ಭೀಕರ ಅಪಘಾತ | ರಸ್ತೆ ಬದಿ ಬಸ್‌ಗಾಗಿ ಕಾಯುತ್ತಿದ್ದವರ ಮೇಲೆಯೇ ಹರಿದ ಬಸ್‌ | 6 ಜನರ ದಾರುಣ ಸಾವು

ರತ್ಲಂ ಜಿಲ್ಲೆಯಿಂದ ಸುಮಾರು 35 ಕಿಮೀ ದೂರದಲ್ಲಿರುವ ರತ್ಲಾಮ್-ಲೆಬಾದ್ ರಸ್ತೆಯಲ್ಲಿರುವ ಸತ್ರುಂಡಾ ಗ್ರಾಮದಲ್ಲಿ ಭೀಕರ ಅಪಘಾತ ಮುನ್ನಲೆಗೆ ಬಂದಿದೆ. ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭ ಈ ಜನರ ಮೇಲೆ ಟ್ರಕ್ ಹರಿದು 6 ಜನ ಸಾವನ್ನಪ್ಪಿದ್ದಾರೆ. ಅಲ್ಲದೆ ಉಳಿದ 12 ಮಂದಿ ಗಾಯಗೊಂಡಿರುವ ದಾರುಣ ಘಟನೆ ಭಾನುವಾರ ನಡೆದಿದೆ.

 

ಈ ಘಟನೆ ಸಂದರ್ಭ ಟ್ರಕ್ ವೇಗವಾಗಿ ಚಲಿಸುತ್ತಿದ್ದುದರಿಂದ ಏಕಾಏಕಿ ಟೈರ್ ಒಡೆದ ಪರಿಣಾಮ ಗಾಡಿಯ ನಿಯಂತ್ರಣ ತಪ್ಪಿದೆ. ಟ್ರಕ್ ರತ್ಲಾಮ್‌ನಿಂದ ಬದ್ನಾವರ್‌ಗೆ ಪ್ರಯಾಣಿಸುತ್ತಿದ್ದಾಗ ಅದರ ಟೈರ್ ಒಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಅತಿ ವೇಗವಾಗಿ ಬಂದ ಟ್ರಕ್ ರಸ್ತೆ ಬಳಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಜನರ ಗುಂಪಿನ ಮೇಲೆ ನುಗ್ಗಿದೆ.

ಭಾನುವಾರ ರತ್ಲಾಮ್‌ನಲ್ಲಿ ನಡೆದ ಈ ಭೀಕರ ಅವಘಡದಿಂದ ಜನರ ಮೇಲೆ ಟ್ರಕ್ ಡಿಕ್ಕಿ ಹೊಡೆದಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ,ಈ ಅಪಘಾತದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.

Leave A Reply

Your email address will not be published.