ಹೊಂಬಾಳೆ ಹೊಸ ಸಿನಿಮಾದಲ್ಲಿ ಶಾರುಖ್‌ ಖಾನ್‌ : ಕಿಂಗ್‌ ಖಾನ್‌ ಜೊತೆ ಕಾಂತಾರ ಹೀರೋ ಜೊತೆಗೆ ರಕ್ಷಿತ್‌ ಶೆಟ್ಟಿ

ಹೊಂಬಾಳೆ ಫಿಲಂಸ್‌ ಈಗ ಮುಟ್ಟಿದ್ದೆಲ್ಲ ಚಿನ್ನ. ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೆಸರು ಮಾಡಿರುವ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಅತ್ಯದ್ಭುತ ಸಿನಿಮಾಗಳನ್ನು ನೀಡಿ ಭಾರತೀಯ ಸಿನಿರಂಗದಲ್ಲಿ ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೆಸರು ಮಾಡಿದೆ. ಹೊಂಬಾಳೆ ಫಿಲಂಸ್‌ ಸದ್ಯ ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟಿದ್ದು, ಬಾಲಿವುಡ್‌ ಬಾದ್‌ ಷಾ ಶಾರುಖ್‌ ಖಾನ್‌ ಜೊತೆ ಸಿನಿಮಾ ಮಾಡಲು ಕನ್ನಡದ ಹೊಂಬಾಳೆ ಫಿಲಂಸ್‌ ಮುಂದಾಗಿದೆ ಎಂದು ವರದಿಯಾಗಿದೆ.

 

ಅಷ್ಟು ಮಾತ್ರವಲ್ಲದೇ ಬಹಳ ಇಂಟೆರೆಸ್ಟಿಂಗ್‌ ವಿಷಯ ಏನೆಂದರೆ, ಶಾರುಖಾನ್‌ ಜೊತೆ ರಕ್ಷಿತ್‌ ಶೆಟ್ಟಿ ಮತ್ತು ರಿಷಬ್‌ ಶೆಟ್ಟಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಕಿಂಗ್‌ ಖಾನ್‌ ಸಿನಿಮಾದಲ್ಲಿ ರಿಷಬ್‌ ಮತ್ತು ರಕ್ಷಿತ್‌ ಎಂಟ್ರಿಗೆ ರೋಹಿತ್‌ ಶೆಟ್ಟಿ ಅವರು ಸ್ಪೇಷಲ್‌ ಪಾತ್ರಗಳನ್ನು ಕ್ರಿಯೇಟ್‌ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಷಯ ಅಂತೂ ಕನ್ನಡಿಗರಿಗೆ ನಿಜಕ್ಕೂ ಹಾಗೂ ಸಿನಿ ಪ್ರಿಯರಿಗೂ ಸಂತೋಷದ ಸುದ್ದಿ ಎಂದೇ ಹೇಳಬಹುದು. ಹಾಗೆನೇ ಈ ಮೆಗಾ ಪ್ರಾಜೆಕ್ಟ್‌ ಬಗ್ಗೆ ಹೊಂಬಾಳೆ ಫಿಲ್ಸ್‌ ಕೆಲವೇ ದಿನಗಳಲ್ಲಿ ಅನೌನ್ಸ್ ಮಾಡಲಿದೆ.

ಇನ್ನು ಹೊಂಬಾಳೆ ನಿರ್ಮಾಣದ ಬಿಗ್‌ ಬಜೆಟ್‌ ಸಲಾರ್‌ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದರ ಬೆನ್ನಲ್ಲೆ ಶಾರುಖ್ ಖಾನ್ ಜೊತೆ ಬಿಗ್‌ ಸಿನಿಮಾ ಮಾಡಲು ಹೊಂಬಾಳೆ ಫಿಲಂಸ್ ಮುಂದಾಗಿದ್ದು ಕುತೂಹಲ ಕೆರಳಿಸಿದೆ. ಈ ಕುರಿತಾಗಿ ಶಾರುಖ್ ಖಾನ್ ಜೊತೆ ಹೊಂಬಾಳೆ ಫಿಲಂಸ್ ಮಾತುಕತೆ ಮುಗಿಸಿದೆ. ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿರುವ ರಕ್ಷಿತ್ ಶೆಟ್ಟಿ ಹಾಗೂ ಕಾಂತಾರ ಫೇಮ್‌ ರಿಷಬ್ ಶೆಟ್ಟಿ ಕೂಡ ಶಾರುಖ್ ಚಿತ್ರದಲ್ಲಿ ನಟಿಸೊಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.