Honda Car : ಹೊಸ ಕಾರು ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಿದ್ರೆ ಈ ಆಫರ್​ ಬಗ್ಗೆ ನೀವು ತಿಳಿದುಕೊಳ್ಳಿ | ಕಣ್ಮನ ಸೆಳೆಯೋ ಸೂಪರ್‌ ಅವಕಾಶ ನಿಮಗಾಗಿ

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹೊಸ ಕಾರುಗಳ‌ ಬಿಡುಗಡೆ ಮೂಲಕ ಪೈಪೋಟಿ ನಡೆಯುತ್ತಿದೆ. ಒಂದಕ್ಕಿಂತ ಒಂದು ಅತ್ಯುತ್ತಮ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಹಾಗೇ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಕಾರಿನ ಮೇಲೆ ಬಂಪರ್ ಆಫರ್ ಬಿಡಲಾಗುತ್ತಿದೆ. ಇದೀಗ ಉತ್ತಮ ಆಫರ್ ನಿಮ್ಮ ಮುಂದಿದೆ. ನೀವು ಹೊಸ ಕಾರು ಖರೀದಿ ಮಾಡಬೇಕು ಅಂದುಕೊಂಡಿದ್ದರೆ ಇಲ್ಲಿದೆ ಬಂಪರ್ ಆಫರ್ ನಿಮಗಾಗಿ.

ಪ್ರಮುಖ ಕಾರು ಉತ್ಪಾದನಾ ಕಂಪನಿಗಳಲ್ಲಿ ಒಂದಾದ ಹೋಂಡಾ ಕಾರ್ಸ್ ಇಂಡಿಯಾ ಕಾರುಗಳ ಮೇಲೆ ಆಫರ್ ನೀಡಿದೆ. ಡಿಸೆಂಬರ್ ತಿಂಗಳಿಗೆ ಕಾರು ರಿಯಾಯಿತಿ ಕೊಡುಗೆಗಳನ್ನು ಘೋಷಿಸಲಾಗಿದೆ. ಇನ್ನೂ ಕಾರು ಖರೀದಿಸುವ ಯೋಜನೆ ಹಾಕಿ, ಯೋಚನೆಯಲ್ಲಿ ಇರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಹೋಂಡಾ ಕಾರಿನ ರಿಯಾಯಿತಿ ಎಷ್ಟಿದೆ ಎಂದರೆ, ಈ ತಿಂಗಳು ರೂ. 72 ಸಾವಿರದವರೆಗೆ ಇದೆ. ಆದರೆ ಈ ರಿಯಾಯಿತಿ ಕಾರಿನ ಮಾದರಿ, ರೂಪಾಂತರ, ಡೀಲರ್‌ಶಿಪ್, ಆಧಾರದ ಮೇಲೆ ನಿರ್ಧರಿತವಾಗಿದೆ. ನೀವೇನಾದರೂ ಹೊಸ ಹೋಂಡಾ ಕಾರು ಖರೀದಿಸುವ ಯೋಚನೆಯಲ್ಲಿದ್ದರೆ, ಹತ್ತಿರದ ಶೋರೂಮ್‌ಗೆ ಹೋಗಿ ಆಫರ್‌ನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದು ಉತ್ತಮ. ಇನ್ನೂ ಈ ಆಫರ್‌ ಡಿಸೆಂಬರ್ 31 ರವರೆಗೆ ಮಾತ್ರ ಲಭ್ಯವಿದೆ. ನಂತರ ಮುಕ್ತಾಯವಾಗಲಿದೆ. ಯಾವ ಕಾರುಗಳ‌ ಮೇಲೆ ಆಫರ್ ಇವೆ ಎಂಬ ಕುತೂಹಲವೇ? ಹಾಗಾದ್ರೆ ಈ ಕೆಳಗಿನ ಮಾಹಿತಿಯನ್ನು ತಿಳಿಯೋಣ.

ಮೊದಲಾಗಿ ಹೋಂಡಾ WRV ಮಾದರಿ. ಇದು ರೂ. 72,340 ರ ರಿಯಾಯಿತಿಯಲ್ಲಿ ಲಭ್ಯವಿದೆ. ಇದರಲ್ಲಿ ನಗದು ರಿಯಾಯಿತಿ ರೂ. 30 ಸಾವಿರದವರೆಗೂ ಇದೆ. ಅಥವಾ ರೂ. 35,340 ಮೌಲ್ಯದ ಉಚಿತ ಬಿಡಿಭಾಗಗಳು. ಅಷ್ಟೇ ಅಲ್ಲದೆ, ಗ್ರಾಹಕರು ಇದನ್ನು ರೂ. 20 ಸಾವಿರದವರೆಗೆ ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ. ಲಾಯಲ್ಟಿ ಬೋನಸ್ ಅಡಿಯಲ್ಲಿ ಹಾಗೂ ಕಾರ್ಪೊರೇಟ್ ರಿಯಾಯಿತಿಯಲ್ಲಿ ಹೋಂಡಾ ಗ್ರಾಹಕರಿಗೆ ಕೇವಲ ರೂ. 5 ಸಾವಿರಕ್ಕೆ ಲಭ್ಯವಿದೆ. ಜೊತೆಗೆ ಹೋಂಡಾ ಕಾರು ವಿನಿಮಯ ಬೋನಸ್ ರೂ. 7 ಸಾವಿರದವರೆಗೆ ಇದೆ.

ಇನ್ನೂ, ಹೋಂಡಾ ಸಿಟಿ 4ನೇ ತಲೆಮಾರಿನ ಕಾರಿನ ರಿಯಾಯಿತಿ ಬೆಲೆ ಎಷ್ಟೆಂದರೆ, ರೂ. 72,145 ಆಗಿದೆ. ಹಾಗೂ ನಗದು ರಿಯಾಯಿತಿ ರೂ. 30 ಸಾವಿರವಿದೆ. ಅಥವಾ ರೂ. 32,145 ಮೌಲ್ಯದ ಉಚಿತ ಬಿಡಿಭಾಗಗಳು. ಇದರ ಕಾರ್ಪೊರೇಟ್ ರಿಯಾಯಿತಿ ರೂ. 8 ಸಾವಿರವಿದೆ. ಲಾಯಲ್ಟಿ ಬೋನಸ್ ಮತ್ತು ವಿನಿಮಯ ಬೋನಸ್ ರೂ. 5 ಸಾವಿರದವರೆಗೆ ಪಡೆಯಬಹುದು. ಇನ್ನೂ ಎಕ್ಸ್ ಚೇಂಜ್ ಆಫರ್ ಅಡಿಯಲ್ಲಿ ರೂ.20 ಸಾವಿರ ರಿಯಾಯಿತಿ ಸಿಗಲಿದೆ.

ಹೋಂಡಾ ಅಮೇಜ್ ಕಾರು. ಇದರ ಮೇಲೆ ವರ್ಷಾಂತ್ಯದ ರಿಯಾಯಿತಿ ರೂ. 43,144 ರಷ್ಟು ಪಡೆಯಬಹುದು. ಹಾಗೂ ನಗದು ರಿಯಾಯಿತಿ ರೂ. 10 ಸಾವಿರದವರೆಗೆ ಇದೆ. ಅಥವಾ ರೂ. 12,144 ಮೌಲ್ಯದ ಉಚಿತ ಬಿಡಿಭಾಗಗಳು. ಇದಿಷ್ಟೇ ಅಲ್ಲದೆ, ಕಾರ್ ಎಕ್ಸ್ ಚೇಂಜ್ ಆಫರ್ ಅಡಿಯಲ್ಲಿ ಸುಮಾರು ರೂ. 20 ಸಾವಿರದವರೆಗೆ ರಿಯಾಯಿತಿ ಕೂಡ ಇದೆ. ಲಾಯಲ್ಟಿ ಬೋನಸ್ ಅಡಿಯಲ್ಲಿ ರೂ. 5 ಸಾವಿರ ಮತ್ತು ಕಾರ್ಪೊರೇಟ್ ರಿಯಾಯಿತಿ ರೂ. 6 ಸಾವಿರಕ್ಕೆ ಲಭ್ಯವಿದೆ.

ಕೊನೆಯದಾಗಿ ಹೋಂಡಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ . ಈ ಕಾರುಗಳು ಜಾಝ್‌ನಲ್ಲಿ ಕೂಡ ಆಫರ್ ಇದೆ. ಈ ಕಾರಿನ ಮೇಲೆ ರೂ. 37 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ. ನಗದು ರಿಯಾಯಿತಿ ರೂ. 10 ಸಾವಿರದವರೆಗೆ ಇದೆ. ಅಥವಾ ರೂ. 12 ಸಾವಿರದವರೆಗಿನ ಉಚಿತ ಬಿಡಿಭಾಗಗಳನ್ನು ಪಡೆಯಬಹುದು. ಕಾರು ವಿನಿಮಯ ಕೊಡುಗೆ ಅಡಿಯಲ್ಲಿ ರೂ. 10 ಸಾವಿರದವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಇದರ ಲಾಯಲ್ಟಿ ಬೋನಸ್ ರೂ. 5 ಸಾವಿರವರೆಗೆ ಲಭ್ಯವಿದೆ. ಇಷ್ಟೆಲ್ಲಾ ಉತ್ತಮ, ಆಕರ್ಷಕ ಆಫರ್ ಗಳಿವೆ ಹಾಗಾದ್ರೆ ಈ ಅವಕಾಶ ಮಿಸ್ ಮಾಡ್ಕೊಳ್ಬೇಡಿ. ಆಫರ್ ನಲ್ಲಿ ಕಾರು ಖರೀದಿಸಿ, ನಿಮ್ಮದಾಗಿಸಿ.

Leave A Reply

Your email address will not be published.