ʼಸೆಕ್ಸ್‌ʼ ನಿಂದಾಗಿ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ…

ಇಂದಿನ ಆಧುನಿಕ ಯುಗದಲ್ಲಿ ಜನ ಎಷ್ಟು ಯಾಂತ್ರಿಕವಾಗಿ ಕೆಲಸ ಮಾಡುತ್ತಾರೆಂದರೆ, ಕೆಲಸ ಮಾಡಿ ಮಾಡಿ ನಂತರ ಮನೆಗೆ ಹಿಂದಿರುಗಿದಾಗ ನಿಜಕ್ಕೂ ದಣಿದು ಊಟ ಮಾಡಿ ನಿದ್ದೆಗೆ ಜಾರಿದರೆ ಸಾಕಪ್ಪ ಎಂಬ ಆಲೋಚನೆ ಮೊದಲು ಓಡುತ್ತೆ. ಈ ಪ್ರಕ್ರಿಯೆ ನಿಜಕ್ಕೂ ಅನೇಕ ಜನರ ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. ಒತ್ತಡ ಮತ್ತು ಆತಂಕದ ಕಾರಣದಿಂದ ಅನೇಕ ಜನರು ಲೈಂಗಿಕತೆಯನ್ನು ನಿರ್ಲಕ್ಷಿಸುತ್ತಾರೆ. ಆದರೆ ಲೈಂಗಿಕತೆಯು ಆರೋಗ್ಯದ ದೃಷ್ಟಿಯಿಂದ ತುಂಬಾ ಉತ್ತಮ. ಹೇಗೆ ಅಂತೀರಾ ? ಲೈಂಗಿಕತೆಯ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಲೈಂಗಿಕತೆಯನ್ನು ಪ್ರತಿನಿತ್ಯ ಮಾಡುವುದು ಒಂದು ಉತ್ತಮ ವ್ಯಾಯಾಮಕ್ಕಿಂತ ಬೇರೆ ಅಲ್ಲ. ಏಕೆಂದರೆ ಈ ಸಂಭೋಗದ ಸಮಯದಲ್ಲಿ ವ್ಯಕ್ತಿಯು ದೀರ್ಘವಾದ ಉಸಿರಾಟವನ್ನು ತೆಗೆದುಕೊಳ್ಳುತ್ತಾನೆ. ಇದರಿಂದಾಗಿ ಆಮ್ಲಜನಕವು ಶ್ವಾಸಕೋಶವನ್ನು ಸುಲಭವಾಗಿ ತಲುಪುತ್ತದೆ, ಇದು ಮನಸ್ಸನ್ನು ಶಾಂತವಾಗಿರಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಸಹ ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ.

ನೀವು ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಬಯಸಿದರೆ, ಸಂಭೋಗ ಬೆಸ್ಟ್‌ ಎಂದೇ ಹೇಳಬಹುದು. ಏಕೆಂದರೆ ಈ ಸ್ಥೂಲಕಾಯತೆಯನ್ನು ಹೋಗಲಾಡಿಸಲು ನೀವು ಲೈಂಗಿಕತೆಯನ್ನು ಆನಂದಿಸಬೇಕು. ಇದು ಸುಲಭ ಮತ್ತು ಉತ್ತಮ ಮಾರ್ಗವಾಗಿದೆ. ಏಕೆಂದರೆ ಲೈಂಗಿಕತೆಯು ಕ್ಯಾಲೊರಿಗಳನ್ನು ವೇಗವಾಗಿ ಸುಡುತ್ತದೆ. ಸಂಭೋಗದ ಸಮಯದಲ್ಲಿ ಹೃದಯ ಬಡಿತವು ಹೆಚ್ಚಾಗುತ್ತದೆ ಮತ್ತು ಈ ಕಾರಣದಿಂದಾಗಿ ದೇಹದ ಎಲ್ಲಾ ಭಾಗಗಳಲ್ಲಿ ರಕ್ತ ಪರಿಚಲನೆಯು ವೇಗವಾಗಿರುತ್ತದೆ.

ಕೆಲವು ನಿದ್ರೆಯ ಬಗ್ಗೆ ದೂರುತ್ತಾರೆ. ಆದರೆ ಓರ್ವ ಮನುಷ್ಯನಿಗೆ ನಿದ್ರೆ ಬರಬೇಕಾದರೆ ಆತ ಉತ್ತಮ ಲೈಂಗಿಕತೆ ಹೊಂದಿದರೆ ನಿದ್ರೆ ತಾನಿಗಯೇ ಆತನ ಮಡಿಲಿಗೆ ಬೀಳುತ್ತೆ. ಏಕೆಂದರೆ ಲೈಂಗಿಕತೆಯ ನಂತರ ಉತ್ತಮ ಮತ್ತು ಆಳವಾದ ನಿದ್ರೆ ಬರುತ್ತದೆ. ಸಂಶೋಧನೆಯ ಪ್ರಕಾರ, ಈ ನಿದ್ರೆಯು ಸ್ಲೀಪಿಂಗ್ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕಿಂತ 10 ಪಟ್ಟು ಹೆಚ್ಚು ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಲೈಂಗಿಕ ಕ್ರಿಯೆಯು ದೇಹದಲ್ಲಿ ಆಕ್ಸಿಟೋಸಿನ್ ಎಂಬ ಒತ್ತಡ-ನಿವಾರಕ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ಒತ್ತಡವನ್ನು ನಿವಾರಿಸಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ, ಲೈಂಗಿಕವಾಗಿ ಸಕ್ರಿಯವಾಗಿರುವ ಜನರು ಯಾವುದೇ ರೀತಿಯ ಒತ್ತಡವನ್ನು ಉತ್ತಮವಾಗಿ ನಿಭಾಯಿಸಬಲ್ಲರು. ವಾರದಲ್ಲಿ ಎರಡು ಅಥವಾ ಮೂರು ಬಾರಿ ಸಂಭೋಗಿಸುವವರ ದೇಹದಲ್ಲಿ ಇಮ್ಯುನೊಗ್ಲಾಬ್ಯುಲಿನ್ ಎ ಹೆಚ್ಚು ಪ್ರಮಾಣದಲ್ಲಿರುತ್ತದೆ, ಇದು ದೇಹವನ್ನು ಶೀತದಿಂದ ರಕ್ಷಿಸುತ್ತದೆ.ಸಂಭೋಗದಿಂದ, ಇಮ್ಯುನೊಗ್ಲೋಬಿನ್ ಎ ಎಂಬ ಪ್ರತಿಕಾಯವು ದೇಹದಲ್ಲಿ ರೂಪುಗೊಳ್ಳುತ್ತದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಇತರ ಕಾಯಿಲೆಗಳ ಅಪಾಯವನ್ನು 30% ರಷ್ಟು ಕಡಿಮೆ ಮಾಡುತ್ತದೆ ಮತ್ತು ವ್ಯಕ್ತಿಯು ದೀರ್ಘಕಾಲದವರೆಗೆ ಆರೋಗ್ಯವಾಗಿರುತ್ತಾನೆ.

ಸೆಕ್ಸ್‌ ಒಂದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಪುರುಷರಲ್ಲಿ ಈ ಟೆಸ್ಟೋಸ್ಟೆರಾನ್‌ ಮಟ್ಟವು ಲೈಂಗಿಕ ಪ್ರಚೋದನೆಯನ್ನು ಹೆಚ್ಚಿಸುತ್ತದೆ. ಇದು ಶಿಶ್ನದಲ್ಲಿ ವಿಚಲನೆ ಉಂಟು ಮಾಡಿ ಲೈಂಗಿಕ ಕ್ರಿಯೆಯ ರೋಗಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟು ಮಾತ್ರವಲ್ಲ ಇದು ಚರ್ಮಕ್ಕೆ ಅದ್ಭುತವಾದ ಕಾಂತಿಯುತವಾದ ಹೊಳಪನ್ನು ನೀಡುವಲ್ಲಿ ಸಹಾಯ ಮಾಡುತ್ತದೆ. ಮನುಷ್ಯನ ಒತ್ತಡ ನಿವಾರಿಸುವಲ್ಲಿ, ಮನಸ್ಥಿತಿಯನ್ನು ಸುಧಾರಿಸುವಲ್ಲಿ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ನಿದ್ರೆಗೆ ಸಹಕಾರಿ ಈ ಸೆಕ್ಸ್.

Leave A Reply

Your email address will not be published.