ಮಾರುಕಟ್ಟೆಗೆ ಬಂದಿದೆ ನಕಲಿ ಐಫೋನ್‌ | ಭರ್ಜರಿ ಸೇಲ್‌ ಗೆ ಮುಗಿಬಿದ್ದ ಜನ | ನಕಲಿ-ಅಸಲಿ ಕಂಡು ಹಿಡಿಯುವುದು ಹೇಗೆ?

ಪ್ರಸ್ತುತ ಮೊಬೈಲ್ ಬಳಕೆದಾರರು ಯಾವಾಗ ಹೊಸ ಸ್ಮಾರ್ಟ್​ಫೋನ್​ಗಳು ರಿಲೀಸ್​ ಆಗುತ್ತದೆ ಎಂದು ಕಾಯುತ್ತಿರುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಕಂಪನಿಗಳು ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಜೊತೆಗೆ ಈಗಾಗಲೇ ಬಿಡುಗಡೆ ಆಗಿರುವ ಫೋನ್ ಮೇಲೆ ಆಫರ್ ಸಹ ನೀಡಲಾಗುತ್ತಿದೆ. ಆದರೆ ಕಡಿಮೆ ಬೆಲೆ ಎಂದು ಹಿಂದು ಮುಂದು ಯೋಚಿಸದೆ ಫೋನ್ ಖರೀದಿಸದಿರಿ. ಸ್ಮಾರ್ಟ್ ಫೋನ್ ಖರೀದಿಸುವಾಗ ಎಚ್ಚರ ವಹಿಸುವುದು ಉತ್ತಮ.

 

ಹೌದು ಮಾರುಕಟ್ಟೆಯಲ್ಲಿಂದು ನಕಲಿ ಫೋನ್​ಗಳ ಮಾರಾಟ ನಡೆಯುತ್ತಿದೆ. ಇದು ಭಾರತದಲ್ಲಿ ಹೆಚ್ಚು ಎಂಬುದು ಆತಂಕಕಾರಿ ವಿಚಾರ. ಇತ್ತೀಚೆಗಷ್ಟೆ ನೊಯಿಡಾದಲ್ಲಿ ಪೊಲೀಸರು ಐಫೋನ್ 13 ನಕಲಿ ಫೋನ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂರು ಜನರ ತಂಡವನ್ನು ಬಂಧಿಸಿದ್ದರು. ಇವರಿಂದ60ಕ್ಕೂ ಅಧಿಕ ಫೇಕ್ ಐಫೋನ್​​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ವರದಿ ಪ್ರಕಾರ, ಇವರು ದೆಹಲಿಯಲ್ಲಿ ಕೇವಲ 12,000 ರೂಪಾಯಿಗೆ ಫೋನನ್ನು ಖರೀದಿಸಿ ಚೀನಾದ ಶಾಪಿಂಗ್ ವೆಬ್​ಸೈಟ್​ನಿಂದ ಥೇಟ್ ಐಫೋನ್ ರೀತಿಯ ಬಾಕ್ಸ್ ಅನ್ನು ಆರ್ಡರ್ ಮಾಡಿ ಅದಕ್ಕೆ ಆ್ಯಪಲ್ ಸ್ಟಿಕ್ಕರ್ ಅಂಟಿಸಿ ಸೇಲ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ನಿಮ್ಮ ಐಫೋನ್ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಲು ಇರುವ ಸುಲಭ ವಿಧಾನ IMEI ನಂಬರ್:
ನಿಮ್ಮ ಐಫೋನ್ ಅಸಲಿಯೋ ಅಥವಾ ನಕಲಿಯೋ ತಿಳಿಯುವ ವಿಧಾನ :

  • ಎಲ್ಲ ಒರಿಜಿನಲ್ ಐಫೋನ್​ಗಳಲ್ಲಿ IMEI ಇರುತ್ತದೆ.
    ಸೆಟ್ಟಿಂಗ್ಸ್​ನಲ್ಲಿ IMEI ನಂಬರ್ ನೋಡಲು ಹೀಗೆ ಮಾಡಿ. • ಸೆಟ್ಟಿಂಗ್ಸ್-ಜನರಲ್ ಇಲ್ಲಿ ಅಬೌಟ್ ಮೇಲೆ ಕ್ಲಿಕ್ ಮಾಡಿದರೆ ಸಿಗುತ್ತದೆ.
  • ಇಲ್ಲಿ ನಿಮಗೆ IMEI ನಂಬರ್ ಕಾಣಿಸಿಲ್ಲ ಎಂದಾದರೆ ನಿಮ್ಮ ಐಫೋನ್ ನಕಲಿ ಆಗಿರುವ ಸಾಧ್ಯತೆ ಹೆಚ್ಚಿದೆ.

ನೀವು ದುಬಾರಿ ಬೆಲೆಯ ಐಫೋನ್ ಖರೀದಿಸಬೇಕು ಎಂದುಕೊಂಡಿದ್ದರೆ ಕಡಿಮೆ ಬೆಲೆ ಇದೆ ಎಂದು ಸಿಕ್ಕಸಿಕ್ಕಲ್ಲಿ ಪಡೆದುಕೊಳ್ಳಬೇಡಿ. ನಂಬಿಕೆಗೆ ಅರ್ಹವಾದ ತಾಣ ಅಥವಾ ರಿಟೆಲ್ ಸ್ಟೋರ್​ಗಳನ್ನು ಆಯ್ಕೆ ಮಾಡುವುದು ಉತ್ತಮ.

ಅಂತೆಯೆ ಹೆಚ್ಚಿನ ಫೇಕ್ ಮೊಬೈಲ್​ಗಳು ಅಥವಾ ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳು ತಪ್ಪಾದ ಅಕ್ಷರವನ್ನು ಹೊಂದಿರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೆಳಕಿಗೆ ಬರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇಲ್ಲಿ ಕೆಲವು ಉದಾಹರಣೆಗಳು ಕೆಳಗಡೆ ಇದೆ.

  • Samsung = Sammsung or Samsang or Samsong,
  • iPhone = iPone or iPhoon,
  • Huawei= Hauwei or Huawai,
  • Xiaomi = Xaiomi or Xioami.

ಈ ರೀತಿಯಾಗಿ ಸ್ಪೆಲ್ಲಿಂಗ್ ಮಿಸ್ಟೇಕ್ ಇರುತ್ತದೆ.
ನಿಮ್ಮ ಐಫೋನ್ ಅಸಲಿಯೋ ಅಥವಾ ನಕಲಿಯೋ ಎಂದು ಹೇಗೆ ಪರಿಶೀಲಿಸುವುದು ಎಂದು ತಿಳಿಯಲು ಸಾಧ್ಯವಾಗದಿದ್ದರೆ ನಿಮ್ಮ ಪಕ್ಕದ ಆ್ಯಪಲ್ ಸ್ಟೋರ್​ಗೆ ಬೇಟಿ ನೀಡಿ. ಅವರು ನಿಮ್ಮ ಐಫೋನನ್ನು ರನ್ ಮಾಡಿ ಇದು ಫೇಕ್ ಅಥವಾ ರಿಯಲ್ ಎಂಬುದನ್ನು ತಿಳಯಲು ಸಹಾಯ ಮಾಡುತ್ತಾರೆ.

ಆದ್ದರಿಂದ ಇನ್ನಾದರೂ ಜಾಗೃತರಾಗಿರಿ. ನಾವು ಎಲ್ಲಿವರೆಗೆ ಮೋಸ ಹೋಗುತ್ತೇವೆ ಅಲ್ಲಿವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ.

Leave A Reply

Your email address will not be published.