ಉಗುರಿನ ಸುತ್ತ ಚರ್ಮ ಉದುರುತ್ತಿದ್ರೆ ಇಲ್ಲಿದೆ ಮನೆಮದ್ದು, ಉಗುರಿನ ಆರೈಕೆ ಹೀಗೆ ಮಾಡಿ

ನಮ್ಮ ದೇಹದ ಪ್ರತಿಯೊಂದು ಭಾಗಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಆಗಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯು ಹೌದು. ಆರೋಗ್ಯವೇ ಭಾಗ್ಯ ಅನ್ನೋ ನುಡಿಮುತ್ತು ಕೇಳಿರಬಹುದು. ಹಾಗೆಯೇ ನಮಗೆ ಆರೋಗ್ಯ ಇದ್ದರೆ ಮಾತ್ರ ನಾವು ಪರಿಪೂರ್ಣ ತಾನೇ.

 

ಚಳಿಗಾಲದಲ್ಲಿ ಉಗುರಿನ ಬಳಿ ತ್ವಚೆ ಉದುರುವ ಸಮಸ್ಯೆಯಿಂದ ಅನೇಕರಿಗೆ ತೊಂದರೆಯಾಗುತ್ತಿದೆ. ಇದು ತುಂಬಾ ಸಾಮಾನ್ಯವಾದ ಸಮಸ್ಯೆ ಎಂದು ಅನಿಸಿದರೂ ಸಹ ಕೆಲವೊಮ್ಮೆ ಇದು ಬಹಳಷ್ಟು ತೊಂದರೆಗಳನ್ನು ಉಂಟುಮಾಡಬಹುದು. ವಿಶೇಷವಾಗಿ ದಿನವಿಡೀ ಕೆಲಸ ಮಾಡುವ ಜನರಿಗೆ ಇದು ದೊಡ್ಡ ಸಮಸ್ಯೆ ಉಂಟಾಗುತ್ತದೆ. ಕಿರಿಕಿರಿ ಉಂಟಾಗುತ್ತದೆ ಎಂದರೆ ತಪ್ಪಲ್ಲ. ಕೆಲವರು ಇದನ್ನು ವೆರಿಕೋಸ್ ವೆಯಿನ್ಸ್ ಎಂದೂ ಕರೆಯುತ್ತಾರೆ.

ಮಸಾಲೆಯುಕ್ತ ಆಹಾರವನ್ನು ತಿನ್ನುವಾಗ, ಮಸಾಲೆಯುಕ್ತ ತರಕಾರಿಗಳನ್ನು ತಿನ್ನುವಾಗ ಇದರಿಂದ ಹೆಚ್ಚು ನೋವು ಕಾಡುತ್ತದೆ. ಕೆಲವೊಮ್ಮೆ ರಕ್ತಸ್ರಾವ ಸಹ ಆಗುತ್ತದೆ. ಆದ್ದರಿಂದ ಈ ಸಮಸ್ಯೆಯು ತುಂಬಾ ಹೆಚ್ಚಾಗುತ್ತದೆ.

ನೀವೂ ಸಹ ಉಗುರಿನ ಬಳಿ ತ್ವಚೆ ಉದುರುವ ಸಮಸ್ಯೆಯಿಂದ ಬಳಲುತ್ತಿದ್ದರೆ, ಇದರಿಂದ ಮುಕ್ತಿ ಪಡೆಯಲು ನೀವು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.

ಉಗುರುಗಳ ಬಳಿ ಚರ್ಮವನ್ನು ಸುಲಿದ ನಂತರ ಅಥವಾ ಚರ್ಮ ಸುಲಿಯದಂತೆ ತಡೆಯಲು ಈ ಸಲಹೆ ಅನುಸರಿಸಿ :

  • ಪ್ರತಿದಿನ ಆಲಿವ್ ಎಣ್ಣೆಯಿಂದ ನಿಮ್ಮ ಉಗುರುಗಳು ಮತ್ತು ಅವುಗಳ ಸುತ್ತಲಿನ ಚರ್ಮಕ್ಕೆ ಮಸಾಜ್ ಮಾಡಿ. ಆಲಿವ್ ಎಣ್ಣೆ ಲಭ್ಯವಿಲ್ಲದಿದ್ದರೆ, ನೀವು ಸಾಸಿವೆ ಅಥವಾ ತೆಂಗಿನ ಎಣ್ಣೆಯನ್ನು ಸಹ ಬಳಸಬಹುದು.
  • ಈ ಸಮಸ್ಯೆಯಿಂದ ಪರಿಹಾರ ಪಡೆಯಲು ನೀವು ಸೌತೆಕಾಯಿಯನ್ನು ಸಹ ಬಳಸಬಹುದು. ಇದಕ್ಕಾಗಿ ಸೌತೆಕಾಯಿಯನ್ನು ಕತ್ತರಿಸಿ ಉಗುರುಗಳ ಸುತ್ತಲಿನ ಜಾಗದಲ್ಲಿ ನಿಧಾನವಾಗಿ ಉಜ್ಜಿ. • ಬೆರಳಿನ ಉಗುರುಗಳ ಸುತ್ತ ಸಿಪ್ಪೆ ಸುಲಿಯುವ ಚರ್ಮವನ್ನು ಸರಿಪಡಿಸಲು, ನೀವು ಪ್ರತಿದಿನ ಸುಮಾರು ಐದು ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನಿಮ್ಮ ಕೈಗಳನ್ನು ನೆನೆಸಿಡಬೇಕು. ನೀವು ಬಯಸಿದಲ್ಲಿ ನೀರಿಗೆ ನಿಂಬೆ ರಸವನ್ನು ಕೂಡ ಸೇರಿಸಬಹುದು. ಅಲ್ಲದೇ, ನೀವು ಕೈಗೆ ವ್ಯಾಸಲಿನ್ ಅಥವಾ ಪಟ್ರೋಲಿಯಂ ಜೆಲ್ಲಿ ಹಚ್ಚಿ, ನಂತರ ಕೈಗಳನ್ನು ಬಿಸಿ ನೀರಿನಲ್ಲಿ ನೆನಸಿಡಬಹುದು. ನೀವು ಇದನ್ನು ಕಾಲುಗಳಿಗೆ ಸಹ ಮಾಡಬಹುದು.
  • ಪೆಟ್ರೋಲಿಯಂ ಜೆಲ್ಲಿ ಬಳಸಿ ಮಸಾಜ್ ಮಾಡಿ ಸಾಕು
    ಈ ಸಮಸ್ಯೆಯನ್ನು ಕಡಿಮೆ ಮಾಡಲು, ಪ್ರತಿದಿನ ರಾತ್ರಿ ಮಲಗುವ ಮುನ್ನ ನಿಮ್ಮ ಉಗುರುಗಳ ಸುತ್ತಲೂ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ ಕೈಗಳಿಂದ ಮಸಾಜ್ ಮಾಡಿ. ಇದು ಕೇವಲ ಸಮಸ್ಯೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ, ಸಮಸ್ಯೆ ಶುರುವಾಗುವ ಮೊದಲೇ ಮಾಡಿದರೆ ಚರ್ಮ ಸುಲಿಯುವುದಿಲ್ಲ.
  • ಓಟ್ಸ್ ಪೇಸ್ಟ್ ಅನ್ನು ಸಹ ಬಳಸಬಹುದು. ಇದಕ್ಕಾಗಿ ಓಟ್ಸ್ ಅನ್ನು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಸಮಯದವರೆಗೆ ನೆನೆಸಿ ಪೇಸ್ಟ್ ತಯಾರಿಸಿ. ನಂತರ ಈ ಪೇಸ್ಟ್ ಅನ್ನು ಉಗುರುಗಳ ಮೇಲೆ ಹಚ್ಚಿ ಮಸಾಜ್ ಮಾಡಿ.
  • ನಿಮ್ಮ ಚರ್ಮದ ಅಂದ ಹೆಚ್ಚಿಸಲು ಹಾಗೂ ಸಿಪ್ಪೆ ಸುಲಿಯುವುದನ್ನ ಕಡಿಮೆ ಮಾಡಲು ನೀವು ಜೇನುತುಪ್ಪವನ್ನು ಸಹ ಬಳಸಬಹುದು. ಇದಕ್ಕಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಉಗುರುಗಳು ಮತ್ತು ಅವುಗಳ ಸುತ್ತಲಿನ ಚರ್ಮಕ್ಕೆ ಜೇನುತುಪ್ಪವನ್ನು ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ.
  • ಚರ್ಮದ ಸರ್ವ ಸಮಸ್ಯೆಗಳಿಗೆ ಅಲೋವೆರಾ ಜೆಲ್​ ರಾಮಬಾಣ ಎಂದು ಹೇಳಲಾಗುತ್ತದೆ. ಚಳಿಗಾಲದಲ್ಲಿ ನಿಮಗೂ ಸಹ ಉಗುರಿನ ಸುತ್ತ ಚರ್ಮ ಸುಲಿಯುತ್ತಿದ್ದರೆ ನೀವು ಅಲೋವೆರಾ ಜೆಲ್ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ಅಲೋವೆರಾ ಜೆಲ್ ಅನ್ನು ಉಗುರುಗಳು ಮತ್ತು ಅವುಗಳ ಪಕ್ಕದ ಚರ್ಮದ ಮೇಲೆ ಹಚ್ಚಿ ಮತ್ತು ಕೆಲವು ದಿನಗಳವರೆಗೆ ನಿಯಮಿತವಾಗಿ ಮಸಾಜ್ ಮಾಡಿ.

ಅಲ್ಲದೆ ಕೆಲವರಿಗೆ ದುರ್ಬಲವಾದ ಉಗುರುಗಳನ್ನು ನೀವು ಗಮನಿಸಿರಬಹುದು. ಅಥವಾ ನಿಮ್ಮ ಉಗುರು ದುರ್ಬಲ ಆಗಿರಬಹುದು. ಅದಲ್ಲದೆ ಉಗುರುಗಳನ್ನು ಧೂಳು ಮತ್ತು ಕೊಳೆಗಳಿಂದ ಸ್ವಚ್ಚವಾಗಿಟ್ಟುಕೊಳ್ಳುವುದು ಉತ್ತಮ.
ಈ ತರಹದ ಉಗುರುಗಳು ನಿಮ್ಮ ಒತ್ತಡದಿಂದ ಹಿಡಿದು ಮೂತ್ರಪಿಂಡ ಮತ್ತು ಥೈರಾಯ್ಡ್ ಕಾಯಿಲೆಯವರೆಗೆ ಅನೇಕ ರೋಗಗಳ ಲಕ್ಷಣಗಳಿಗೆ ಕಾರಣವಾಗಬಹುದು. ಆದ್ದರಿಂದ ಉಗುರುಗಳ ಆರೋಗ್ಯದ ಬಗ್ಗೆಯು ಎಚ್ಚರ ವಹಿಸುವುದು ಅಗತ್ಯ.

Leave A Reply

Your email address will not be published.