ವಾಹನ ಸವಾರರೇ RC, License ಬೇಡ | ಇದಿದ್ದರೆ ಸಾಕು!
ರೂಲ್ಸ್ ಇರೋದೇ ಬ್ರೇಕ್ ಮಾಡೋದಕ್ಕೆ!! ಎನ್ನುವಂತೆ ಈ ಹಿಂದೆ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿತ್ತು. ಆದರೆ, ಎಲ್ಲ ನಿಯಮಗಳು ಈಗ ಬದಲಾಗಿದ್ದು, ರೂಲ್ಸ್ ಬ್ರೇಕ್ ಮಾಡಿದವರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ!! ಅಲ್ಲದೆ, ಚಾಲನಾ ಪರವಾನಿಗೆ ಇಲ್ಲದೆ ವಾಹನಗಳನ್ನ ಓಡಿಸುವುದು ಕೂಡ ಈಗ ಸುಲಭವಲ್ಲ. ಹಾಗಾಗಿ, ಚಾಲಕನು ಪರವಾನಗಿ, ಆರ್ಸಿ, ಮಾಲಿನ್ಯ ಪ್ರಮಾಣ ಪತ್ರ, ವಿಮೆ ಮುಂತಾದ ಎಲ್ಲಾ ದಾಖಲೆಗಳನ್ನು ಹೊಂದಿರಬೇಕಾದ ಅವಶ್ಯಕತೆ ಇದೆ.
ಯಾವುದೇ ದಾಖಲೆಗಳಿಲ್ಲದೆ ಸಂಚಾರ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದರೆ, 2 ಸಾವಿರದಿಂದ 5 ಸಾವಿರ ರೂಪಾಯಿವರೆಗೆ ದಂಡ ತೆರಬೇಕಾಗುತ್ತದೆ. ಇಷ್ಟೇ ಅಲ್ಲದೆ, ಪರವಾನಿಗೆ ಇಲ್ಲದೇ ವಾಹನ ಚಲಾಯಿಸಿದರೆ ಆ ಸಂದರ್ಭ ದಾಖಲೆಗಳು ಇಲ್ಲದೇ ಹೋದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹಾಗಾಗಿ, ಚಾಲಕರು ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯವಾಗಿದೆ. ಆದ್ರೆ, ವಾಹನ ಚಾಲಕರು ಗಮನಿಸಬೇಕಾದ ವಿಚಾರ ಒಂದಿದೆ.
ನಿಮ್ಮ ಬಳಿ ಒಂದು ಅಪ್ಲಿಕೇಶನ್ ಇದ್ದರೆ ಸಾಕು ನಿಮ್ಮ ಬಳಿ ಲೈಸೆನ್ಸ್ ಅಥವಾ ಆರ್ ಸಿ ಇಲ್ಲದಿದ್ದರೂ ಚಲನ್ ನೀಡುವುದಿಲ್ಲ. 2018ರಲ್ಲಿ ಭಾರತ ಸರ್ಕಾರದ ರಸ್ತೆಗಳು ಮತ್ತು ಸಾರಿಗೆ ಸಚಿವಾಲಯವು ಡಿಜಿಲಾಕರ್ ಮತ್ತು ಎಂಪರಿವಾಹನ್ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಅಪ್ಲೋಡ್ ಮಾಡಲಾದ ದಾಖಲೆಗಳ ದೃಢೀಕರಣವನ್ನ ಪರಿಶೀಲಿಸಲು ನಿರ್ದೇಶನಗಳನ್ನು ನೀಡಲಾಗಿದೆ.
ಡಿಜಿಟಲ್ ಇಂಡಿಯಾವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ವಾಹನ ಚಲಾಯಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನ ಪಡೆಯಲು ಹಲವಾರು ಅಪ್ಲಿಕೇಶನ್ಗಳನ್ನು ಜಾರಿಗೆ ತಂದಿದೆ. DigiLocker, mParivahan ಮೊಬೈಲ್ ಅಪ್ಲಿಕೇಶನ್ಗಳ ಮೂಲಕ ನಿಮ್ಮ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪ್ರಮಾಣಪತ್ರ, ಮಾಲಿನ್ಯ ಪ್ರಮಾಣ ಪತ್ರ, ವಿಮೆ ದಾಖಲೆಗಳನ್ನು ಅಪ್ಲೋಡ್ ಮಾಡಬಹುದಾಗಿದೆ.ಈ ಎರಡೂ ಅಪ್ಲಿಕೇಶನ್ಗಳು ಅಧಿಕೃತವಾಗಿದ್ದು ದೇಶದಾದ್ಯಂತ ಮಾನ್ಯತೆ ಪಡೆದಿವೆ .ಅಷ್ಟೆ ಅಲ್ಲದೆ, ಈ ಅಪ್ಲಿಕೇಷನ್ ಗಳನ್ನು ಎಲ್ಲಿ ಬೇಕಾದರೂ ಯಾವ ಸಂದರ್ಭದಲ್ಲಿಯು ಕೂಡ ಬಳಸಬಹುದಾಗಿದೆ.
ಈ ಯಾವುದೇ ದಾಖಲೆಗಳಿಲ್ಲದೇ ನೀವು ರಸ್ತೆಯಲ್ಲಿ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ, ನೀವು ಭಾರೀ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ, ನಿಮ್ಮ ವಾಹನವನ್ನ ರಸ್ತೆಯಲ್ಲಿ ಇಳಿಸುವ ಮುನ್ನ. ಅಗತ್ಯ ದಾಖಲೆಗಳು ಇವೆಯೇ ಎಂದು ಖಾತ್ರಿ ಮಾಡಿಕೊಳ್ಳುವುದು ಉತ್ತಮ. ಕಾಲ ಬದಲಾದಂತೆ ಡಿಜಿಟಲ್ ಇಂಡಿಯಾದ ಅನುಸಾರ ವಾಹನ ಚಾಲನೆಗೆ ಬೇಕಾದ ದಾಖಲೆಗಳ ಹಾರ್ಡ್ ಕಾಪಿಗಳು ಇಲ್ಲದಿದ್ದರೂ ಕೂಡ DigiLocker, mParivahan ಮೊಬೈಲ್ ಅಪ್ಲಿಕೇಶನ್ನಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನು ಸುಲಭವಾಗಿ ದಾಖಲಿಸಬಹುದು.