FlipKart Moto Days Sale : ‘ಮೋಟೋ ಡೇಸ್ ಸೇಲ್’ ಫ್ಲಿಪ್ ಕಾರ್ಟ್ ನಲ್ಲಿ ಭರ್ಜರಿ ಆಫರ್! ಒಂದು ತಿಂಗಳವರೆಗೆ, ಈ ಅವಕಾಶ ನಿಮ್ಮದಾಗಿಸಿಕೊಳ್ಳಿ!
ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬ ಜೊತೆಗೆ ಹೊಸ ವರ್ಷ ಶುರುವಾಗುವ ಮೊದಲೇ ಗ್ರಾಹಕರಿಗೆ ಇಕಾಮರ್ಸ್ ವೆಬ್ಸೈಟ್ಗಳಾದ ಅಮೆಜಾನ್, ಫ್ಲಿಪ್ಕಾರ್ಟ್ಗಳು ಹೊಸ ಆಫರ್ ನೀಡಲು ಮುಂದಾಗಿದೆ. ಗ್ರಾಹಕರಿಗೆ ಪ್ರತಿ ಬಾರಿ ಏನಾದರೊಂದು ಉತ್ಪನ್ನಗಳ ಮೇಲೆ ಕೊಡುಗೆಯನ್ನು ನೀಡಿ ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಹಾಗಾಗಿ, ಗ್ರಾಹಕರು ಆನ್ಲೈನ್ ಮೂಲಕ ತಾವು ಬಯಸಿದ ಬ್ರಾಂಡ್ ವಸ್ತುಗಳ ಖರೀದಿಗೆ ಮುಂದಾಗುತ್ತಾರೆ.
ಮೋಟೋ ಕಂಪನಿಯ ಸ್ಮಾರ್ಟ್ಫೋನ್ಗಳು ಉತ್ತಮ ಫೀಚರ್ಸ್ ಅನ್ನು ಹೊಂದಿದ್ದು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಫ್ಲಿಪ್ಕಾರ್ಟ್ ತನ್ನ ಬ್ರಾಂಡ್ ಮೂಲಕ ಮೋಟೋ ಸ್ಮಾರ್ಟ್ಫೋನ್ಗಳನ್ನು ಭಾರೀ ಆಫರ್ನೊಂದಿಗೆ ಮಾರಾಟ ಮಾಡುತ್ತಿದ್ದು, ಇ ಕಾಮರ್ಸ್ ವೆಬ್ಸೈಟ್ಗಳು ಸಾಮಾನ್ಯವಾಗಿ ಹೆಚ್ಚಿನ ಆಫರ್ ನೀಡುತ್ತಾ ಜನರ ಮನ ಸೆಳೆಯುವಲ್ಲಿ ನಿರತವಾಗಿದ್ದು , ಇದೀಗ ಫ್ಲಿಪ್ಕಾರ್ಟ್ ಮೋಟೋ ಡೇಸ್ ಮಾರಾಟ ಮಾಡಲು ಮುಂದಾಗಿದೆ.
ಈ ಸೇಲ್ ಡಿಸೆಂಬರ್ 1 ರಿಂದ ಆರಂಭವಾಗಿದ್ದು, 5ರವರೆಗೆ ನಡೆಯಲಿದ್ದು, ಈ ಸೇಲ್ ನಲ್ಲಿ ವಿವಿಧ ಮೋಟೋ ಸ್ಮಾರ್ಟ್ ಫೋನ್ ನಲ್ಲಿ ಬಂಪರ್ ಆಫರ್ ಗಳು ಗ್ರಾಹಕರಿಗೆ ಸಿಗಲಿವೆ. ಹೌದು..ಮೋಟೋ ಜಿ52 ಸ್ಮಾರ್ಟ್ಫೋನ್ನಲ್ಲಿ ಫ್ಲಿಪ್ಕಾರ್ಟ್ ಅತಿದೊಡ್ಡ ಕೊಡುಗೆಯನ್ನು ನೀಡುತ್ತಿದ್ದು, ಈ ಫೋನಿನ ಮೇಲೆ 5 ಸಾವಿರ ರೂಪಾಯಿಗಿಂತಲೂ ಹೆಚ್ಚಿನ ರಿಯಾಯಿತಿ ಗ್ರಾಹಕರಿಗೆ ದೊರೆಯಲಿವೆ.
ಈ ಮೋಟೋರೊಲಾ ಜಿ52 ಮೆಟಾಲಿಕ್ ವೈಟ್ 128 GB ಸ್ಟೋರೇಜ್ ಮತ್ತು 6 GB ರ್ಯಾಮ್ ಫೋನ್ ಮೂಲ ಬೆಲೆ 19,999 ರೂಪಾಯಿಯಾಗಿದ್ದು, ಈ ಮೋಟೋ 8ಜಿ 52 ಸ್ಮಾರ್ಟ್ಫೋನ್ 30 ಪ್ರತಿಶತ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಅಂದರೆ 6 ಸಾವಿರ ರೂಪಾಯಿಯ ರಿಯಾಯಿತಿಯೊಂದಿಗೆ 13,999 ರೂಪಾಯಿಗೆ ಯಾರು ಬೇಕಾದರೂ ಖರೀದಿ ಮಾಡಬಹುದಾದ ಸುವರ್ಣ ಅವಕಾಶ ಕಲ್ಪಿಸಲಾಗಿದೆ.
ಈ ಫೋನ್ ಮೂಲಕ 13,300 ರೂಪಾಯಿಯ ದೊಡ್ಡ ಮಟ್ಟದ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದ್ದು, ಇಷ್ಟೇ ಅಲ್ಲದೆ, ಈ ಆಫರ್ ನಿಮ್ಮ ಸ್ಮಾರ್ಟ್ಫೊನ್ಗೆ ಅನ್ವಯಿಸಿದರೆ, ನೀವು 699 ರೂಪಾಯಿಗೆ ಸ್ಮಾರ್ಟ್ಫೋನ್ ಅನ್ನು ಕೂಡ ಪಡೆಯಬಹುದಾಗಿದೆ. ಇದರ ಜೊತೆಗೆ, ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನೊಂದಿಗೆ ಹೆಚ್ಚುವರಿ 5 ಪ್ರತಿಶತ ರಿಯಾಯಿತಿಯು ಕೂಡ ದೊರೆಯಲಿದೆ.
ಅದೇ ರೀತಿ, ಫೋನಿನ 4GB+64 GB ರೂಪಾಂತರದ ವಿಚಾರದ ಕಡೆಗೆ ಗಮನ ಹರಿಸಿದರೆ, ಈ ಸ್ಮಾರ್ಟ್ಫೋನಿನ ಮೂಲ ಬೆಲೆ 12,999 ರೂಪಾಯಿಯಾಗಿದ್ದು, ಇದು ಶೇಕಡಾ 27% ರಷ್ಟು ರಿಯಾಯಿತಿ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಮೂಲಕ 5,000 ರೂಪಾಯಿಯ ರಿಯಾಯಿತಿಯೊಂದಿಗೆ 12,999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ, ನೀವು ಈ ಫೋನ್ ಅನ್ನು ಆಕ್ಸಿಸ್ ಬ್ಯಾಂಕ್ ಕಾರ್ಡ್ನೊಂದಿಗೆ ಖರೀದಿಸಿದರೆ, ನೀವು ಹೆಚ್ಚುವರಿ ಶೇಕಡಾ 5% ರಷ್ಟು ರಿಯಾಯಿತಿಯನ್ನು ನಿಮ್ಮದಾಗಿಸಿ ಕೊಳ್ಳ ಬಹುದು.
ಅಷ್ಟೆ ಏಕೆ ಈ ಫೋನ್ ಮೇಲೆ ಭರ್ಜರಿ 12 ಸಾವಿರ ರುಪಾಯಿಯ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದ್ದು, ನೀವು ಈ ಫೋನ್ ಅನ್ನು ಆಕ್ಸಿಸ್ ಬ್ಯಾಂಕ್ ಕಾರ್ಡ್ನೊಂದಿಗೆ ಖರೀದಿ ಮಾಡಿದರೆ, ನೀವು ಹೆಚ್ಚುವರಿ ಶೇಕಡಾ 5% ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ. ನೀವು ಕೂಡ ಮೊಬೈಲ್ ಕೊಳ್ಳುವ ಯೋಜನೆ ಹಾಕಿದ್ದರೆ, ಭರ್ಜರಿ ಕೊಡುಗೆಯ ಮೂಲಕ ಕೈಗೆ ಎಟಕುವ ದರದಲ್ಲಿ ಪಡೆದುಕೊಳ್ಳುವ ಸುವರ್ಣ ಅವಕಾಶ ಕಲ್ಪಿಸಲಾಗಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬಹುದು.