ ಜೀನೋಮ್‌ನಲ್ಲಿ ಅವರ ಪೂರ್ವಜರ ನಿಗೂಢ ಡಿಎನ್‌ಎ (DNA) ಅಂಶವನ್ನು ಕಂಡುಕೊಂಡಿದ್ದು, ಇದನ್ನು ಭೂತ ಪೂರ್ವಜರ (Ancestor) ಅಂಶ ಎನ್ನಲಾಗುತ್ತಿದೆ.
ಪ್ರಾಚೀನ ಮಾನವರ ನಿಗೂಢ ಡಿಎನ್‌ಎ ಅಂಶವನ್ನು ಮಾನವ ಜೀನೋಮ್‌ನಲ್ಲಿ ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.
ಸುಮಾರು ಅರ್ಧ ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ವಾಸಿಸುತ್ತಿದ್ದ ಪ್ರಾಚೀನ ಮಾನವರ ನಿಗೂಢ “ಪ್ರೇತ” ಜನಸಂಖ್ಯೆಗೆ ವಿಜ್ಞಾನಿಗಳು ಈ ಸಂಶೋಧನೆಯ ಮೂಲಕ ಪುರಾವೆಗಳನ್ನು ಕಂಡುಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಆ ವಂಶವಾಹಿಗಳು ಇಂದಿಗೂ ಆಧುನಿಕ ಜನರಲ್ಲಿರುವುದಾಗಿ ಕಂಡುಹಿಡಿದಿದ್ದಾರೆ ಎನ್ನಲಾಗಿದೆ.
ಮಾನವ ವಿಕಾಸವನ್ನು ಅಧ್ಯಯನ ಮಾಡುವ ವಿಜ್ಞಾನಿಗಳು ಮನುಷ್ಯ ಜಾತಿಯ ಸಂಕೀರ್ಣ ಮೂಲದಲ್ಲಿ ನಿಗೂಢ ಡಿಎನ್‌ಎಯೊಂದರ ಇರುವಿಕೆಯನ್ನು ಕಂಡುಕೊಂಡಿದ್ದು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿಕೊಂಡು ಸಂಶೋಧನೆ ನಡೆಸಲಾಗಿದೆ ಎನ್ನಲಾಗುತ್ತಿದೆ. ವಿಜ್ಞಾನಿಗಳ ಸಂಶೋಧನೆಗಳನ್ನು ನೇಚರ್ ಕಮ್ಯುನಿಕೇಷನ್ಸ್‌ನಲ್ಲಿ ಪ್ರಕಟ ಮಾಡಲಾಗಿದ್ದು, ಈ ವಿಚಾರದ ಕುರಿತಾಗಿ ಸಂಶೋಧನೆಯನ್ನು 2019ರಿಂದ ಆರಂಭಿಸಲಾಗಿದೆ.
ಪ್ರಪಂಚವು ಒಂದು ಕಾಲದಲ್ಲಿ ಮಾನವನ ಅನೇಕ ಸಂಬಂಧಿತ ಜಾತಿಗಳು ಅಥವಾ ಉಪಜಾತಿಗಳಿಗೆ ನೆಲೆ ಕಲ್ಪಿಸಿದ್ದು, ಇಲ್ಲಿಯವರೆಗೆ, ವಿಕಾಸವಾದಿಗಳು ನಿಯಾಂಡರ್ತಲ್ಗಳು ಮತ್ತು ಡೆನಿಸೋವನ್ಗಳು ಮಾತ್ರ ಅಂತರ್ಜಾತಿ ಎಂದು ನಂಬಲಾಗಿತ್ತು. ಆದರೆ ಈ ಅಧ್ಯಯನವು ಮೂರನೇ ಗುಂಪಿನ ಜಾತಿಗಳನ್ನು ಸಹ ಕಂಡು ಹಿಡಿದಿದೆ.
“ಸುಮಾರು 80,000 ವರ್ಷಗಳ ಹಿಂದೆ, ಆಧುನಿಕ ಮಾನವರನ್ನು ಒಳಗೊಂಡಿರುವ ಮಾನವ ಜನಸಂಖ್ಯೆಯ ಒಂದು ಭಾಗವು ಆಫ್ರಿಕನ್ ಖಂಡವನ್ನು ತ್ಯಜಿಸಿ ಇತರ ಖಂಡಗಳಿಗೆ ವಲಸೆ ಹೋದ ಘಟನೆ ಸಂಭವಿಸಿದ್ದು, ಇದು ಎಲ್ಲಾ ಪ್ರಸ್ತುತ ಜನಸಂಖ್ಯೆಗೆ ಕಾರಣವಾಗಿದೆ. ಸ್ಪೇನ್‌ನ ಜೀವಶಾಸ್ತ್ರಜ್ಞ ಜೌಮ್ ಬರ್ಟ್ರಾನ್‌ಪೆಟಿಟ್ ವಿವರಿಸಿದ್ದಾರೆ.
ಮಾನವೀಯತೆಯ ಪೂರ್ವ ಇತಿಹಾಸದ ಅವ್ಯವಸ್ಥೆಯನ್ನು ವಿಶ್ಲೇಷಿಸುವ 2019 ರ ಅಧ್ಯಯನದಲ್ಲಿ ವಿಜ್ಞಾನಿಗಳು ಕೃತಕ ಬುದ್ಧಿ ಮತ್ತೆ (AI) ತಂತ್ರಜ್ಞಾನದ ಮೂಲಕ ಆಧುನಿಕ ಮಾನವರು ಎದುರಿಸಿದ ಅಪರಿಚಿತ ಮಾನವ ಪೂರ್ವಜ ಜಾತಿಗಳನ್ನು ಕಂಡು ಹಿಡಿದಿದ್ದಾರೆ ಎನ್ನಲಾಗಿದೆ. ಮಾನವ ಮೂಲ ಮತ್ತು ವಿಕಾಸದ ಎಂಟು ಪ್ರಮುಖ ಮಾದರಿಗಳನ್ನು ವಿಶ್ಲೇಷಿಸಲು ಅಧ್ಯಯನವು ಕೃತಕ ಬುದ್ಧಿಮತ್ತೆ (AI) ಯನ್ನು ಬಳಸಿಕೊಂಡು ಮಾನವ ಪೂರ್ವಜರ ಪುರಾವೆಯ ಕುರುಹುಗಳನ್ನು ಕಂಡುಹಿಡಿದಿದೆ ಎನ್ನಲಾಗಿದೆ.
ಆಧುನಿಕ ಪಶ್ಚಿಮ ಆಫ್ರಿಕನ್ನರ ಪೂರ್ವಜರು ಹತ್ತಾರು ಸಾವಿರ ವರ್ಷಗಳ ಹಿಂದೆ ಇನ್ನೂ ಪತ್ತೆಯಾಗದ ಪುರಾತನ ಮಾನವರೊಂದಿಗೆ ಪರಸ್ಪರ ಸಂಬಂಧ ಹೊಂದಿದ್ದರು ಎಂದು ತಳಿಶಾಸ್ತ್ರಜ್ಞರು ವರದಿ ಮಾಡಿದ್ದು, ಈ ಸಂಶೋಧಕರು ಪಶ್ಚಿಮ ಆಫ್ರಿಕಾದ ಜನಸಂಖ್ಯೆಯಿಂದ ಜೀನೋಮ್‌ಗಳನ್ನು ಸಂಶೋಧನೆ ನಡೆಸಿ ವಿಶ್ಲೇಷಣೆ ನಡೆಸಿದಾಗ ಅಜ್ಞಾತ ಪೂರ್ವಜರ ಕುರುಹುಗಳು ಲಭಿಸಿದ್ದು , ಅವರ ಡಿಎನ್‌ಎಯ ಐದನೇ ಒಂದು ಭಾಗವು ಪೂರ್ವಜರಿಂದ ಬಂದಿದೆ ಎಂದು ಕೂಡ ಹೇಳಲಾಗಿದೆ.
ಈ ಅನ್ವೇಷಣೆಯನ್ನು ಮೂಲತಃ 2019 ರಲ್ಲಿ ನಡೆಸಲಾಗಿದ್ದು, ಇದರ ಫಲಿತಾಂಶಗಳು ಆರಂಭಿಕ ಮಾನವರು ದೀರ್ಘಕಾಲ ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳ ಗುಂಪಿನೊಂದಿಗೆ ಸಂವಹನದ ಜೊತೆಗೆ ಅಂತರ್ಸಂಪರ್ಕಿಸಿದ್ದಾರೆ ಎಂದು ಹೇಳಲಾಗಿದೆ.
ಆಳವಾದ ಕಲಿಕೆಯ ಕ್ರಮಾವಳಿಗಳು ಮತ್ತು ಸಂಖ್ಯಾಶಾಸ್ತ್ರೀಯ ವಿಧಾನಗಳನ್ನು ಸಂಯೋಜಿಸುವ ಮೂಲಕ, ಇನ್ಸ್ಟಿಟ್ಯೂಟ್ ಆಫ್ ಎವಲ್ಯೂಷನರಿ ಬಯಾಲಜಿ (IBE), ಸೆಂಟರ್ ಫಾರ್ ಜೀನೋಮಿಕ್ ರೆಗ್ಯುಲೇಶನ್ (CRG) ನ ಸೆಂಟ್ರೊ ನ್ಯಾಶನಲ್ ಡಿ ಅನಾಲಿಸಿಸ್ ಜೆನೊಮಿಕೊ (CNAG-CRG) ಮತ್ತು ಟರ್ಟು ವಿಶ್ವವಿದ್ಯಾಲಯದ ಸಂಶೋಧಕರು ಜೀನೋಮ್‌ನಲ್ಲಿ ಮಾನವನ ಪೂರ್ವಜ ಪ್ರೇತವನ್ನು ಗುರುತಿಸಿದ್ದಾರೆ ಎನ್ನಲಾಗಿದೆ.
ಏಷ್ಯಾಟಿಕ್ ವ್ಯಕ್ತಿಗಳು, ಹತ್ತಾರು ಸಾವಿರ ವರ್ಷಗಳ ಹಿಂದೆ ತನ್ನ ಪೂರ್ವಜರೊಂದಿಗೆ ಸಂಸಾರ ನಡೆಸಿದ ಹೊಸ ಹೋಮಿನಿಡ್‌ನ ಕುರಿತಾದ ಸಾಕ್ಷಿ ಎಂದು ಅಧ್ಯಯನ ಹೇಳಿದೆ.”ನಾವು ನೋಡಿದ ಪಶ್ಚಿಮ ಆಫ್ರಿಕನ್ನರಲ್ಲಿ, ಎಲ್ಲರಿಗೂ ಈ ಅಜ್ಞಾತ ಪುರಾತನ ಜನಸಂಖ್ಯೆಯಿಂದ ಪೂರ್ವಜರು ಇರುವ ಕುರಿತು ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯ ನೇತೃತ್ವ ವಹಿಸಿದ್ದ ಕಂಪ್ಯೂಟೇಶನಲ್ ಜೀವಶಾಸ್ತ್ರಜ್ಞ ಶ್ರೀರಾಮ್ ಶಂಕರರಾಮನ್ 2019ರ ಸಂಶೋಧನೆ ಕುರಿತು ಮಾಹಿತಿ ನೀಡಿದ್ದಾರೆ.
“ಈ ಜನಸಂಖ್ಯೆಯು ನಿಯಾಂಡರ್ತಲ್-ಡೆನಿಸೋವಾ ಕ್ಲೇಡ್‌ಗೆ ಸಂಬಂಧಿಸಿದ್ದು ಇಲ್ಲವೇ ಡೆನಿಸೋವಾ ವಂಶಾವಳಿಯಿಂದ ಭಿನ್ನವಾಗಿದೆ ಎನ್ನಲಾಗಿದೆ. ಮಾನವೀಯತೆಯ ಲೈಂಗಿಕ ಇತಿಹಾಸದಲ್ಲಿ ಈ ಮೂರನೇ ಜನಸಂಖ್ಯೆಯು ಬಹುಶಃ ನಿಯಾಂಡರ್ತಲ್ಗಳು ಮತ್ತು ಡೆನಿಸೋವನ್ಗಳ ಮಿಶ್ರಣವಾಗಿದೆ” ಎಂದು ಸಂಶೋಧಕರು ಅಧ್ಯಯನದಲ್ಲಿ ಮಾಹಿತಿ ನೀಡಿದ್ದಾರೆ.