Pass Port : ಈ ಕ್ರಮ ಅನುಸರಿಸಿ ಅರ್ಜಿ ಸಲ್ಲಿಸಿದರೆ ಬೇಗನೆ ಕೈ ಸೇರುತ್ತದೆ ಪಾಸ್ ಪೋರ್ಟ್

Share the Article

ನಿಮಗೆ ಜೀವನದಲ್ಲಿ ಒಮ್ಮೆಯಾದರೂ ವಿದೇಶ ಪ್ರಯಾಣ ಮಾಡಬೇಕು ಎನ್ನುವ ಆಸೆ ಇದ್ದರೆ ನಿಮಗೆ ಪಾಸ್ ಪೋರ್ಟ್ ಅವಶ್ಯಕತೆ ಇದ್ದೇ ಇರುತ್ತದೆ. ಹೌದು ವಿದೇಶ ಪ್ರವಾಸ ಮಾಡಬೇಕಾದರೆ ಅತಿ ಮುಖ್ಯವಾಗಿ ನಿಮ್ಮ ಬಳಿ ಪಾಸ್ ಪೋರ್ಟ್ ಇರಬೇಕು. ಪಾಸ್ ಪೋರ್ಟ್ ಇಲ್ಲದೆ ಹೋದರೆ ವಿದೇಶ ಪ್ರಯಾಣ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ದೇಶವೂ ವಿಭಿನ್ನ ಪಾಸ್‌ಪೋರ್ಟ್‌ಗಳನ್ನು ಹೊಂದಿರುತ್ತದೆ. ಇನ್ನು ನಮ್ಮ ಗುರುತನ್ನು ರುಜು ಮಾಡಲು ಕೂಡಾ ಪಾಸ್‌ಪೋರ್ಟ್‌ ಅಗತ್ಯವಾಗಿರುತ್ತದೆ. ಹೊಸ ಪಾಸ್‌ಪೋರ್ಟ್‌ಗಳನ್ನು ಪಡೆಯಬೇಕಾದರೆ ಅದಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗೆ ಹೊಸ ಪಾಸ್‌ಪೋರ್ಟ್‌ ಗಾಗಿ ಪ್ರತಿ ನಿತ್ಯ ಸಾವಿರಾರು ಅರ್ಜಿಗಳನ್ನು ಸಲ್ಲಿಸಲಾಗುತ್ತದೆ.
ಅದಲ್ಲದೆ ಒಂದು ಪಾಸ್ ಪೋರ್ಟ್ ಅರ್ಜಿ ಸಲ್ಲಿಸಿ ತಿಂಗಳು ಗಟ್ಟಲೆ ಕಾಯಬೇಕಾಗುತ್ತದೆ. ಮತ್ತು ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆಯ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇರುವುದಿಲ್ಲ.

ನೀವಿನ್ನು ವಿದೇಶ ಪ್ರಯಾಣ ಮಾಡಲು ಪಾಸ್ ಪೋರ್ಟ್ ಬಗ್ಗೆ ಚಿಂತೆ ಮಾಡಬೇಕಿಲ್ಲ. ಪಾಸ್ ಪೋರ್ಟ್ ಪಡೆಯಲು ಸುಲಭ ವಿಧಾನ ಈ ಕೆಳಗಿದೆ.

ಪಾಸ್‌ಪೋರ್ಟ್‌ ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ :

  • ಪಾಸ್‌ಪೋರ್ಟ್ ಪಡೆಯಬೇಕಾದರೆ ಆನ್‌ಲೈನ್‌ನಲ್ಲಿ ಸಹ ಅರ್ಜಿ ಸಲ್ಲಿಸಬಹುದು. ಭಾರತೀಯ ಪ್ರಜೆಯಾಗಿದ್ದು, ಭಾರತದ ಪಾಸ್‌ಪೋರ್ಟ್ ಪಡೆಯಲು ಬಯಸುವುದಾದರೆ, ಈ ಕೆಳಗಿನ ಪ್ರಕ್ರಿಯೆಯ ಅಡಿಯಲ್ಲಿ ಆನ್‌ಲೈನ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.

ಈ ಹಂತಗಳನ್ನು ಅನುಸರಿಸಿ :

  • ಮೊದಲಿಗೆ ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಿ.
  • ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಿದ ನಂತರ ಲಾಗಿನ್ ಮಾಡಿ.
  • “Apply for Background Verification for GEP ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಅರ್ಜಿಯಲ್ಲಿ ಕೋರಿದ ಮಾಹಿತಿಯನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿ.
  • ನಂತರ, Pay and Schedule Appointment” ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನೀವು ಅಪಾಯಿಂಟ್‌ಮೆಂಟ್ ಬುಕ್ ಮಾಡಲು ಬಯಸುವ ಸ್ಥಳವನ್ನು ಆಯ್ಕೆಮಾಡಿ.
  • ಅಪಾಯಿಂಟ್‌ಮೆಂಟ್ ಬುಕಿಂಗ್‌ಗಾಗಿ ಆನ್‌ಲೈನ್ ಪಾವತಿ ಮಾಡಿ.
  • “Print Application Receipt” ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.
  • ಮೊಬೈಲ್ ನಲ್ಲಿ ಕೂಡಾ ಅಪಾಯಿಂಟ್ ಮೆಂಟ್ ಮೆಸೇಜ್ ಬರುತ್ತದೆ. ಆ ಮೆಸೇಜ್ ಅನ್ನು ಸೇವ್ ಮಾಡಿಟ್ಟುಕೊಳ್ಳಿ.
  • ನಂತರ ನಿಮ್ಮ ಮೂಲ ದಾಖಲೆಗಳೊಂದಿಗೆ ನೀವು ಅಪಾಯಿಂಟ್‌ಮೆಂಟ್ ಬುಕ್ ಮಾಡಿದ ಸ್ಥಳದ ಪಾಸ್‌ಪೋರ್ಟ್ ಸೇವಾ ಕೇಂದ್ರ / ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಗುರುತನ್ನು ಪರಿಶೀಲಿಸಲಾಗುತ್ತದೆ.
    •ನಂತರ ಪೊಲೀಸ್ ವೆರಿಫಿಕೇಶನ್ ನಡೆಯಲಿದ್ದು, ಅಲ್ಲಿ ಎಲ್ಲವೂ ಸರಿಯಾಗಿದ್ದರೆ ಕೆಲವೇ ದಿನಗಳಲ್ಲಿ ಪಾಸ್ ಪೋರ್ಟ್ ನಿಮ್ಮ ಮನೆಗೆ ಬರಲಿದೆ.

ಈ ರೀತಿಯಾಗಿ ಪಾಸ್ ಪೋರ್ಟ್ ಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಶೀಘ್ರದಲ್ಲಿ ಪಾಸ್ ಪೋರ್ಟ್ ಪಡೆದು ವಿದೇಶ ಪ್ರವಾಸ ಕೈಗೊಳ್ಳಬಹುದು.

Leave A Reply