Post Office New Scheme : ಈ ಯೋಜನೆಯಲ್ಲಿ ಕೇವಲ ರೂ.50 ಹೂಡಿಕೆ ಮಾಡಿದರೆ, ರೂ.35 ಲಕ್ಷ ದೊರೆಯುತ್ತೆ!

ಕೇವಲ 50 ರೂ. ಹೂಡಿಕೆ ಮಾಡಿ 35 ಲಕ್ಷ ಹಣವನ್ನು ಯಾವುದೇ ಅಪಾಯವಿಲ್ಲದೆ ನೀವು ಪಡೆಯಬಹುದು!! ಹೌದು, ಪೋಸ್ಟ್ ಆಫೀಸ್ ನಲ್ಲಿ ಇಂತಹ ಸಣ್ಣ ಉಳಿತಾಯದ ಯೋಜನೆಯು ಇದೀಗ ಲಭ್ಯವಿದೆ. ಇದರಲ್ಲಿ ಅಪಾಯದ ಅಂಶ ಕಡಿಮೆಯಾದರೂ, ಆದಾಯವೂ ಉತ್ತಮವಾಗಿರುತ್ತದೆ.

 

ಅಪಾಯ ಅತ್ಯಲ್ಪವಾಗಿರುವ ಮತ್ತು ಆದಾಯವು ಪ್ರಬಲವಾಗಿರುವ ‘ಗ್ರಾಮ ಸುರಕ್ಷಾ ಯೋಜನೆ’ ಬಗ್ಗೆ ಪ್ರತಿಯೊಬ್ಬ ಪ್ರಜೆಯು ತಿಳಿದುಕೊಳ್ಳಲೇಬೇಕು. ಈ ಯೋಜನೆಯು ಭಾರತೀಯ ಅಂಚೆ ಇಲಾಖೆಯಲ್ಲಿ ನೀಡುವ ಒಂದು ಆಯ್ಕೆಯಾಗಿದ್ದೂ, ಇದರಲ್ಲಿ ನೀವು ಕಡಿಮೆ ಅಪಾಯದೊಂದಿಗೆ ಉತ್ತಮ ಆದಾಯವನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ನೀವು ಪ್ರತಿದಿನ ರೂ.50ರಂತೆ ಒಂದು ತಿಂಗಳಿಗೆ ಕೇವಲ ರೂ. 1,500 ಠೇವಣಿ ಮಾಡಬೇಕಾಗುತ್ತದೆ. ಇದರಿಂದ ನೀವು ರೂ.31 ಲಕ್ಷದಿಂದ 35 ಲಕ್ಷ ರೂ.ಗಳಷ್ಟು ಲಾಭ ಪಡೆಯುವ ಸಾಧ್ಯತೆ ಇದೆ.

ಇದರಿಂದಾಗುವ ಪ್ರಯೋಜನದ ಬಗ್ಗೆ ತಿಳಿಯುವುದಾದರೆ, ನಾವೀಗ ಒಂದು ಉದಾಹರಣೆಯ ಮೂಲಕ ತಿಳಿಸುತ್ತೇವೆ. ಒಬ್ಬ ವ್ಯಕ್ತಿಯು 19 ವರ್ಷ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 10 ಲಕ್ಷ ರೂ.ಗಳ ಪಾಲಿಸಿಯನ್ನು ಖರೀದಿಸುತ್ತಾನೆ. ಆತನಿಗೆ 55 ವರ್ಷಗಳವರೆಗೆ ಮಾಸಿಕ ಪ್ರೀಮಿಯಂ 1515 ರೂ, 58 ವರ್ಷದ ನಂತರ 1,463 ರೂ. ಮತ್ತು 60 ವರ್ಷಕ್ಕೆ 1,411 ರೂ. ಆಗಿರುತ್ತದೆ. ಈ ಸಂದರ್ಭದಲ್ಲಿ ಪಾಲಿಸಿ ಖರೀದಿದಾರರು 55 ವರ್ಷಗಳಿಗೆ 31.60 ಲಕ್ಷ ರೂ., 58 ವರ್ಷಗಳ ತನಕ 33.40 ಲಕ್ಷ ರೂ. ಮತ್ತು 60 ವರ್ಷಗಳವರೆಗೆ 34.60 ಲಕ್ಷ ರೂ.ಗಳ ಮೆಚ್ಯೂರಿಟಿ ಲಾಭವನ್ನು ಪಡೆಯುತ್ತಾರೆ. ಅಂದರೆ ಇಲ್ಲಿ ನೀವು ಸಣ್ಣ ಮೊತ್ತದ ಹೂಡಿಕೆಯಿಂದ ದೊಡ್ಡ ಲಾಭವನ್ನು ಪಡೆಯಬಹುದು.

ಈ ಯೋಜನೆಯಡಿಯಲ್ಲಿ ಹೂಡಿಕೆ ಮಾಡಬೇಕೆಂದಾದರೆ 9 ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರಿಗೆ ಅವಕಾಶವಿದೆ. ಈ ಯೋಜನೆಯಡಿ ಕನಿಷ್ಠ ವಿಮಾ ಮೊತ್ತವು 10,000 ರೂ.ಗಳಿಂದ 10 ಲಕ್ಷ ರೂ. ವರೆಗೆ ಇದೆ. ಈ ಯೋಜನೆಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪ್ರೀಮಿಯಂ ಪಾವತಿಯನ್ನು ಮಾಡಬಹುದು.
ಪ್ರೀಮಿಯಂ ಪಾವತಿಸಲು ನೀವು 30 ದಿನಗಳ ಗ್ರೇಸ್ ಅವಧಿಯನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲದೇ ಸಾಲವನ್ನು ಸಹ ನೀವು ತೆಗೆದುಕೊಳ್ಳಬಹುದು.
ಈ ಯೋಜನೆಯನ್ನು ತೆಗೆದುಕೊಂಡ 3 ವರ್ಷಗಳ ನಂತರ, ನೀವು ಅದನ್ನು Surrender ಸಹ ಮಾಡಬಹುದು. ಆದರೆ ಈ ಪರಿಸ್ಥಿತಿಯಲ್ಲಿ ನೀವು ಯಾವುದೇ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ.

Leave A Reply

Your email address will not be published.