Janani Suraksha Yojana : ಗರ್ಭಿಣಿಯರೇ ಈ ಯೋಜನೆಯಡಿ ಪಡೆಯಿರಿ 6 ಸಾವಿರ ಪಡೆಯಿರಿ, ಹೇಗೆ ?

ಕೇಂದ್ರ ಸರ್ಕಾರವು ಜನತೆಯ ಏಳಿಗೆಯ ದೃಷ್ಟಿಕೋನವನ್ನು ಕೇಂದ್ರೀಕರಿಸಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. . ಪುಟ್ಟ ಮಗುವಿನಿಂದ ಹಿಡಿದು ಹಿರಿಯ ನಾಗರಿಕರವರೆಗೂ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಇದೇ ರೀತಿ, ಗರ್ಭಿಣಿಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಯೋಜನೆಯೊಂದನ್ನು ಜಾರಿಗೆ ತಂದಿದೆ.

ಈ ಯೋಜನೆಯ ನೆರವಿನಿಂದ ಜನರು ಆರ್ಥಿಕ ಸಹಾಯವನ್ನು ಪಡೆಯಲು ಅನುವು ಮಾಡಿಕೊಟ್ಟಿದೆ. ಇದು ನೇರವಾಗಿ ಇಲ್ಲವೇ ಸಾಲದ ಮೂಲಕ ಯೋಜನೆಯ ಮೊತ್ತವನ್ನು ಪಡೆಯಬಹುದಾಗಿದೆ. ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಜಾರಿ ಮಾಡಿರುವ ಈ ಯೋಜನೆಯಲ್ಲಿ ಗರ್ಭಿಣಿಯರು ಆರು ಸಾವಿರ ರೂಪಾಯಿಯನ್ನು ಪಡೆಯಬಹುದಾಗಿದೆ.

ಈ ಯೋಜನೆಯನ್ನು ಶಿಶುವಿನ ಆರ್ಥಿಕ ಸುರಕ್ಷತೆಗಾಗಿ ಆರಂಭ ಮಾಡಲಾಗಿದೆ. ಈ ಯೋಜನೆ ಪ್ರಮುಖವಾಗಿ ಶಿಶುವಿನ ಆರೋಗ್ಯಕ್ಕಾಗಿ, ಗರ್ಭಿಣಿಯರ ಚಿಕಿತ್ಸೆಗಾಗಿ ಈ ಆರು ಸಾವಿರ ರೂಪಾಯಿಯನ್ನು ಸರ್ಕಾರವು ನೀಡಲಿದೆ.

ಜನನಿ ಸುರಕ್ಷ ಯೋಜನೆಯಡಿಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಗರ್ಭಿಣಿ ಮಹಿಳೆಯರು ಆರ್ಥಿಕ ಸಹಾಯವನ್ನು ಪಡೆಯಬಹುದ್ದಾಗಿದ್ದು ಸರ್ಕಾರದಿಂದ ಪರವಾನಗಿ ಪಡೆದಿರುವ ಖಾಸಗಿ ಆಸ್ಪತ್ರೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಯೋಜನೆ ದೊರೆಯಲಿದೆ. ಬೇರೆ ಆಸ್ಪತ್ರೆಗಳಲ್ಲಿ ಶಿಶುವಿಗೆ ಜನನ ನೀಡಿದರೆ ಈ ಯೋಜನೆಯು ಅನ್ವಯವಾಗುವುದಿಲ್ಲ. ಇದನ್ನು ಹೊರತುಪಡಿಸಿ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿಯಲ್ಲಿ 1ನೇ ತಿಂಗಳಿನಿಂದ 9ನೇ ತಿಂಗಳವರೆಗೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

ಆರ್ಥಿಕವಾಗಿ ಹಿಂದುಳಿದಿರುವ ಅಥವಾ ಕಡಿಮೆ ಆದಾಯವಿರುವ ಕುಟುಂಬಕ್ಕೆ ಸೇರಿದ ಮಹಿಳೆಯರಿಗೆ ಮಾತ್ರ ಈ ಯೋಜನೆಯ ಫಲಾನುಭವಿಗಳಾಗಬಹುದಾಗಿದೆ.

ಜನನಿ ಸುರಕ್ಷ ಯೋಜನೆಯ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗುತ್ತದೆ. ಅದೇ ರೀತಿ ಆಧಾರ್ ಕಾರ್ಡ್, ವೋಟರ್ ಐಡಿ, ಶಿಶುವಿನ ಜನನ ಪ್ರಮಾಣಪತ್ರವನ್ನು ಹೊಂದಿರಬೇಕಾಗಿದ್ದು, ಈ ಯೋಜನೆಯ ಅರ್ಜಿಯೊಂದಿಗೆ ಈ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಈ ಅರ್ಜಿ ಅನುಮೋದನೆಯಾದ ಬಳಿಕವಷ್ಟೆ ಯೋಜನೆಯ ಫಲಾನುಭವ ಲಭ್ಯವಾಗಲಿದೆ.ನೀವು ಆಶಾ ಕಾರ್ಯಕರ್ತೆಯರ ನೆರವಿಂದ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬಹುದು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ಲಭ್ಯವಾಗುವಂತೆ ಮಾಡುವ ಜೊತೆಗೆ ಡೇಟ್ ಅಪ್‌ಡೇಟ್ , ಗರ್ಭಿಣಿಯರಿಗೆ ಅಥವಾ ಬಾಣಂತಿಯರಿಗೆ ಈ ಬಗ್ಗೆ ಮಾಹಿತಿ ನೀಡುವುದು ಆಶಾ ಕಾರ್ಯಕರ್ತರ ಜವಾಬ್ದಾರಿಯಾಗಿದೆ.

ಈ ಯೋಜನೆಯ ಲಾಭವನ್ನು ಪಡೆಯಲು ಬಯಸುವವರು ಗ್ರಾಮ ಪಂಚಾಯತ್‌ ಮೂಲಕ ಆಶಾ ಕಾರ್ಯಕರ್ತೆಯರನ್ನು ಸಂಪರ್ಕ ಮಾಡಬಹುದಾಗಿದ್ದು, ಹಾಗೆಯೇ ಗ್ರಾಮದ ಮುಖ್ಯಸ್ಥರು ಕೂಡಾ ಆಶಾ ಕಾರ್ಯಕರ್ತೆಯರಿಗೆ ಈ ಬಗ್ಗೆ ಮಾಹಿತಿ ನೀಡಬಹುದಾಗಿದೆ.

Leave A Reply

Your email address will not be published.