ಗುಜರಾತ್ ಚುನಾವಣೋತ್ತರ ಸಮೀಕ್ಷೆ ಬಹಿರಂಗ | ಸತತ 7 ನೇ ಬಾರಿ ಗುಜರಾತಿನಲ್ಲಿ ಬಿಜೆಪಿ , ಹಿಮಾಚಲ ಪ್ರದೇಶ ಕೂಡಾ ಬಿಜೆಪಿ ಕೈಯಲ್ಲೇ !
ಗುಜರಾತ್ ನಲ್ಲಿ ಮೋದಿಯ ಅಶ್ವಮೇಧದ ಕುದುರೆಯನ್ನು ಈ ಸಲ ಕೂಡಾ ಯಾರಿಂದಲೂ ಕಟ್ಟಿ ಹಾಕಲು ಸಾಧ್ಯವಿಲ್ಲವಾಗಿದೆ. ಈ ಬಾರಿಯೂ ಬಿಜೆಪಿ ಮೋದಿಯ ತವರು ರಾಜ್ಯದಲ್ಲಿ ನಿಚ್ಚಳವಾಗಿ ಅಧಿಕಾರಕ್ಕೆ ಬರಲಿದೆ ಎಂದು ಹಲವು ಚುನಾವಣೋತ್ತರ ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ ಗುಜರಾತ್ ನ 182 ಕ್ಷೇತ್ರಗಳಲ್ಲಿ ಬಿಜೆಪಿ 117 ರಿಂದ 140, ಕಾಂಗ್ರೆಸ್ 34 ರಿಂದ 51, ಆಪ್ 6 ರಿಂದ 13, ಇತರರರು 1 ರಿಂದ 2 ಸ್ಥಾನ ಗಳಿಸಬಹುದು.
ಇಂಡಿಯಾ ಟಿವಿ ಮತ್ತು. ಮಟ್ರಿಸ್ ಪ್ರಕರ ಬಿಜೆಪಿಯು 112 ರಿಂದ 121 ಸ್ಥಾನಗಳನ್ನು ಪಡೆಯಲಿದೆ.
ಎಂಡಿ ಟಿ ವಿ ಎಕ್ಸಿಟ್ ಪೋಲ್ ನ ಪ್ರಕಾರ ಬಿಜೆಪಿ ಯು 135 ಸ್ಥಾನಗಳನ್ನು ಗಳಿಸಲಿದೆ. ಕಾಂಗ್ರೇಸ್ ಮತ್ತು ಎನ್ ಸಿ ಪಿ ಯು 41 ಸ್ಥಾನಗಳಲ್ಲಿ ಮತ್ತು ಇತರರು 3 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ.
ರಿಪಬ್ಲಿಕ್ ಸಮೀಕ್ಷೆಯ ಪ್ರಕಾರ ಬಿಜೆಪಿ 128 ರಿಂದ 148, ಕಾಂಗ್ರೆಸ್ 30 ರಿಂದ 42, ಆಪ್ 2 ರಿಂದ 10, ಇತರರು 3 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ.
ಟಿವಿ9 ಭಾರತ್ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಗುಜರಾತ್ ನ 182 ಸ್ಥಾನಗಳಲ್ಲಿ ಬಿಜೆಪಿ 125 ರಿಂದ 130 ಸ್ಥಾನಗಳಲ್ಲಿ ಜಯಗಳಿಸಲಿದೆ. ಕಾಂಗ್ರೆಸ್ 40 ರಿಂದ 50, ಆಮ್ ಆದ್ಮಿ ಪಕ್ಷ 3 ರಿಂದ 5 ಹಾಗೂ ಇತರರು ಮೂರರಿಂದ ಏಳು ಸ್ಥಾನ ಗಳಿಸಲಿದ್ದಾರೆ.
ಟಿವಿ9 ಭಾರತ್ ವರ್ಷ ಸಮೀಕ್ಷೆ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಅತಂತ್ರ ಫಲಿತಾಂಶ ಸೃಷ್ಟಿಯಾಗಬಹುದು. 68 ಕ್ಷೇತ್ರಗಳ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 34 ರಿಂದ 39, ಕಾಂಗ್ರೆಸ್ 28ರಿಂದ 33, ಆಮ್ ಆದ್ಮಿ ಪಕ್ಷ ಒಂದು, ಇತರರು 4 ಸ್ಥಾನ ಗಳಿಸುವ ಸಾಧ್ಯತೆ ಇದೆ.
ರಿಪಬ್ಲಿಕ್ ಸಮೀಕ್ಷೆ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿಗೆ 34 ರಿಂದ 39, ಕಾಂಗ್ರೆಸ್ 28 ರಿಂದ 33, ಆಮ್ ಆದ್ಮಿ ಪಕ್ಷ ಒಂದು ಸ್ಥಾನ ಹಾಗೂ ಇತರರು ಒಂದರಿಂದ ನಾಲ್ಕು ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ.
ರಿಪಬ್ಲಿಕ್ ಸಮೀಕ್ಷೆಯ ಪ್ರಕಾರ ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಬಹುಮತ ಗಳಿಸಲಿದೆ. ಒಟ್ಟು 68 ಸ್ಥಾನಗಳಿರುವ ಹಿಮಾಚಲ ಪ್ರದೇಶದಲ್ಲಿ ಬಹುಮತಕ್ಕೆ 35 ಸ್ಥಾನಗಳು ಬೇಕಿದೆ. ಅದನ್ನು ಬಿಜೆಪಿ ಸಾಧಿಸಲಿದೆ ಎಂದಿದೆ ಸಮೀಕ್ಷೆಗಳು.