Redmi Smartphones: ರೆಡ್ಮಿ ಕಂಪನಿಯ ಎರಡು ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಆಫರ್!.

ಶಿಯೋಮಿ ಚೈನೀಸ್ ಕಂಪನಿಯಾಗಿದ್ದು ಭಾರತದಲ್ಲಿ ಉತ್ತಮ ಮಾರುಕಟ್ಟೆ ಪಾಲನ್ನು ಹೊಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಬ್ರಾಂಡ್​ನ ಫೋನ್‌ಗಳಿಗೆ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. Xiaomi ಕಂಪನಿ Redmi ಸೀರಿಸ್​ ಅನ್ನು ಪ್ರಾರಂಭಿಸಿ 8 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಈ ಸುಸಂದರ್ಭದಲ್ಲಿ ಕಂಪನಿಯು ಎರಡು ರೆಡ್ಮಿ ಸ್ಮಾರ್ಟ್​ಫೋನ್​ಗಳ ಬೆಲೆಯ ಮೇಲೆ ಆಫರ್ ನೀಡಲು ಅಣಿಯಾಗಿದೆ.

 

ರೆಡ್ಮಿ ಸ್ಮಾರ್ಟ್​​ಫೋನ್​ಗಳು ಬಹಳಷ್ಟು ಫೀಚರ್ಸ್​ ಅನ್ನು ಹೊಂದಿದ್ದು, Redmi Note 11, Redmi Note 11S ಸ್ಮಾರ್ಟ್​ಫೋನ್​​ ಅನ್ನು ಗ್ರಾಹಕರು ಕೈಗೆ ಎಟಕುವ ದರದಲ್ಲಿ ಪಡೆದುಕೊಳ್ಳುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ.
ರೆಡ್ಮಿ ಸ್ಮಾರ್ಟ್​​ಫೋನ್​ಗಳು ಬಹಳಷ್ಟು ಫೀಚರ್ಸ್​ ಅನ್ನು ಹೊಂದಿದ್ದು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಕಂಪನಿಯ ಮೊಬೈಲ್​ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಈಗ ಬಳಕೆದಾರರು Redmi Note 11, Redmi Note 11S ಸ್ಮಾರ್ಟ್​ಫೋನ್​​ ಅನ್ನು ಕಡಿಮೆ ಬೆಲೆಗೆ ಪಡೆಯಬಹುದಾಗಿದೆ.

ರೆಡ್ಮಿ ನೋಟ್​ 11 ಎಸ್ ಮಾಡೆಲ್ ಬೇಸ್ ವೆರಿಯಂಟ್ 6ಜಿಬಿ + 64ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್​​ಫೋನ್​ನಲ್ಲಿ ಬೆಲೆಯನ್ನು ರೂ.500 ಕಡಿತ ಮಾಡಲಾಗಿದ್ದು, ಇದೀಗ, 15,999 ಗೆ ಲಭ್ಯವಿದೆ. ಈ ಮಾದರಿಯ 6GB+128GB ಸ್ಟೋರೇಜ್​ನ ಬೆಲೆ ರೂ.1500 ಕಡಿಮೆಯಾಗಿದ್ದು, ಸದ್ಯ ಈಗ ರೂ.15,999ಕ್ಕೆ ಲಭ್ಯವಿದೆ. ಈ ಮಾದರಿಯ 8GB+128GB ಸ್ಟೋರೇಜ್​ನ ಸ್ಮಾರ್ಟ್​​ಫೋನ್ 16,999 ರೂಪಾಯಿಗಳಲ್ಲಿ ಲಭ್ಯವಿದ್ದು, ಇದರ ಬೆಲೆಯಲ್ಲಿ 1500 ರೂಪಾಯಿ ಇಳಿಕೆ ಮಾಡಲಾಗಿದೆ.


ಈ ಸ್ಮಾರ್ಟ್​ಫೋನ್ 5,000 mAh ಬ್ಯಾಟರಿಯನ್ನು ಹೊಂದಿದ್ದು, ಈ ಫೋನ್ 108MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಕ್ಯಾಮೆರಾ, 2MP ಡೆಪ್ತ್, 2MP ಮ್ಯಾಕ್ರೋ ಕ್ಯಾಮೆರಾ ಜೊತೆಗೆ f/1.9 ಅಪರ್ಚರ್ ಜೊತೆಗೆ ಹಿಂದಿನ ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಹೊಂದಿವೆ. ಈ ರೆಡ್ಮಿ ನೋಟ್ 11 ಎಸ್ ಸ್ಮಾರ್ಟ್​​ಫೋನ್ ಇದು 1080×2400 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.43-ಇಂಚಿನ ಪೂರ್ಣ HD ಡಿಸ್ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹೆಲಿಯೊ ಜಿ96 ಆಕ್ಟಾ-ಕೋರ್ ಚಿಪ್‌ಸೆಟ್‌ನಲ್ಲಿ ಕೆಲಸ ನಿರ್ವಹಿಸಲಿದೆ.

ರೆಡ್ಮಿ ನೋಟ್​ 11 ಸ್ಮಾರ್ಟ್​ಫೋನ್​ ಅನ್ನು ರೂ 13,499 ಕ್ಕೆ ಬಿಡುಗಡೆ ಮಾಡಲಾಯಿತು ಮತ್ತು ಪ್ರಸ್ತುತ ಇದು ಮಾರುಕಟ್ಟೆಯಲ್ಲಿ 12, 999ರೂ.ಗೆ ದೊರೆಯಲಿದೆ. ಇದೇ ರೀತಿ, ರೆಡ್ಮಿ ನೋಟ್ 11 ಎಸ್ ಸ್ಮಾರ್ಟ್​​ಫೋನ್​ ಅನ್ನು ರೂ 16,499 ಕ್ಕೆ ಬಿಡುಗಡೆ ಮಾಡಲಾಗಿತ್ತು ಪ್ರಸ್ತುತ ರೂ 15,999 ನಲ್ಲಿ ಲಭ್ಯವಿದೆ. Redmi Note 11 ಮತ್ತು Redmi Note 11S ಸ್ಮಾರ್ಟ್​​ಫೋನ್​ಗಳು ಮೂರು ವಿಧಗಳಲ್ಲಿ ದೊರೆಯಲಿವೆ.

ರೆಡ್ಮಿ ನೋಟ್ 11 ಸ್ಮಾರ್ಟ್​ಫೋನ್ 6.43-ಇಂಚಿನ ಪೂರ್ಣ HD+ ಡಿಸ್ಪ್ಲೇ ಯನ್ನು ಹೊಂದಿದೆ. ಇದು Qualcomm Snapdragon 680 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 5,000mAh ಬ್ಯಾಟರಿಯನ್ನು ಹೊಂದಿದ್ದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸ್ಮಾರ್ಟ್​ಫೋನ್ ಹಿಂಭಾಗದಲ್ಲಿ 50MP ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಸೆಲ್ಫಿಗಾಗಿ ಮುಂಭಾಗದಲ್ಲಿ 13MP ಕ್ಯಾಮೆರಾ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಹರೈಸನ್ ಬ್ಲೂ, ಸ್ಪೇಸ್ ಬ್ಲ್ಯಾಕ್ ಮತ್ತು ಸ್ಟಾರ್‌ಬರ್ಸ್ಟ್ ವೈಟ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

ರೆಡ್ಮಿ ನೋಟ್​ 11 ಸ್ಮಾರ್ಟ್​ಫೋನ್​ನ 4GB+64GB ಸ್ಟೋರೇಜ್ ಹೊಂದಿದ ಮೊಬೈಲ್​ನ ಬೆಲೆ ರೂ.500 ಕಡಿಮೆ ಮಾಡಲಾಗಿದ್ದು, ಇದು ಪ್ರಸ್ತುತ ರೂ 12,999 ಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಮಾದರಿಯ 6GB+64GB ರೂಪಾಂತರದ ಬೆಲೆಯೂ ರೂ.500 ಕಡಿಮೆಯಾಗಿದೆ. ಈ ಮಾದರಿಯನ್ನು ಈಗ ರೂ.13,499ಕ್ಕೆ ಪಡೆಯಬಹುದಾಗಿದೆ.

6GB+128GB ಈ ಸ್ಮಾರ್ಟ್‌ಫೋನ್‌ನ ಪ್ರೀಮಿಯಂ ರೂಪಾಂತರದ ಮೇಲೆ ಕಂಪನಿಯು ರೂ.500 ಬೆಲೆ ಕಡಿಮೆ ಮಾಡಿರುವುದಾಗಿ ಘೋಷಿಸಿದೆ. ಈಗ ಈ ಫೋನ್ ರೂ.14,499ಕ್ಕೆ ಮಾರುಕಟ್ಟೆಯಲ್ಲಿ ದೊರೆಯಲಿವೆ.

Leave A Reply

Your email address will not be published.