ವಿಜಯ್‌ ಸೇತುಪತಿ ಸಿನಿಮಾ ಚಿತ್ರೀಕರಣ : ಭಾರೀ ಅವಘಡ, 20 ಅಡಿ ಎತ್ತರದಿಂದ ಬಿದ್ದು ಮೃತನಾದ ಸ್ಟಂಟ್‌ ಮ್ಯಾನ್‌

ಸಿನಿಮಾ ಚಿತ್ರೀಕರಣದ ಸಂದರ್ಭ ಹಠಾತ್ತನೆ ನಡೆದ ಅವಘಡದಿಂದ ಸ್ಟಂಟ್‌ ಮ್ಯಾನ್‌ ಒಬ್ಬರು ಮೃತ ಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.ಚೆನ್ನೈ ನಲ್ಲಿ ಈ ಘಟನೆ ನಡೆದಿದ್ದು, ಸಿನಿಮಾದ ಸಾಹಸ ಸನ್ನಿವೇಶದ ಚಿತ್ರೀಕರಣ ವೇಳೆ ಆದ ಅವಘಡದಲ್ಲಿ ಸ್ಟಂಟ್‌ ಮ್ಯಾನ್‌ ವೊಬ್ಬರು ಸಾವಿನ ದವಡೆಗೆ ಸಿಲುಕಿದ ಘಟನೆ ನಡೆದಿದೆ.

 

ಖ್ಯಾತ ನಿರ್ದೇಶಕ ವೆಟ್ರಿಮಾರನ್‌ ಅವರ ‘ವಿಡುತಲೈ’ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದ್ದು, ಸುರೇಶ್‌ (54) ಮೃತ ಸ್ಟಂಟ್‌ ಮ್ಯಾನ್‌ ಎಂಬ ಮಾಹಿತಿ ಲಭ್ಯವಾಗಿದೆ .ʼವಿಡುತಲೈʼ ಚಿತ್ರದಲ್ಲಿ ಸೂರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಜಯ್‌ ಸೇತುಪತಿಯೂ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ರೈಲು ದುರಂತದ ಚಿತ್ರೀಕರಣವನ್ನು ಮಾಡಲಾಗುತ್ತಿದ್ದ ಸಂದರ್ಭ ಸುರೇಶ್‌ ಹಾಗೂ ಇತರ ಸ್ಟಂಟ್‌ ಮ್ಯಾನ್‌ ಗಳನ್ನು ಹಗ್ಗದಲ್ಲಿ ಕ್ರೇನ್‌ ಗೆ ಕಟ್ಟಲಾಗಿದ್ದು, ಅನಿರೀಕ್ಷಿತವಾಗಿ ಕ್ರೇನ್‌ ನಿಂದ ಹಗ್ಗ ತುಂಡಾಗಿ ಸುರೇಶ್‌ ಅವರು ಕೆಳಗೆ ಬಿದ್ದಿದ್ದಾರೆ. ಸುಮಾರು 20 ಅಡಿ ಎತ್ತರದಿಂದ ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಒಯ್ದರು ಕೂಡ ದಾರಿ ಮದ್ಯೆ ಸುರೇಶ್ ಅವರು ಮೃತಪಟ್ಟಿದ್ದಾರೆ. ಕೆಲ ವರ್ಷಗಳ ಹಿಂದೆ ʼಇಂಡಿಯನ್-2ʼ ಸಿನಿಮಾದ ಸೆಟ್‌ ನಲ್ಲೂ ಕೂಡ ಇದೆ ರೀತಿಯ ಅವಘಡ ಸಂಭವಿಸಿ ಮೂವರು ಮೃತ ಪಟ್ಟಿದ್ದರು.

Leave A Reply

Your email address will not be published.